/newsfirstlive-kannada/media/post_attachments/wp-content/uploads/2024/10/Anil-Kapoor.jpg)
ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇದೇ ವಿಚಾರಕ್ಕೆ ಅವರೆಲ್ಲರೂ ಟೀಕೆಗೆ ಗುರಿಯಾಗಿದ್ದು ಗೊತ್ತೇ ಇದೆ. ಅತ್ತ ಪಾನ್ ಮಸಾಲಾ ಕಂಪನಿಗಳು ತಮ್ಮ ಪ್ರಚಾರಕ್ಕೆ ದೊಡ್ಡ ಮೊತ್ತದಲ್ಲಿ ಹಣ ನೀಡಿ ನಟರನ್ನು ಜಾಹೀರಾತಿನಲ್ಲಿ ನಟಿಸುವಂತೆ ಆಹ್ವಾನಿಸುತ್ತವೆ. ಇದೀಗ ಅಂತಹದ್ದೇ ಆಫರ್ ಖ್ಯಾತ ನಟ ಅನಿಲ್ ಕಪೂರ್ಗೂ ಬಂದಿದ್ದು, ಆದರೆ ಹಿರಿಯ ನಟ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ.
ಪಾನ್ ಮಸಾಲಾ ಕಂಪನಿಯೊಂದು ಅನಿಲ್ ಕಪೂರ್ ಅವರಿಗೆ 10 ಕೋಟಿಯ ಆಫರ್ ನೀಡಿದೆ. ಆದರೆ ಅನಿಲ್ ಕಪೂರ್ ಮಾತ್ರ 10 ಕೋಟಿಯ ಆಸೆಗೆ ಬೀಳದೆ ಸಮಾಜದ ಒಳಿತಿಗಾಗಿ ನಟಿಸಲ್ಲ ಎಂದು ಹೇಳಿದ್ದಾರೆ. ದೇಶದ ಯುವಕರ ಮೇಲೆ ಪಾನ್ ಮಸಾಲಾ ಪರಿಣಾಮ ಬೀರುತ್ತದೆ. ಹೀಗಾಗಿ ಇಂತಹ ಜಾಹೀರಾತಿನಲ್ಲಿ ನಟಿಸಲ್ಲ ಎಂದು ದೂರ ಸರಿಸಿದ್ದಾರೆ.
ಅಕ್ಷಯ್ ಕುಮಾರ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಭಿಮಾನಿಗಳು ಈ ಬಗ್ಗೆ ಟೀಕಿಸಿದ್ದರು. ಕೊನೆಗೆ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿದ್ದು, ಇನ್ನು ಮುಂದೆ ಹೀಗೆ ಮಾಡಲ್ಲ ಎಂದಿದ್ದರು.
ಜಾನ್ ಅಬ್ರಹಾಂ ಕೂಡ ಕೆಲವು ತಿಂಗಳ ಹಿಂದೆ ಸಂಭಾವನೆ ಲೆಕ್ಕಿಸಿ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದಿದ್ದರು. ನಾನು ಈ ಜಾಹೀರಾತಿನಲ್ಲಿ ನಟಿಸುವ ನಟರನ್ನು ಟೀಕಿಸುತ್ತಿಲ್ಲ. ನಾನು ನನ್ನ ಪರವಾಗಿ ಮಾತನಾಡುತ್ತಿದ್ದೇನೆ. ನಾನು ಸಾವನ್ನು ಮಾರಾಟ ಮಾಡೋದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ:ಕೇವಲ 4 ಲಕ್ಷದಲ್ಲಿ ಕೋಟಿ ಕೋಟಿ ದುಡಿಯೋದು ಹೇಗೆ? ಇದು ಯಾವ ಬ್ಯುಸಿನೆಸ್ಗೂ ಕಮ್ಮಿ ಇಲ್ಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ