newsfirstkannada.com

ಮರೆಯಾದ ಮಾಧುರ್ಯ ಕಂಠದ ಕನ್ನಡತಿ.. ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ!

Share :

Published July 12, 2024 at 6:34am

    ಮರೆಯಾದ ಕನ್ನಡ ಕೋಗಿಲೆ, ಮರೆಯಲಾಗದ ಮಾಧುರ್ಯ

    ಬ್ರಹ್ಮನ ಬರಹದ ಲೀಲೆಗೆ ಸ್ವರ್ಗಾರೋಹಣ ಮಾಡಿದ ಅಪರ್ಣಾ

    ನಿನ್ನೆ ರಾತ್ರಿ 9:45ಕ್ಕೆ ಶಾಶ್ವತ ವಿರಾಮ ನೀಡಿದ ನಿರೂಪಕಿ ಅಪರ್ಣಾ

ಆ ಧ್ವನಿಗೆ ಮಾರು ಹೋದವರೇ ಇಲ್ಲ. ಭಾಷೆ ಮೇಲಿನ ಹಿಡಿತ. ಆ ಭಾಷೆಗೆ ತಕ್ಕಂತ ಭಾವನೆ. ಅಚ್ಚ ಕನ್ನಡ, ಸ್ವಚ್ಛ ಶೈಲಿ, ಅಕ್ಷರಗಳಿಗೂ ಜೀವ ತುಂಬುವ ಸ್ವರ. ಆ ಮಾಧುರ್ಯ ಕಂಠಸಿರಿಗೆ ನಿನ್ನೆ ವಿರಾಮ ಬಿದ್ದಿದೆ. ಖ್ಯಾತ ನಿರೂಪಕಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ. ಕನ್ನಡ ಕಸ್ತೂರಿಯನ್ನ ಉಣಬಡಿಸ್ತಿದ್ದ, ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಅಪರ್ಣಾರನ್ನ ಕ್ಯಾನ್ಸರ್​​ ಕಾಯಿಲೆ, ಒಳಗಿಂದೊಳಕ್ಕೆ ತಿಂದು ಹಾಕಿದೆ.

ಅದು ಕನ್ನಡದ ಕಂಪು, ಕಸ್ತೂರಿ ಕನ್ನಡ ಕೇಳೋದೇ ಇಂಪು. ಅಚ್ಚ ಕನ್ನಡ, ಸ್ವಚ್ಛ ಕನ್ನಡ, ಶುದ್ಧ ಕನ್ನಡ, ಸುಮಧುರ ಕಂಠ, ಸಾಟಿಯಿಲ್ಲದ ಮಾತಿನ ಶೈಲಿ. ಈ ಎಲ್ಲದಕ್ಕೂ ಪರ್ಯಾಯ ಅಂದ್ರೆ ಅದು ಅಪರ್ಣಾ. ಕನ್ನಡ ಮತ್ತು ಕರ್ನಾಟಕ ಎಂದಿಗೂ ಮರೆಯದ ಮಾಣಿಕ್ಯ. ಅಪರ್ಣಾ ಎಂಬ ಮಾಧುರ್ಯ ಕಂಠದ ಕನ್ನಡತಿ ಈಗ ನೆನಪು ಮಾತ್ರ.

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ!

ಆ ವಿಧಿಗೂ ಈ ಮುತ್ತಿನ ಮಾತಿನ ಒಡತಿಯ ಮೇಲೆ ಪ್ರೀತಿ ಉಕ್ಕಿತೋ ಏನೋ? ಕ್ಯಾನ್ಸರ್​​​ ಎಂಬ ರೋಗ ಒಕ್ಕರಿಸಿ ಜೀವ ಪಡೆದಿದೆ. ಮೋಸ್ಟ್​​ಲೀ ಆ ದೇವಲೋಕವೂ ಈ ಮಧುರ ಕನ್ನಡದ ಕಂಪು ಬೀರುವ ಅಪರ್ಣಾರನ್ನ ಆಹ್ವಾನಿಸಿತೋ ಏನೋ? ಬ್ರಹ್ಮನ ಬರಹದ ಲೀಲೆಗೆ ಸ್ವರ್ಗಾರೋಹಣ ಮಾಡಿದ ಈ ಧ್ವನಿ, ಭೂಲೋಕದಲ್ಲಿ ಅಮರತ್ವ ಪಡೆದಿದೆ.

ಇದನ್ನೂ ಓದಿ: ಈ ದೇಶದಲ್ಲಿ ಜನ ದಿನಕ್ಕೊಮ್ಮೆ ಆದ್ರೂ ನಗಲೇಬೇಕು.. ಇಲ್ಲದೆ ಹೋದ್ರೆ ಏನಾಗುತ್ತೆ ಗೊತ್ತಾ?

ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ಕೋಲ್ಮಿಂಚು ಮೂಡಿಸಿದ್ದ ನಟಿ, ಖ್ಯಾತ ನಿರೂಪಕಿ ಅಪರ್ಣಾ ವಿಧಿವಶರಾಗಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ, ಮಜಾ ಟಾಕೀಸ್‌ ವರು ಪಾತ್ರದಿಂದ ಜನರ ಅಪಾರ ಮೆಚ್ಚುಗೆ ಗಳಿಸಿದ್ದರು. ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಅವರ ಶುದ್ಧ ಕನ್ನಡಕ್ಕೆ ಮನಸೋಲದವರೇ ಇಲ್ಲ.

ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾರಿಗೆ 57 ವರ್ಷ ಚಿರ ಯುವತಿ. ಕೆಲ ಸಮಯದಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮೂರು ದಿನದಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ, ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 9:45ಕ್ಕೆ ಅಪರ್ಣಾ ತಮ್ಮ ಉಸಿರಿಗೆ ಶಾಶ್ವತ ವಿರಾಮ ನೀಡಿ, ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಇದನ್ನೂ ಓದಿ: 2 ವರ್ಷ ಸಾವು-ಬದುಕಿನ ಹೋರಾಟದಲ್ಲಿ ಸೋತಳು.. ಅಪರ್ಣಾ ಸಾವಿಗೆ ಕಾರಣ ಬಿಚ್ಚಿಟ್ಟ ಗಂಡ; ಹೇಳಿದ್ದೇನು?

ಬೆಳಗ್ಗೆ ಜಯನಗರದ ಶಾಂತಿ ಆಸ್ಪತ್ರೆಯಿಂದ‌ ಪಾರ್ಥಿವ ಶರೀರ ಮನೆಗೆ ತರಲಾಗುತ್ತೆ. ಮನೆಯ ಬಳಿ ಅಂತಿಮ ದರ್ಶನದ ‌ವ್ಯವಸ್ಥೆಗೆ ಕುಟುಂಬ ಸಿದ್ಧತೆ ಮಾಡಿಕೊಳ್ತಿದೆ.
ಚಂದನದಲ್ಲಿ ಮೂಡಿದ ಬಂದ ಚಂದದ ನಿರೂಪಣೆ ಮೂಲಕ ಹೊಸ ಲೋಕ ಪ್ರವೇಶಿಸಿದ ಅಪರ್ಣಾ, ತಮ್ಮ ಶುದ್ಧವಾದ ಕನ್ನಡ, ಮಾತಿನ ಶೈಲಿ ಹಾಗೂ ನಟನೆಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ರು. ಈಗ ಆ ಬಳಗವನ್ನೆಲ್ಲಾ ಬಿಟ್ಟು ಅಪರ್ಣಾ ಶಾಶ್ವತ ವಿದಾಯ ಹೇಳಿದ್ದಾರೆ. ಅಪರ್ಣಾ ವಿದಾಯ ಹೇಳಿದ್ರೂ, ಅವರ ಧ್ವನಿ ಮಾತ್ರ ಶಾಶ್ವತ. ಭವಿಷ್ಯದಲ್ಲಿ ಬರುವ ಅದೆಷ್ಟೋ ತಾಯಿ ಭುವನೇಶ್ವರಿಯ ಕನ್ನಡದ ಪೀಳಿಗೆಗಳು ಈ ಮಧುರ ಧ್ವನಿಯನ್ನ ಪ್ರೀತಿಸಿ, ಆರಾಧಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರೆಯಾದ ಮಾಧುರ್ಯ ಕಂಠದ ಕನ್ನಡತಿ.. ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ!

https://newsfirstlive.com/wp-content/uploads/2024/07/APARNA.jpg

Load More