/newsfirstlive-kannada/media/post_attachments/wp-content/uploads/2025/03/Tollywood-Singer-Kalpana-1.jpg)
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಕಲ್ಪನಾ ರಾಘವೇಂದ್ರ ಅವರ ಬದುಕಿನಲ್ಲಿ ಘೋರ ದುರಂತ ನಡೆದಿದೆ. ಸಂಗೀತ ದಿಗ್ಗಜರಾದ ಇಳಯರಾಜ ಮತ್ತು ಎ.ಆರ್ ರೆಹಮಾನ್ ಅವರ ಜೊತೆ ಕಲ್ಪನಾ ಅವರು ಕೆಲಸ ಮಾಡಿದ್ದರು. 1,500 ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿರುವ ಕಲ್ಪನಾ ಅವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ಇದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಕಲ್ಪನಾ ಅವರು ಹೈದರಾಬಾದ್‌ನ ನಿಜಾಂಪೇಟೆಯ ಮನೆಯಲ್ಲಿ ನೆಲೆಸಿದ್ದರು. ಕಳೆದ ಮಾರ್ಚ್ 2ರಿಂದ ಕಲ್ಪನಾ ರಾಘವೇಂದ್ರ ಅವರು ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬಂದೇ ಇರಲಿಲ್ಲ. ಅನುಮಾನಗೊಂಡ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಸಿಬ್ಬಂದಿ ಅಕ್ಕ-ಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ.
ಅಪಾರ್ಟ್‌ಮೆಂಟ್ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಮನೆ ಬಾಗಿಲನ್ನು ಹೊಡೆದು ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಕಲ್ಪನಾ ರಾಘವೇಂದ್ರ ಅವರು ತನ್ನ ಬೆಡ್ ರೂಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಪೊಲೀಸರು ಪರಿಶೀಲಿಸಿದಾಗ ಕಲ್ಪನಾ ಅವರು ನಿದ್ದೆ ಮಾತ್ರ ನುಂಗಿದ್ದು ಪತ್ತೆಯಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಕಿ ಕಲ್ಪನಾ ರಾಘವೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ಸ್ಮಗ್ಲಿಂಗ್; ರನ್ಯಾ ರಾವ್ ಬಳಿ ಸಿಕ್ಕ ಚಿನ್ನ ಎಷ್ಟು? ಬೆಂಗಳೂರು ಇತಿಹಾಸದಲ್ಲೇ ಇದು ದಾಖಲೆ!
ಗಾಯಕಿ ಕಲ್ಪನಾ ರಾಘವೇಂದ್ರ ಅವರು ಹೆಸರಾಂತ ಟಿಎಸ್ ರಾಘವೇಂದ್ರ ಅವರ ಮಗಳು. 2010ರಲ್ಲಿ ಮಲೆಯಾಳಂ ಸ್ಟಾರ್ ಸಿಂಗರ್ ಅವಾರ್ಡ್ ಕೂಡ ಪಡೆದಿದ್ದಾರೆ. ಕಲ್ಪನಾ ರಾಘವೇಂದ್ರ ಅವರು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ. ಆದರೆ ಈ ದುರಂತಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ