/newsfirstlive-kannada/media/post_attachments/wp-content/uploads/2024/10/sudhakar.jpg)
ಬೆಂಗಳೂರು: ಕನ್ನಡದ ಸ್ಟಾರ್​ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹಲ್ಲೆ ಪ್ರಕರಣವೊಂದರಲ್ಲಿ ಪೊಲೀಸರು ಸುಧಾಕರ್ ಗೌಡ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:BBK11: ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ.. ಚೈತ್ರಾ ಖಡಕ್ ಲುಕ್ಕು, ಘರ್ಜನೆಗೆ ಜಗದೀಶ್ ಸ್ಟನ್ ಆದ್ರಾ?
ಈ ಹಿಂದೆ ಹಲ್ಲೆ ಪ್ರಕರಣವೊಂದರಲ್ಲಿ ಯೂಟ್ಯೂಬರ್​ ಭಾಗಿಯಾಗಿದ್ದರು. ಆ ಪ್ರಕರಣ ಸಂಬಂಧ ಸುಧಾಕರ್ ವಿರುದ್ಧ ವಾರೆಂಟ್ ಇಶ್ಯೂ ಆಗಿತ್ತು. ಅಲ್ಲದೇ ಮಾರ್ಟಿನ್ ಸಿನಿಮಾ ವಿಚಾರವಾಗಿ ಕೂಡ ವಿವಾದ ಆಗಿತ್ತು. ಮಾರ್ಟಿನ್ ಸಿನಿಮಾ ರಿವ್ಯೂವ್ ಬಗ್ಗೆ ಸುಧಾಕರ್ ಮಾತಾಡಿದ್ದರು. ಸಿನಿಮಾ ಚೆನಾಗಿಲ್ಲ. ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/sudhakar1.jpg)
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಪಾಲಜಿ ಲೆಟರ್ ಬರೆಸಿಕೊಂಡು ವಿಡಿಯೋ ಡಿಲೀಟ್​ ಮಾಡಿಸಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಸುಧಾಕರ್ ಗೌಡನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us