4 ಅಂತಸ್ತಿನ ಕಟ್ಟಡ ಕುಸಿದು ಜೀವ ಬಿಟ್ಟ ಏಳು ಜನ.. ನಾಲ್ವರನ್ನು ಬದುಕಿಸಿದ 3 ಟೊಮೇಟೊ

author-image
Bheemappa
Updated On
4 ಅಂತಸ್ತಿನ ಕಟ್ಟಡ ಕುಸಿದು ಜೀವ ಬಿಟ್ಟ ಏಳು ಜನ.. ನಾಲ್ವರನ್ನು ಬದುಕಿಸಿದ 3 ಟೊಮೇಟೊ
Advertisment
  • ಕಟ್ಟಡ ಬಿದ್ದರೂ ಕುಟುಂಬ ಪ್ರಾಣ ಉಳಿಸಿಕೊಂಡಿದ್ದೇಗೆ?
  • ಸಂಜೆ ಹೊತ್ತಿಗೆ ಕುಸಿದು ಬಿದ್ದ ನಾಲ್ಕು ಅಂತಸ್ತಿನ ಕಟ್ಟಡ
  • ಈಗಾಗಲೇ 16 ಜನರನ್ನು ರಕ್ಷಣೆ ಮಾಡಿದ ಪೊಲೀಸರು

ನವದೆಹಲಿ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ದೆಹಲಿ ನಗರದ ಬುರಾರಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಕಟುಬಂವೊಂದು 2 ದಿನ ಕೇವಲ 3 ಟೊಮೇಟೊ ತಿಂದು ಬದುಕಿ ಬಂದಿದ್ದಾರೆ.

ದೆಹಲಿಯ ಬರಾರಿಯಲ್ಲಿ ಜನವರಿ 27 ರಂದು ಕಟ್ಟಡವೊಂದು ಕುಸಿದಿತ್ತು. ಈ ಘಟನೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ 5 ಕಾರ್ಮಿಕರು ಜೀವ ಕಳೆದುಕೊಂಡಿದ್ದರು. ಆದರೆ ಅದೇ ಕಟ್ಟಡದಲ್ಲಿ ಇನ್ನೊಂದು ಬದಿಯಿದ್ದ ಕುಟುಂಬವೊಂದು ಕಟ್ಟಡದ ಅವೇಶಷಗಳಡಿ ಸಿಲುಕಿಕೊಂಡು ಜೀವನ ಹೋರಾಟ ನಡೆಸಿತ್ತು. ರಾಜೇಶ್ (30), ಹೆಂಡತಿ ಗಂಗೋತ್ರಿ (26), ಇವರ ಮಕ್ಕಳಾದ ಪಿನ್ಸ್​ (6) ಹಾಗೂ ರಿತಿಕ್ (3) ಜೀವ ಉಳಿಸಿಕೊಳ್ಳಲು ಒಳಗೆ ಹರಸಾಹಸ ಪಡುತ್ತಿದ್ದರು.

ಈ ಬಗ್ಗೆ ಮಾತನಾಡಿದ ರಾಜೇಶ್ ಅವರು ಕಟ್ಟಡ ಕುಸಿಯುವುದಕ್ಕಿಂತ ಮೊದಲು ನಾನು ಮನೆಯಲ್ಲಿ ರಾತ್ರಿ ಊಟಕ್ಕಾಗಿ ಅಡುಗೆ ಮಾಡುತ್ತಿದ್ದೆ. 6:30ರ ಸಮಯಕ್ಕೆ ಕಟ್ಟಡ ಕುಸಿದು ಬಿತ್ತು. ಒಳಗೆ ಸಿಲುಕಿದ್ದ ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಹೊರ ಬರಲು ಸಾಕಷ್ಟು ಕಷ್ಟ ಪಟ್ಟೆ. ಆದರೆ ಭಾರವಾದ ಗೋಡೆಗಳನ್ನು ಮೇಲೆ ಎತ್ತಲು ಆಗಲಿಲ್ಲ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ:ತುಂಬಾ ದಿನಗಳ ನಂತರ ಕ್ಯಾಮೆರಾ ಕಣ್ಣಿಗೆ ಬಿದ್ದ ಬ್ಯೂಟಿ ಸಮಂತಾ; ಅಬ್ಬಾ.. ಏನಿದರ ಸೀಕ್ರೆಟ್‌?

ಹೊಟ್ಟೆ ಹಸಿಯುತ್ತಿದ್ದರಿಂದ ಅಡುಗೆಗಿದ್ದ 3 ಟೊಮೇಟೊಗಳನ್ನು ತಿಂದು 30 ಗಂಟೆ ನನ್ನ ಕುಟುಂಬ ಇತ್ತು. ನಮ್ಮನ್ನು ಹೊರ ತೆಗೆದಾಗ ನಾವು ಪ್ರಜ್ಞಾಹೀನರಾಗಿದ್ದೇವು. ಯಾವಾಗ, ಹೇಗೆ ಆಸ್ಪತ್ರೆಗೆ ದಾಖಲು ಆಗಿದ್ದೇವೆ ಎಂಬುದು ಗೊತ್ತಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ. ಇನ್ನು ಈ ಕುಟುಂಬ ಇರುವ ಕೋಣೆಯಲ್ಲಿ ಸಿಲಿಂಡರ್ ಮೇಲೆ ಸೀಲಿಂಗ್ ಸ್ಲ್ಯಾಬ್ ಬಿದ್ದಿದ್ದರಿಂದ ಕುಟುಂಬದ ಎಲ್ಲರ ಜೀವ ಉಳಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಮಯಕ್ಕೆ ಸೂಕ್ತವಾದ ಸುಧಾರಿತ ಪತ್ತೆ ಸಾಧನಗಳನ್ನು ಹಾಗೂ ಶ್ವಾನ ದಳ ಬಂದಿದ್ದರಿಂದ ರಕ್ಷಣೆ ಯಶಸ್ವಿ ಆಗಿದೆ. ಸದ್ಯ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 16 ಕಾರ್ಮಿಕರನ್ನು ಮೂರು ದಿನಗಳ ಕಾರ್ಯಾಚರಣೆಯ ಮೂಲಕ ಹೊರ ತೆಗೆಯಲಾಗಿದೆ. ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ವಿಭಾಗಗಳ ಅಡಿಯಲ್ಲಿ ಕಟ್ಟಡ ಮಾಲೀಕ ಯೋಗೇಂದ್ರ ಭಾಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.


">January 29, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment