/newsfirstlive-kannada/media/post_attachments/wp-content/uploads/2025/01/IND-vs-PAK-News.jpg)
ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಬರೋಬ್ಬರಿ 60 ರನ್ಗಳಿಂದ ಸೋತಿದೆ. ಈ ಹೊತ್ತಲ್ಲೇ ಪಾಕ್ ತಂಡಕ್ಕೆ ಆಘಾತ ಸುದ್ದಿ ಒಂದಿದೆ.
ಇದೇ ತಿಂಗಳು ಫೆಬ್ರವರಿ 23ನೇ ತಾರೀಕಿನಂದು ಟೀಮ್ ಇಂಡಿಯಾ, ಪಾಕ್ ನಡುವಿನ ರೋಚಕ ಪಂದ್ಯ ನಡೆಯಲಿದೆ. ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ. ಇಂತಹ ಸಂದರ್ಭದಲ್ಲೇ ಉತ್ತಮ ಫಾರ್ಮ್‌ನಲ್ಲಿರೋ ಫಖರ್ ಜಮಾನ್ ತೀವ್ರವಾಗಿ ಗಾಯಗೊಂಡ ಪರಿಣಾಮ ಟೂರ್ನಿಯಿಂದ ಔಟ್ ಆಗಿದ್ದು, ಇದು ಪಾಕಿಸ್ತಾಕ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ.
ಫಖರ್ ಜಮಾನ್ಗೆ ಗಾಯ
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಫಖರ್ ಜಮಾನ್ ಗಾಯಗೊಂಡಿದ್ದರು. ಈಗ ಇವರು ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ವರದಿ ಆಗಿದೆ. ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಫಖರ್ ಜಮಾನ್ ದುಬೈಗೆ ಹೋಗುವುದು ಡೌಟ್ ಆಗಿದೆ.
ಇನ್ನು, ಫಖರ್ ಜಮಾನ್ ಫೀಲ್ಡಿಂಗ್ ವೇಳೆ ಬೌಂಡರಿ ಗೆರೆ ಬಳಿ ಹೋಗುತ್ತಿದ್ದ ಚೆಂಡನ್ನು ತಡೆಯಲು ಮುಂದಾದರು. ಈ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಇವರು ಮೈದಾನದಿಂದ ಹೊರ ನಡೆದರು. ಸದ್ಯ ಇವರ ಸ್ಕ್ಯಾನಿಂಗ್ ರಿಪೋರ್ಟ್ ಔಟ್ ಆಗಿದ್ದು, ಈಗಲೇ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಇದನ್ನೂ ಓದಿ:ಟಾಸ್ ಸೋತ ರೋಹಿತ್.. ಪ್ಲೇಯಿಂಗ್ 11ನಲ್ಲಿ ಆಪ್ತ ಶಿಷ್ಯನಿಗೆ ಅವಕಾಶ ಕೊಟ್ಟ ಗಂಭೀರ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ