Advertisment

ನಮಸ್ಕಾರ ದೇವ್ರು.. ಕ್ರಿಕೆಟ್​ ಫ್ಯಾನ್ಸ್​ಗೆ ಬಿಗ್​ ಸರ್ಪ್ರೈಸ್ ಕೊಟ್ಟ​​ ಡಾಕ್ಟರ್ ಬ್ರೋ; ಏನದು..?

author-image
Veena Gangani
Updated On
ನಮಸ್ಕಾರ ದೇವ್ರು.. ಕ್ರಿಕೆಟ್​ ಫ್ಯಾನ್ಸ್​ಗೆ ಬಿಗ್​ ಸರ್ಪ್ರೈಸ್ ಕೊಟ್ಟ​​ ಡಾಕ್ಟರ್ ಬ್ರೋ; ಏನದು..?
Advertisment
  • ಯೂಟ್ಯೂಬ್​ ಚಾನೆಲ್ ಮೂಲಕ ಜನರಿಗೆ ಹತ್ತಿರವಾದ ಡಾಕ್ಟರ್ ಬ್ರೋ!
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ ಡಾ. ಬ್ರೋ ವಿಡಿಯೋ
  • ಭಾರತ vs ಆಸ್ಟ್ರೇಲಿಯಾ ನಡೆಯಲಿರೋ ವಿಶ್ವಕಪ್ ಮ್ಯಾಚ್​ನಲ್ಲಿ ಇರ್ತಾರೆ ಇವರು!

ನಮಸ್ಕಾರ ದೇವ್ರು ಎಂದು ದೇಶ ವಿದೇಶ ಸುತ್ತುತ್ತಿದ್ದ ಡಾಕ್ಟರ್ ಬ್ರೋ ಅವರು ಒಂದಲ್ಲಾ ಒಂದು ಸುದ್ದಿಯಲ್ಲಿ ಚಾಲ್ತಿಯಲ್ಲಿ ಇರುತ್ತಾರೆ. ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ಡಾಕ್ಟರ್ ಬ್ರೋ ಅವರು, ದೇಶ ವಿದೇಶಕ್ಕೆ ಹೋಗಿ ಅಲ್ಲಿನ ಅಲ್ಲಿ ವಾಸ್ತವ್ಯದ ಬಗ್ಗೆ ಜನರಿಗೆ ತಮ್ಮ ಯೂಟ್ಯೂಬ್​ ಚಾನೆಲ್ ಮೂಲಕ ತಿಳಿಸುತ್ತಿದ್ದರು. ಮೊನ್ನೆ ಮೊನ್ನೆಯಷ್ಟೇ ಬಿಗ್​ಬಾಸ್ ಸೀಸನ್​ 10ಕ್ಕೆ ಹೋಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು.

Advertisment

publive-image

ಇದೀಗ ದೇಶ ಸುತ್ತುತ್ತಿಲ್ಲ ಯಾವ ಪ್ರವಾಸಿತಾಣವನ್ನು ತೋರಿಸುತ್ತಿಲ್ಲ. ಆದರೆ ಡಾಕ್ಟರ್ ಬ್ರೋ ಈಗ ಬೇರೊಂದು ಪ್ರಪಂಚ ತೋರಿಸಲು ತಯಾರಾಗಿದ್ದಾರೆ. ಇನ್ಮುಂದೆ ಬೇರೆ ಕೆಲಸದ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಿಕೊಡಲು ಹೊರಟಿದ್ದಾರೆ. ಹೌದು, ಹಲವು ದೇಶಗಳನ್ನು ಸುತ್ತಿ ಫೇಮಸ್ ಆಗಿರೋ ಯೂಟ್ಯೂಬರ್​​ ಡಾಕ್ಟರ್ ಬ್ರೋ, ಇನ್ಮುಂದೆ ಸ್ಪೋರ್ಟ್ಸ್ ಕನ್ನಡದಲ್ಲಿ ಅಪ್ಡೇಟ್ಸ್ ಕೊಡೋಕೆ ಬರ್ತಿದ್ದಾರೆ. ಭಾನುವಾರ ಚೆನ್ನೈನಲ್ಲಿ ಭಾರತ vs ಆಸ್ಟ್ರೇಲಿಯಾ ನಡುವೆ ನಡೆಯಲಿರೋ ವಿಶ್ವಕಪ್ ಮ್ಯಾಚ್​ನ ಕನ್ನಡ ಕಾಮೆಂಟರಿ ಕೊಡೋಕೆ ಹೊರಟಿದ್ದಾರೆ.

publive-image

‘ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ’ ಎಂದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕ್ಯಾಪ್ಶನ್ ಕೊಟ್ಟು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಡಾಕ್ಟರ್ ಬ್ರೋ ಈಗ ವರ್ಲ್ಡ್ ಕಪ್​ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತಮ್ಮ ಗಂಟುಮೂಟೆ ಕಟ್ಟಿಕೊಂಡು ನಮ್ಮ ಭಾರತ ತಂಡ ಎಲ್ಲೆಲ್ಲಿ ತನ್ನ ಆಟಗಳನ್ನು ಆಡುತ್ತದೆಯೋ ಅಲ್ಲೆಲ್ಲ ಡಾಕ್ಟರ್ ಬ್ರೋ ಪ್ರತ್ಯಕ್ಷ್ಯವಾಗಲಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment