ಮಗುವಿನ ಮೃತದೇಹ ಸಾಗಿಸಲು ದುಪ್ಪಟ್ಟು ಹಣದ ಬೇಡಿಕೆ
ಇದು ಕಣ್ಣೀರ ಕಥೆ.. ಶವ ಸಾಗಣೆ ಮಾಡಲು ಒಪ್ಪದ ಆಸ್ಪತ್ರೆ ಮಂಡಳಿ
ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿ ಬಸ್ ಏರಿದ ತಂದೆ
ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿ ಬಸ್ನಲ್ಲಿ ಸಾಗಿಸಿದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಶವ ಸಾಗಣೆ ಮಾಡುವ ವಾಹನಕ್ಕೆ ಆಸ್ಪತ್ರೆ ಮಂಡಳಿ ಎರಡಷ್ಟು ಹಣಕ್ಕೆ ಬೇಡಿಕೆ ಇಟ್ಟ ಕಾರಣ ಕೊನೆಗೆ ತಂದೆ ತನ್ನ ಮಗುವಿನ ಮೃತದೇಹವನ್ನು ಬಸ್ನಲ್ಲಿಯೇ ಸಾಗಿಸಿದ್ದಾರೆ.
ದಿಂಡೋರಿಯ ಸಹಜ್ಪುರಿ ನಿವಾಸಿ ಸುನಿಲ್ ಧುರ್ವೆ ಮತ್ತು ಪತ್ನಿ ಜಮ್ನಿ ಬಾಯಿಗೆ ಜೂನ್ 13ರಂದು ಗಂಡು ಮಗು ಜನಿಸಿತ್ತು. ಆದರೆ ಈ ಮಗು ದೈಹಿಕವಾಗಿ ದುರ್ಬಲವಾಗಿತ್ತು. ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿ ಆರೋಗ್ಯವಂತನನ್ನಾಗಿ ಮಾಡಬೇಕು ಎಂಬ ದೃಷ್ಟಿಯಿಂದ ಸುನಿಲ್ ಮಗುವನ್ನು ಜೂನ್ 14ರಂದು ಜಬಲ್ಪುರ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಮಾಹಿತಿಯಂತೆಯೇ ಕರೆದೊಯ್ದು ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಆದರೆ ಜೂನ್ 15ರಂದು ಮಗು ಸಾವನ್ನಪ್ಪಿದೆ.
ಸಾವನ್ನಪ್ಪಿದ ಮಗುವನ್ನು ಡಿಂಡೋರಿಗೆ ತೆಗೆದುಕೊಂಡು ಹೋಗಲು ತಂದೆ ಸುನೀಲ್ ಸರ್ಕಾರಿ ಆಸ್ಪತ್ರೆಯ ಆಡಳಿತ ಮಂಡಳಿ ಬಳಿ ವಾಹನ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಅಧಿಕಾರಿಗಳು ಇದಕ್ಕೆ ಒಪ್ಪಳಿಲ್ಲ. ಕೊನೆಗೆ ಖಾಸಗಿ ವಾಹನ ಕೇಳಿದಾಗ ಬೆಲೆ ದುಪ್ಪಟ್ಟು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸುನೀಲ್ ತನ್ನ ಮಗುವನ್ನು ಚೀಲದಲ್ಲಿ ಸುತ್ತಿ ಬಸ್ ಏರಿದ್ದಾರೆ. ಕಣ್ಣೀರು ಹಾಕುತ್ತಲೇ ಮಗುವಿನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ