/newsfirstlive-kannada/media/post_attachments/wp-content/uploads/2025/04/kishan.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿ, ಕನ್ನಡ ಕಿರುತೆರೆ ನಟ ಕಿಶನ್ ಬಿಳಗಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುವುದರಲ್ಲಿ ನಂಬರ್ ಒನ್.
ಇದನ್ನೂ ಓದಿ: ಸೀರೆ ಜಾಗಕ್ಕೆ ಪ್ಯಾಂಟ್ ಶರ್ಟ್.. ಶ್ರಾವಣಿ ಸುಬ್ರಹ್ಮಣ್ಯ ಕಾಂತಮ್ಮತ್ತೆಯ ರೆಬೆಲ್ ಲುಕ್ಗೆ ವೀಕ್ಷಕರು ಫಿದಾ
ಕಿಶನ್ ಬಿಳಗಲಿ ಅವರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಌಕ್ಟೀವ್ ಆಗಿರೋ ಸ್ಟಾರ್ ಹೀರೋ ಆಗಿದ್ದಾರೆ. ಅಲ್ಲದೇ ಕಿರುತೆರೆ ಹಾಗೂ ಸ್ಯಾಂಡಲ್ವುಡ್, ಬಾಲಿವುಡ್ ಸ್ಟಾರ್ ನಟಿಯರ ಜೊತೆಗೆ ಸಖತ್ ಡ್ಯಾನ್ಸ್ ಮಾಡಿ ಮೆಚ್ಚುಗೆ ಗಳಿಸಿಕೊಂಡಿದ್ದರು.
ಸದ್ಯ ಕಿಶನ್ ಬಿಳಗಲಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್ ಡೇ ಸಂಭ್ರಮದಲ್ಲಿರೋ ನಟ ಕಿಶನ್ ಬಿಳಗಲಿಗೆ ಅಪ್ಪಟ ಅಭಿಮಾನಿ ಸರ್ಪ್ರೈಸ್ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ. ಹೌದು, ತನ್ನ ಕೈ ಮೇಲೆ ಕಿಶನ್ ಫೋಟೊ ಹಾಗೂ ಹೆಸರಿನ ಟ್ಯಾಟೂ ಹಾಕಿಕೊಂಡಿದ್ದಾರೆ. ಇದನ್ನೇ ನೋಡಿದ ಕಿಶನ್ ಭಾವುಕರಾಗಿದ್ದಾರೆ.
View this post on Instagram
ಕಿಶನ್ ಬಿಳಗಲಿ ಅವರ ಅಭಿಮಾನಿಯಾಗಿರೋ ಈತನ ಹೆಸರು ನಿಂಗನ ಗೌಡ ಅಂತ. ತಮ್ಮ ಕೈಯ ಮೇಲೆ ಒಂದು ಬದಿಯಲ್ಲಿ ಕಿಶನ್ ಹೆಸರನ್ನು ಹಾಗೂ ಇನ್ನೊಂದು ಬದಿಯಲ್ಲಿ ಕಿಶನ್ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಭಿಮಾನಿ ಇದೀಗ ಕಿಶನ್ ಅವರನ್ನು ಭೇಟಿಯಾಗಿದ್ದು, ಕಿಶನ್ ಅವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದ ಪುರಸಭೆ ಮುಖ್ಯಾಧಿಕಾರಿ ಸಾವು
ಅಲ್ಲದೇ ಅಭಿಮಾನಿಯ ಕೈಗೆ ಮುತ್ತಿಡುವ ಫೋಟೋವನ್ನು ಶೇರ್ ಮಾಡಿಕೊಂಡ ನಟ ಕಿಶನ್ ‘ನಾನು ಇದಕ್ಕೆ ಅರ್ಹನೋ ಇಲ್ಲವೋ ಗೊತ್ತಿಲ್ಲ. ಬಹುಶಃ ನನ್ನ ಜೀವನದ ಅತ್ಯಂತ ದುಬಾರಿ ಉಡುಗೊರೆಗಳಲ್ಲಿ ಇದೂ. ಇದಕ್ಕೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು ಒಂದು ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ