/newsfirstlive-kannada/media/post_attachments/wp-content/uploads/2024/07/karimani-1.jpg)
ಕರಿಮಣಿ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರ್ದೇಶಕರು ನಾಗರಭಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2024/07/karimani2.jpg)
ನಿರ್ದೇಶಕ ವಿನೋದ್ ದೋಂಡಾಲೆ ಅವರ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿನೋದ್ ದೋಂಡಾಲೆ ಅವರು ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರದ ನಿರ್ದೇಶಕರು. ಅಶೋಕ್ ಬ್ಲೇಡ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ.
ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ನಿರ್ಮಾಪಕರ ಜೊತೆ ನಿರ್ದೇಶಕ ವಿನೋದ್ ಅವರು ಶೂಟಿಂಗ್ ಬಗ್ಗೆ ಚರ್ಚಿಸಿದ್ದರು.ಇಂದು ವಿನೋದ್ ದೋಂಡಾಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಯಾಂಡಲ್‌ವುಡ್ ಡೈರೆಕ್ಟರ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us