/newsfirstlive-kannada/media/post_attachments/wp-content/uploads/2024/07/GT_FARMER_FAMILY.jpg)
ಭೋಪಾಲ್: ರೈತ, ರೈತನ ಪತ್ನಿ ಹಾಗೂ ಮೂವರು ಮಕ್ಕಳು ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ರವಡಿ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ಇದು ಆತ್ಮಹತ್ಯೆ ಎಂದು ಹೇಳಿದರು ರೈತನ ಮಗಳ ಸಾವು ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್​.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?
ರವಡಿ ಗ್ರಾಮದ ರೈತ ರಾಕೇಶ್ ದೊಡ್ವಾ (27), ಪತ್ನಿ ಲಲಿತಾ ದೊಡ್ವಾ (25) ಮತ್ತು ಇವರ ಮಕ್ಕಳಾದ ಪ್ರಕಾಶ್ (7) ಅಕ್ಷಯ್ (5) ಮತ್ತು ಮಗಳು ಲಕ್ಷ್ಮಿ (9) ಮೃತಪಟ್ಟಿದ್ದಾರೆ. ಪೊಲೀಸರ ಪ್ರಾಥಮಿಕ ವರದಿ ಪ್ರಕಾರ ಇದು ಆತ್ಮಹತ್ಯೆ ಎಂದು ತೋರುತ್ತದೆ. ರೈತ ಹಾಗೂ ಆತನ ಪತ್ನಿ ಮತ್ತು ಇಬ್ಬರು ಬಾಲಕರ ಮೃತದೇಹಗಳು ಸೀಲಿಂಗ್‌ಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆದರೆ ಇವರ ಮಗಳ ಮೃತದೇಹ ಮಾತ್ರ ನೆಲದ ಮೇಲೆ ಪತ್ತೆಯಾಗಿದೆ. ಹೀಗಾಗಿ ಈ ಪ್ರಕರಣ ಸದ್ಯ ಸಾಕಷ್ಟು ಸಂಶಯಗಳನ್ನು ಉಂಟು ಮಾಡಿದೆ.
ಇದನ್ನೂ ಓದಿ:ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್
/newsfirstlive-kannada/media/post_attachments/wp-content/uploads/2024/07/GT_FARMER_FAMILY_1.jpg)
ಮೃತ ರಾಕೇಶ್ ದೊಡ್ವಾ ರೈತನಾಗಿದ್ದರು ಮೇಸ್ತ್ರಿ ಆಗಿಯು ಕೆಲಸ ಮಾಡುತ್ತಿದ್ದರು. ಆದರೆ ಇವರೆಲ್ಲ ಸಾವನ್ನಪ್ಪಿದರು ಯಾವುದೇ ಡೆತ್​​ನೋಟ್ ಪತ್ತೆಯಾಗಿಲ್ಲ. ಸದ್ಯ ಕುಟುಂಬವೆಲ್ಲ ಅನುಮಾನದ ರೀತಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದು ಸ್ಥಳಕ್ಕೆ ಶ್ವಾನದಳ, ಫೋರೆನ್ಸಿಕ್ ತಂಡ ಆಗಮಿಸಿದೆ. ಮನೆಯಲ್ಲಿನ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿದೆ. ಮರಣೋತ್ತರ ಪರೀಕ್ಷೆಗಳನ್ನು ವಿಡಿಯೋ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us