newsfirstkannada.com

×

ಫುಟ್ಬಾಲ್ ಮ್ಯಾಚ್ ನೋಡಲು ಅಂತ್ಯಕ್ರಿಯೆಯನ್ನೇ ನಿಲ್ಲಿಸಿದ ಕುಟುಂಬಸ್ಥರು; ವಿಡಿಯೋ ವೈರಲ್‌!

Share :

Published July 3, 2024 at 6:15am

    ಚಿಲಿ ವರ್ಸಸ್ ಪೆರು ಮಧ್ಯೆ ರೋಚಕ ಫುಟ್ಬಾಲ್ ಪಂದ್ಯ

    ಶ್ರದ್ಧಾಂಜಲಿ ಸಭೆಯಲ್ಲಿ ಫುಟ್ಬಾಲ್ ಮ್ಯಾಚ್‌ ವೀಕ್ಷಿಸಿದ ಕುಟುಂಬಸ್ಥರು

    ಅಂತ್ಯಕ್ರಿಯೆಯ ಮಧ್ಯೆ ಫುಟ್ಬಾಲ್‌ ನೋಡಿದ ವಿಡಿಯೋ ನೆಟ್ಟಿಗರು ಶಾಕ್‌!

ಜಗತ್ತಿನಲ್ಲಿ ಅತಿ ಹೆಚ್ಚು ಹುಚ್ಚು ಅಭಿಮಾನಿಗಳಿರೋ ಕ್ರೀಡೆ ಅಂದ್ರೆ ಅದು ಫುಟ್ಬಾಲ್. ಫುಟ್ಬಾಲ್ ಪಂದ್ಯ ನೋಡೋಕೆ ಅಭಿಮಾನಿಗಳು ಎಂತೆಂಥ ರಿಸ್ಕ್ ಬೇಕಾದ್ರೂ ತಗೊಳ್ತಾರೆ. ಇಂತಹದೇ ಅಪರೂಪದ ಘಟನೆಯೊಂದು ಚಿಲಿಯಲ್ಲಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಚಿಲಿ ವರ್ಸಸ್ ಪೆರು ಮಧ್ಯೆ ಫುಟ್ಬಾಲ್ ಪಂದ್ಯ ನಿಗದಿಯಾಗಿತ್ತು. ಮ್ಯಾಚ್ ನಡೆಯುತ್ತಿದ್ದ ದಿನವೇ ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇನ್ನೆನ್ನು ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಆದರೆ ಅದೇ ಸಮಯಕ್ಕೆ ಸರಿಯಾಗಿ ರೋಚಕ ಫುಟ್ಬಾಲ್ ಮ್ಯಾಚ್ ಕಣ್ಣಿಗೆ ಬಿದ್ದು, ಅಂತ್ಯಕ್ರಿಯೆಯ ವಿಧಿ ವಿಧಾನಕ್ಕೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ: VIDEO: ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಆಡುವಾಗ ಉಸಿರು ಚೆಲ್ಲಿದ ಖ್ಯಾತ ಪ್ಲೇಯರ್; ಏನಾಯ್ತು? 

ಹೌದು.. ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಯುವ ಪ್ರಾರ್ಥನಾ ಮಂದಿರದಲ್ಲಿ ಬಿಗ್ ಸ್ಕ್ರೀನ್ ಟಿವಿ ಅಳವಡಿಸಲಾಗಿದೆ. ಮೃತದೇಹ ಪಕ್ಕದಲ್ಲಿದ್ದರೂ ಕುಟುಂಬದ ಸದಸ್ಯರು ಫುಟ್ಬಾಲ್ ಮ್ಯಾಚ್ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಮೃತದೇಹದ ಪೆಟ್ಟಿಗೆಗೆ ಫುಟ್ಬಾಲ್ ಆಟಗಾರರ ಜೆರ್ಸಿ ಹಾಕಿ ಗುಡ್‌ಲಕ್ ಹೇಳಿದ್ದಾರೆ.

ಅಂತ್ಯಕ್ರಿಯೆಯ ಮಧ್ಯೆಯೇ ಕುಟುಂಬ ಸದಸ್ಯರು ಫುಟ್ಬಾಲ್ ಮ್ಯಾಚ್‌ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಸಾಕಷ್ಟು ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಶವದ ಪೆಟ್ಟಿಗೆಯ ಪಕ್ಕದಲ್ಲೇ ಕುಳಿತು ಫುಟ್ಬಾಲ್ ಮ್ಯಾಚ್‌ ನೋಡುತ್ತಾ ಎಂಜಾಯ್ ಮಾಡಿರೋದು ಹಲವರ ಅಚ್ಚರಿಗೂ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಈ ವಿಡಿಯೋ ಸಿಕ್ಕಾಪಟ್ಟೆ ಚರ್ಚೆಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫುಟ್ಬಾಲ್ ಮ್ಯಾಚ್ ನೋಡಲು ಅಂತ್ಯಕ್ರಿಯೆಯನ್ನೇ ನಿಲ್ಲಿಸಿದ ಕುಟುಂಬಸ್ಥರು; ವಿಡಿಯೋ ವೈರಲ್‌!

https://newsfirstlive.com/wp-content/uploads/2024/07/Football-Match.jpg

Load More