ಮಹಾಕುಂಭದಲ್ಲಿ ಚಿಕನ್ ಅಡುಗೆ ತಯಾರಿಸಿದ ಕುಟುಂಬ; ನಾಗಾಸಾಧು ಮಾಡಿದ್ದೇನು?

author-image
Gopal Kulkarni
Updated On
ಮಹಾಕುಂಭದಲ್ಲಿ ಚಿಕನ್ ಅಡುಗೆ ತಯಾರಿಸಿದ ಕುಟುಂಬ; ನಾಗಾಸಾಧು ಮಾಡಿದ್ದೇನು?
Advertisment
  • ಮಹಾಕುಂಭಮೇಳದಲ್ಲಿ ನಡೆಯಿತು ಮತ್ತೊಂದು ಅಹಿತಕರ ಘಟನೆ
  • ಚಿಕನ್ ಅಡುಗೆ ಮಾಡಿದ ಕುಟುಂಬದ ಮೇಲೆ ಸಾಧುವಿನಿಂದ ದಾಳಿ
  • ಅಡುಗೆಯನ್ನು ನೆಲಕ್ಕೆ ಚೆಲ್ಲಿ. ಅವರ ಟೆಂಟ್ ಧ್ವಂಸಗೊಳಿಸಿದ ಬಾಬಾ

ಪ್ರಯಾಗರಾಜ್​ನಲ್ಲಿ ಕುಂಭಮೇಳದ ಪ್ರಸಿದ್ಧಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲಿ ಬಂದು ಗಂಗೆಯಲ್ಲಿ ಮಿಂದು ಪಾವನರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಜನವರಿ 13 ರಿಂದ ಶುರುವಾದ ಕುಂಭಮೇಳದ ಪವಿತ್ರ ಸ್ನಾನ ಇಲ್ಲಿಯವರೆಗೂ ಸರಾಗವಾಗಿ ನಡೆದುಕೊಂಡು ಬಂದಿದೆ. ಆದ್ರೆ, ಇದರ ನಡುವೆ ಅಲ್ಲೊಂದು ಇಲ್ಲೊಂದು ಎನ್ನುವಂತೆ ಅಹಿತಕರ ಘಟನೆಗಳು ನಡೆಯುತ್ತಿವೆ. ಈಗ ಕುಂಭಮೇಳದಲ್ಲಿ ಅಂತಹುದೇ ಒಂದು ಘಟನೆ ನಡೆದಿದೆ. ಕುಂಭಮೇಳಕ್ಕೆ ಬಂದ ಕುಟುಂಭವೊಂದು ಗಂಗೆಯ ದಡದಲ್ಲಿ ಚಿಕನ್ ಅಡುಗೆ ತಯಾರಿಸಿದರು ಎಂದು ಸಾಧು ಒಬ್ಬರು ಕೋಪಗೊಂಡು ಅವರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಇದನ್ನೂ ಓದಿ: ಕನ್ನಡಿ ಹಿಡಿದುಕೊಂಡು ನಿಂತ ಗಂಡ.. ಮೇಕಪ್ ಮಾಡಿಕೊಂಡ ಹೆಂಡತಿ; ಮಹಾಕುಂಭಮೇಳದ ವಿಡಿಯೋ ವೈರಲ್

ಕುಟುಂಬದ ಮೇಳೆ ದಾಳಿ ನಡೆಸಿದ ಸಾಧು ಅವರ ಟೆಂಟ್​ನನ್ನು ಕಿತ್ತು ಎಸೆದಿದ್ದಾರೆ. ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೇ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಧು ಒಬ್ಬರು ಆ ಕುಟುಂಬದ ಮೇಲೆ ದಾಳಿ ನಡೆಸಿದ ತಯಾರಾಗಿದ್ದ ಚಿಕನ್ ಅಡುಗೆಯನ್ನು ನೆಲಕ್ಕೆ ಎಸೆದ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ. ಇದೇ ಸಾಧು ಕೈಯಲ್ಲಿದ್ದ ತಮ್ಮ ಕೋಲಿನಿಂದ ಕುಟುಂಬದ ಟೆಂಟ್​ನ್ನು ಧ್ವಂಸಗೊಳಿಸಿದ ದೃಶ್ಯವೂ ವಿಡಿಯೋದಲ್ಲಿ ಕಂಡು ಬಂದಿದೆ.


">February 1, 2025

ಇದನ್ನೂ ಓದಿ:ವಿಮಾನಗಳ ಟಿಕೆಟ್ ಸೋಲ್ಡ್‌ ಔಟ್.. KKRTC ಇಂದ ಕುಂಭಮೇಳಕ್ಕೆ ವಿಶೇಷ ಬಸ್​ ವ್ಯವಸ್ಥೆ

ಮಹಾಕುಂಭಮೇಳ ಎನ್ನುವುದು ಪವಿತ್ರ ಕ್ಷೇತ್ರ ಇಲ್ಲಿ ನೀವು ಚಿಕನ್ ಬೇಯಿಸಿ ತಿನ್ನುವುದು ಪಾಪಕ್ಕೆ ಸಮ, ಇದು ಒಪ್ಪುವಂತಹದ್ದಲ್ಲ ಎಂದು ಸಾಧು ಅವರನ್ನು ನಿಂದಿಸಿದ್ದಾರೆ. ಅಲ್ಲಿ ಅವರು ಮಾಡಿದ್ದು ತಪ್ಪು ಆದರೆ ಒಬ್ಬ ಸಾಧು ಎನಿಸಿಕೊಂಡವರು ಹೀಗೆ ವರ್ತನೆ ಮಾಡುವುದು ಕೂಡ ಒಪ್ಪಿಕೊಳ್ಳುವಂತದಲ್ಲ. ಹೀಗಾದರೆ ಅವರು ಬಾಬಾ ಹೇಗೆ ಎನಿಸಿಕೊಂಡಾರು. ಸಾಮಾನ್ಯ ಜನರಿಗೆ ಅವರಿಗೆ ವ್ಯತ್ಯಾಸ ಏನು ಉಳಿಯುತ್ತದೆ ಎಂದು ನೆಟ್ಟಿಗರು ಈ ವಿಡಿಯೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment