/newsfirstlive-kannada/media/post_attachments/wp-content/uploads/2024/11/Dhanush.jpg)
ತಮಿಳು ನಟ ಧನುಷ್ ಮತ್ತು ಐಶ್ವರ್ಯ ರಜಿನಿಕಾಂತ್ಗೆ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯವು ಡಿವೋರ್ಸ್ ಮಂಜೂರು ಮಾಡಿದೆ. ಇಬ್ಬರ ಒಮ್ಮತದ ಆಧಾರದ ಮೇಲೆ ವಿಚ್ಛೇದನ ನೀಡಲಾಗಿದೆ. ಈ ಮೂಲಕ ಧನುಷ್-ಐಶ್ವರ್ಯ ದಾಂಪತ್ಯ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾರನ್ನು ಧನುಷ್ ಪ್ರೀತಿಸಿ 2004ರಲ್ಲಿ ಮದುವೆಯಾಗಿದ್ದರು. ಐಶ್ವರ್ಯಾ ಧನುಷ್ಗಿಂತ ದೊಡ್ಡವರಾಗಿದ್ದರೂ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ನಡೆದಿತ್ತು. 2022, ಜನವರಿಯಲ್ಲಿ ಧನುಷ್ ಮತ್ತು ಐಶ್ವರ್ಯ ಸೋಶಿಯಲ್ ಮೀಡಿಯಾದಲ್ಲಿ ದೂರ ಆಗ್ತಿರುವ ಬಗ್ಗೆ ಘೋಷಣೆ ಮಾಡಿದ್ದರು. ಸುಮಾರು 18 ವರ್ಷಗಳ ಕಾಲ ಒಟ್ಟಿಗೆಯಿದ್ದ ಜೋಡಿ, ಬ್ರೇಕಪ್ ಮಾಡಿಕೊಂಡಿತ್ತು.
ಇದನ್ನೂ ಓದಿ:RCB ಮ್ಯಾನೇಜ್ಮೆಂಟ್ ಮೇಲೆ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರಾ.. ಕಾರಣವೇನು?
ಬ್ರೇಕಪ್ ಘೋಷಣೆ ಬೆನ್ನಲ್ಲೇ ಎರಡು ಕುಟುಂಬ ಇಬ್ಬರನ್ನು ಮತ್ತೆ ಒಂದಾಗಿಸುವ ಪ್ರಯತ್ನ ಮಾಡಿದ್ದವು. ಅದು ಸಾಧ್ಯವಾಗದಿದ್ದಾಗ 2004ರಲ್ಲಿ ನಡೆದ ವಿವಾಹವನ್ನು ರದ್ದುಗೊಳಿಸುವಂತೆ ಚೆನ್ನೈನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕೋರ್ಟ್ ಮೆಟ್ಟಿಲೇರಿದ ನಂತರ ಧನುಷ್ ಮತ್ತು ಐಶ್ವರ್ಯಾ ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾತ್ರ ಭಾಗಿಯಾಗಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ಕೋರ್ಟ್ ಇದೀಗ ಡಿವೋರ್ಸ್ ಮಂಜೂರು ಮಾಡಿದೆ.
ಧನುಷ್ ಮತ್ತು ಐಶ್ವರ್ಯಗೆ ಇಬ್ಬರು ಮಕ್ಕಳಿದ್ದಾರೆ. ಈ ಜೋಡಿ ತಮಿಳು ಚಿತ್ರರಂಗದಲ್ಲಿ ‘ಲವ್ಲಿ ಕಪಲ್’ ಎಂದೇ ಖ್ಯಾತಿ ಪಡೆದಿತ್ತು. ಧನುಷ್ ಅವರಿಗೆ ‘3’ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಐಶ್ವರ್ಯ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದರು. ವಿಚ್ಛೇದನ ಘೋಷಣೆ ನಂತರ ಐಶ್ವರ್ಯಾ ರಜನಿಕಾಂತ್ ಖಿನ್ನತೆಗೆ ಒಳಗಾಗಿದ್ದರು. ಅದರಿಂದ ಹೊರಬರಲು ಮತ್ತೆ ನಿರ್ದೇಶನದತ್ತ ಗಮನ ಹರಿಸಿದ್ದಾರೆ. ಈ ವರ್ಷ ಲಾಲ್ ಸಲಾಂ ಸಿನಿಮಾ ಬಿಡುಗಡೆಯಾಗಿದೆ. ಇದರಲ್ಲಿ ರಜನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳ ವಿಚ್ಛೇದನದ ಬಗ್ಗೆ ರಜನಿಕಾಂತ್ ಕೊಂಚ ಅಸಮಧಾನಗೊಂಡಿದ್ದಾರೆ ಎಂಬ ವರದಿಗಳಿವೆ.
ಇದನ್ನೂ ಓದಿ:RCB ಮ್ಯಾನೇಜ್ಮೆಂಟ್ ಮೇಲೆ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರಾ.. ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್