/newsfirstlive-kannada/media/post_attachments/wp-content/uploads/2024/11/Love-story-1.jpg)
ಚಿತ್ರದುರ್ಗ: ಆತನ ವಯಸ್ಸು 46.. ಆಕೆ ವಯಸ್ಸು 19.. ಆದ್ರೆ ಇಬ್ಬರ ನಡುವಿನ ಪ್ರೀತಿಗೆ ವಯಸ್ಸು ಅಡ್ಡಿಯಾಗಿರಲಿಲ್ಲ.. ಮೂರು ತಿಂಗಳ ಹಿಂದೆ ಓಡ್ಹೋಗಿ ಮದುವೆ ಕೂಡ ಆಗಿದ್ರು.. ಆದ್ರೆ, ಮೊದಲು ಒಪ್ಪದ ಯುವತಿ ಕಡೆಯವರು, ಬಳಿಕ ಇಲ್ಲಾ ಇಲ್ಲ.. ನಾವೇ ಮತ್ತೆ ಮದುವೆ ಮಾಡಿಸ್ತೀವಿ ಅಂತ ನಾಟಕವಾಡಿ ಮಗಳನ್ನ ವಾಪಸ್ ಕರೆದೊಯ್ದಿದ್ರು.. ನಂತರ ನಡೆದಿದ್ದು ದುರಂತ.. ಮಗಳನ್ನ ಹೆತ್ತವರೇ ವಿಧವೆ ಮಾಡಿದ್ದಾರೆ.
ಅಳಿಯನನ್ನ ಮನೆ ಬಾಗಿಲಿಗೆ ಕರೆಸಿ ಬರ್ಬರವಾಗಿ ಕೊಲೆಗೈದಿದ್ದಾರೆ. ಹೆಸ್ರು ಮಂಜುನಾಥ್.. ಚಿತ್ರದುರ್ಗದ ಕೋಣನೂರು ಗ್ರಾಮದವರು.. ಪಕ್ಕದ ಮನೆ ಹುಡುಗಿಯನ್ನ ಪ್ರೀತಿಸಿ 3 ತಿಂಗಳ ಹಿಂದಷ್ಟೇ ಮದುವೆ ಕೂಡ ಆಗಿದ್ರು. ಆದ್ರೀಗ ಅದೇ ಅವರ ಸಾವಿಗೆ ಕಾರಣವಾಗಿದೆ. ಒಂದೇ ಜಾತಿಯಾಗಿದ್ರು, ವಯಸ್ಸಿನ ಅಂತರ ಹಿನ್ನೆಲೆ, ಯುವತಿಯ ಮನೆಯವರಿಗೆ ಮದುವೆ ಇಷ್ಟವರಲಿಲ್ಲ. ಹೀಗಾಗಿ ಬರ್ಬರವಾಗಿ ಮಂಜುನಾಥ್ನನ್ನ ಹತ್ಯೆಗೈದಿದ್ದಾರೆ. ಅಷ್ಟೇ ಅಲ್ಲ ಮಂಜುನಾಥ್ ತಂದೆ, ತಾಯಿ ಮೇಲೂ ಹಲ್ಲೆ ಮಾಡಿದ್ದು, ಕೈ ಕಾಲು ಮುರಿದಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಜುನಾಥ್ ಮರ್ಡರ್ ಮಿಸ್ಟ್ರಿ!
3 ತಿಂಗಳ ಹಿಂದಷ್ಟೇ ಮಂಜುನಾಥ್ ಮತ್ತು ಯುವತಿ ಓಡಿ ಹೋಗಿ ಮದುವೆಯಾಗಿದ್ದರು. ಮಂಜುನಾಥ್ ವಯಸ್ಸು ಜಾಸ್ತಿ ಅಂತ ಯುವತಿ ಪೋಷಕರ ಅಡ್ಡಿ ಮಾಡಿದ್ರು. ಬಳಿಕ ಯುವತಿ ಮಿಸ್ಸಿಂಗ್ ಅಂತ ಮನೆಯವರು ಕಂಪ್ಲೆಂಟ್ ಕೂಡ ಕೊಟ್ಟಿದ್ರು.
ಅಕ್ಟೋಬರ್ 9ಕ್ಕೆ ಭರಮಸಾಗರ ಠಾಣೆಗೆ ಮಂಜುನಾಥ್ ಮತ್ತು ಯುವತಿಯನ್ನ ಕರೆಸಲಾಗಿತ್ತು. ಬಳಿಕ DYSP ನೇತೃತ್ವದಲ್ಲಿ ಎರಡೂ ಕುಟುಂಬಸ್ಥರ ರಾಜಿ ಸಂಧಾನ ಕೂಡ ಮಾಡಲಾಗಿತ್ತು. ಈ ವೇಳೆ ಯುವತಿ ಕುಟುಂಬ 15 ದಿನಗಳಲ್ಲಿ ಮದುವೆ ಮಾಡೋದಾಗಿ ಹೇಳಿ, ಆಕೆಯನ್ನ ವಾಪಸ್ ಮನೆಗೆ ಕರೆದೊಯ್ದಿದ್ರು. ಇದಾದ ಬಳಿಕ ಮಂಜುನಾಥ್ ನಿನ್ನೆ ಮೊದಲ ಬಾರಿಗೆ ಕೋಣನೂರು ಗ್ರಾಮಕ್ಕೆ ಬಂದಿದ್ದ. ಈ ವೇಳೆ ಕಾದು ಕೂತಿದ್ದ ಯುವತಿಯ ಕುಟುಂಬಸ್ಥರು ಏಕಾಏಕಿ ಆತನ ಮೇಲೆ ಕಲ್ಲು, ಹಾರೆ, ಐರನ್ ರಾಡ್ನಲ್ಲಿ ಮನಸೋ ಇಚ್ಛೆ ಹಲ್ಲೆ ಮಾಡಿ ಬರ್ಬರವಾಗಿ ಕೊಲೆಗೈದಿದ್ದಾರೆ. ಯುವತಿ ತಂದೆ ತಂದೆ ಜಗದೀಶ್, ಸಂಬಂಧಿಗಳಾದ ಕಲ್ಲೇಶ್, ನಿಂಗಪ್ಪ, ಈಶ್ವರಪ್ಪ, ವಿಶ್ವನಾಥ್, ಹರೀಶ್ ಎಂಬಾತ ಮಂಜುನಾಥ್ನನ್ನ ಹತ್ಯೆಗೈದಿದ್ದಾರೆ.
ಇನ್ನೂ, ಹಲ್ಲೆ ಮಾಡುವಾಗ ಯುವತಿ ಸ್ಥಳದಲ್ಲೇ ಇದ್ದಳು ಎನ್ನಲಾಗ್ತಿದೆ. ಕೊಲೆಯಾಗ್ತಿದ್ದಂತೆ ಯುವತಿ ಜೊತೆ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಂಜುನಾಥ್ ಬೇಡ ಅಂದ್ರೂ ಯುವತಿಯೇ ನೀನೆ ಬೇಕು, ಇಲ್ಲಾ ಅಂದ್ರೆ ಸತ್ತು ಹೋಗ್ತೀನಿ ಅಂತ ಹೇಳಿ ಮದುವೆಯಾಗಿದ್ದಳಂತೆ. ಇಬ್ಬರ ನಡುವಿನ ಸಂಭಾಷಣೆ ಲಭ್ಯವಾಗಿದೆ.
ಯಾವ ತಪ್ಪು ಮಾಡದ ಮಂಜುನಾಥ್ ಹೆತ್ತವರು ಕೈ, ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದು, ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದಾರೆ. ವಯಸ್ಸು ಮೀರಿದ ಪ್ರೀತಿ ಓರ್ವನ ಸಾವಿಗೆ ಕಾರಣವಾಗಿದೆ. ಹೆತ್ತವರ ದುಡುಕಿನ ನಿರ್ಧಾರ ಮಗಳ ಕುಂಕುಮವನ್ನೇ ಅಳಿಸಿಬಿಟ್ಟಿದೆ.
ಇದನ್ನೂ ಓದಿ:ಬೆಂಗಳೂರು ಟೀಮ್ಗೆ KL ರಾಹುಲ್? IPL ಹರಾಜು ಬಳಿಕ ಡೆಲ್ಲಿ ಓನರ್ಗೆ ಕನ್ನಡಿಗನ ಸಂದೇಶ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ