/newsfirstlive-kannada/media/post_attachments/wp-content/uploads/2025/04/bhagya-laxmi3.jpg)
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮಗಳ ಪಾತ್ರದಲ್ಲಿ ನಟಿಸುತ್ತಿರುವ ತನ್ವಿ ಅಲಿಯಾಸ್ ನಟಿ ಅಮೃತ ಗೌಡ ಸಖತ್ ಖುಷಿಯಲ್ಲಿದ್ದಾರೆ. ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀಯಲ್ಲಿ ಸುಷ್ಮಾ ಕೆ. ರಾವ್ ಅವರ ಮಗಳಾಗಿ ಅಭಿನಯಿಸುತ್ತಿರೋ ಅಮೃತ ಗೌಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದಾರೆ.
ಇದನ್ನೂ ಓದಿ: ‘ಕರ್ಣ’ ಸೀರಿಯಲ್ನಲ್ಲಿ ಬಿಗ್ ಸ್ಟಾರ್ಸ್ ನಟಿಯರೇ ಏಕೆ? ತಂಡದ ಹಿಂದಿನ ಗುಟ್ಟೇನು ಗೊತ್ತಾ?
ಹೌದು, ಭಾಗ್ಯ ಮತ್ತು ತಾಂಡವ್ ಮುದ್ದಿನ ಮಗಳಾಗಿರೋ ತನ್ವಿ ಧಾರಾವಾಹಿಯಲ್ಲಿ ಓದುವುದರಲ್ಲಿ ಕೊಂಚ ಹಿಂದೆ ಇದ್ದರು. ಆದರೆ ನಿಜ ಜೀವನದಲ್ಲಿ ತಾನು ಬುದ್ಧಿವಂತೆ ಅಂತ ಪ್ರೂವ್ ಮಾಡಿದ್ದಾಳೆ. ಭಾಗ್ಯಲಕ್ಷ್ಮೀ ಸೀರಿಯಲ್ನಲ್ಲಿ ಈಗಷ್ಟೇ ಹತ್ತನೇ ತರಗತಿ ಓದಿ ಮುಗಿಸಿರುವ ತನ್ವಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 543 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ. ನಿನ್ನೆ ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟವಾಗಿತ್ತು. ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ (commerce course) ತೆಗೆದುಕೊಂಡ ಮಾರ್ಕ್ ಕಾಪಿಯನ್ನು ಅಮೃತ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಕನ್ನಡದಲ್ಲಿ 97, ಇಂಗ್ಲಿಷ್ನಲ್ಲಿ 81, ಎಕನಾಮಿಕ್ಸ್ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್ 83, ಅಕೌಂಟೆನ್ಸಿ 94, ಸ್ಟಾಟಿಸ್ಟಿಕ್ಸ್ 95 ಅಂಕಗಳನ್ನು ಪಡೆದಿದ್ದಾರೆ. ಆ ಮೂಲಕ ಒಟು 543 ಅಂಕಗಳನ್ನು ಪಡೆದು 91ಶೇಕಡ ಪಡೆದು ಡಿಸ್ಟಿಂಕ್ಷನ್ನಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾರೆ. ಶೂಟಿಂಗ್ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಚೆನ್ನಾಗಿ ಓದಿ ಡಿಸ್ಟಿಂಕ್ಷನ್ ಪಡೆದಿರುವ ತನ್ವಿ ಅಲಿಯಾಸ್ ಅಮೃತಾ ಗೌಡರನ್ನು ವೀಕ್ಷಕರು ಮೆಚ್ಚಿಕೊಂಡಿದ್ದು ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಅಭಿನಂದನೆಗಳು, ನಟನೆ ಮಾಡುತ್ತಾ ಓದುವುದು ತುಂಬಾ ಕಷ್ಟ, ವಿಶೇಷವಾಗಿ ಡಿಸ್ಟಿಂಕ್ಷನ್ ಪಡೆಯಲು, ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಅಂತ ಕಾಮೆಂಟ್ಸ್ ಹಾಕುವ ಮೂಲಕ ಅಮೃತಾಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ