newsfirstkannada.com

ವೈದ್ಯರ ನಿರ್ಲಕ್ಷ್ಯ ಆರೋಪ.. ಗರ್ಭಿಣಿ ಮಹಿಳೆ ದಾರುಣ ಸಾವು

Share :

Published May 29, 2024 at 5:38pm

    ಆಸ್ಪತ್ರೆಯ ಮುಂಭಾಗದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

    ಕುಟುಂಬಸ್ಥರಿಂದ ಆಸ್ಪತ್ರೆ ಮುಂದೆ ಪ್ರತಿಭಟನೆ, ವೈದ್ಯರ ವಿರುದ್ಧ ಫುಲ್​​ ಗರಂ

    ಎರಡನೇ ಹೆರಿಗೆಗೆಂದು ನಗರದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು

ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ಗರ್ಭಿಣಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಬಿ.ಹೊಸಳ್ಳಿ ಗ್ರಾಮದ ಪ್ರತಿಭಾ ಮಹಾಂತೇಶ್ (24) ಮೃತ ತುಂಬು ಗರ್ಭಿಣಿ.

ಇದನ್ನೂ ಓದಿ: ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ

ಗಜೇಂದ್ರ ಗಡದ ಸೂಡಿ ಗ್ರಾಮದ ಮಹಾಂತೇಶ್ ಎಂಬಾತನ ಜೊತೆ ಪ್ರತಿಭಾ ಮದುವೆ ಆಗಿದ್ದರು. ಮೃತ ಗರ್ಭಿಣಿ ಪ್ರತಿಭಾಗೆ ಮೂರು ವರ್ಷದ ಮಗು ಇದೆ. ಪ್ರತಿಭಾ ಎರಡನೇ ಹರಿಗೆಗೆಂದು ಕೊಪ್ಪಳ ಎಂದರೆ ತವರು ಮನೆಗೆ ಬಂದಿದ್ದರು. ಹೀಗಾಗಿ ಪ್ರತಿಭಾ ಪೋಷಕರು ನಗರದ ಖಾಸಗಿ ಗೋವಿನಕೊಪ್ಪ ಆಸ್ಪತ್ರೆಯಲ್ಲಿ ನಿನ್ನೆ ಹೆರಿಗೆಗಾಗಿ ದಾಖಲು ಮಾಡಿದ್ದರು.

ಆದರೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಗೆ ರಕ್ತಸ್ರಾವ ಆಗಿತ್ತಂತೆ. ಏಕಾಏಕಿ ಗರ್ಭಿಣಿ ಪ್ರತಿಭಾಗೆ ಬಿಪಿ ಕಡಿಮೆ ಆಗಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದರಂತೆ. ಇಷ್ಟಾದರೂ ವೈದ್ಯ ಗೋವಿನಕೊಪ್ಪ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಅಂತ ಹೇಳಿದ್ದರಂತೆ. ವೈದ್ಯರು ಹೇಳಿದ ಕೂಡಲೇ ಗರ್ಭಿಣಿ ಪ್ರತಿಭಾರನ್ನು ತಡರಾತ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಪ್ರತಿಭಾ ಮೃತಪಟ್ಟಿದ್ದಾರೆ. ಸರಿಯಾಗಿ ಓ ನೆಗೆಟಿವ್ ರಕ್ತ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಗರ್ಭಿಣಿ ಮೃತಪಟ್ಟಿದ್ದಾಳೆ ಅಂತ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆ ವೈದ್ಯ ಡಾ. ಮಹೇಶ್ ಗೋವಿನಕೊಪ್ಪನ ವಿರುದ್ಧ ಕೇಸ್​ ದಾಖಲಿಸಿ ಕ್ರಮಕೈಗೊಳ್ಳಿ. ನಮಗೆ ನ್ಯಾಯಕೊಡಿ ಎಂದು ಪೊಲೀಸರಿಗೆ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈದ್ಯರ ನಿರ್ಲಕ್ಷ್ಯ ಆರೋಪ.. ಗರ್ಭಿಣಿ ಮಹಿಳೆ ದಾರುಣ ಸಾವು

https://newsfirstlive.com/wp-content/uploads/2024/05/death-case-1.jpg

Load More