ಖ್ಯಾತ ಹಾಸ್ಯ ನಟ ನಿಧನ.. ಸಂತಾಪ ಸೂಚಿಸಿದ ಸಿಎಂ

author-image
AS Harshith
Updated On
ಖ್ಯಾತ ಹಾಸ್ಯ ನಟ ನಿಧನ.. ಸಂತಾಪ ಸೂಚಿಸಿದ ಸಿಎಂ
Advertisment
  • ಕ್ಯಾನ್ಸರ್​ನಿಂದ ಚೇತರಿಸಿಕೊಂಡಿದ್ದ ನಟ ಸಾವು
  • ಕಾಮಿಡಿ ನಟನ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
  • ಸೀರಿಯಲ್​, ಸಿನಿಮಾಗಳಲ್ಲಿ ನಟಿಸಿದ್ದ ನಟ ಇನ್ನಿಲ್ಲ

ಹಾಸ್ಯ ಪಾತ್ರಗಳಿಗೆ ಹೆಸರಾಗಿದ್ದ ಮರಾಠಿಯ ಖ್ಯಾತ ನಟ ಅತುಲ್​​ ಅರ್ಚುರೆ ಸೋಮವಾರದಂದು ನಿಧನರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನಟ ಅತುಲ್​​ ಅರ್ಚುರೆ ಇತ್ತೀಚೆಗೆ ಕಾನ್ಸರ್​ಗೆ ತುತ್ತಾಗಿ ಬಳಿಕ ಚೇತರಿಸಿಕೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ವೇದಿಕೆಗೆ ಹತ್ತುವ ಮುನ್ನ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದೆ. ಬಳಿಕ ಅವರ ಆರೋಗ್ಯ ಹದಗೆಡುತ್ತಾ ಬಂದಿದೆ. ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾದ ಅವರು ನಿಧನರಾಗಿದ್ದಾರೆ.

ಇದನ್ನೂ ಓದಿ: ಈ ಆಹಾರಗಳಿಂದ ನೀವು ದೂರ ಉಳಿಯಿರಿ; ಪಿತ್ತಕೋಶದಲ್ಲಿ ಕಲ್ಲು ಸೃಷ್ಟಿಯಾಗುವುದನ್ನು ತಡೆಯಿರಿ

publive-image

ನಟ ಅತುಲ್​​ ಅರ್ಚುರೆ ಬಾಲನಟನಾಗಿ ವೃತ್ತಿ ಜೀವನ ಪ್ರಾರಂಭಿಸಿದವರು. ತರುಣ್​ ಟರ್ಕ್​, ಮ್ತಾರೆ ಆರ್ಕ್​ ಮತ್ತು ನಾಟಿ ಗೋಟಿಯಂತಹ ನಾಟಕಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡರು. ಬಳಿಕ ಸೀರಿಯಲ್​​, ಸಿನಿಮಾದಲ್ಲಿ ನಟಿಸಿದರು.

ಇದನ್ನೂ ಓದಿ: ಬರಿಗಾಲಲ್ಲಿ ಹುಲ್ಲು ಹಾಸಿನ ಮೇಲೆ ವಾಕಿಂಗ್; ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಗೊತ್ತಾ?

ನಟ ಅತುಲ್​​ ಅರ್ಚುರೆ ನಿಧನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಸಂತಾಪ ಸೂಚಿಸಿದ್ದಾರೆ. ದೇವೇಂದ್ರ ಫಡ್ನವಿಸ್​ ಮತ್ತು ಅಜಿತ್​ ಪವಾರ್​ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment