/newsfirstlive-kannada/media/post_attachments/wp-content/uploads/2024/06/darshan42.jpg)
ಡಿ ಬಾಸ್​... ಡಿ ಬಾಸ್..​ ಡಿ ಬಾಸ್...​ ಎಲ್ಲೇ ಹೋದ್ರು, ಏನೇ ಮಾಡಿದ್ರು, ದರ್ಶನ್​ ಜಪ ಮಾಡುತ್ತಿದ್ದರು ಫ್ಯಾನ್ಸ್​. ಆದ್ರೆ, ಮನೆ, ಮನದಲ್ಲಿಟ್ಟು ಆರಾಧಿಸುತ್ತಾ ಇದ್ದ ಫ್ಯಾನ್ಸ್​ಗೆ ದರ್ಶನ್​ ಕೊಟ್ಟ ಉಡುಗೊರೆ ಕ್ರೌರ್ಯ. ಹತ್ಯೆ ಕೇಸ್​ನಲ್ಲಿ ಅದ್ಯಾವಾಗ ನಟ ದರ್ಶನ್ ಕರಾಳ ಮುಖ ಬಯಲಾಯ್ತೋ ಫ್ಯಾನ್ಸ್​ ಬೇಸರಗೊಂಡಿದ್ದಾರೆ. ಬೈಕ್​, ಕಾರಿನ​ ಮೇಲೆ ರಾರಾಜಿಸ್ತಾಯಿದ್ದ ಡಿ ಬಾಸ್​ ಅನ್ನು ಶಾಶ್ವತವಾಗಿ ಅಳಿಸಿ ಹಾಕುವ ಕೆಲಸ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan38.jpg)
ರೇಣುಕಾಸ್ವಾಮಿ ಹತ್ಯೆ ಆರೋಪಿ ಆಗಿರೋ ದರ್ಶನ್​ ಸಹವಾಸನೇ ಬೇಡಪ್ಪ ಅಂತ ಫ್ಯಾನ್ಸ್​ ನಿರ್ಧಾರ ಮಾಡ್ಬಿಟ್ಟಂತೆ ಕಾಣಿಸುತ್ತಾ ಇದೆ. ಡಿ ಬಾಸ್ ಹೆಸರಿನ ರೇಡಿಯಂ ಸ್ಟಿಕ್ಕರ್ ಅನ್ನು ಬೈಕ್, ಕಾರ್​ಗಳ ಮೇಲೆ ಫ್ಯಾನ್ಸ್​ ಅತ್ಯಂತ ಪ್ರೀತಿಯಿಂದ ಹಾಕಿಕೊಂಡಿದ್ದರು. ಆದ್ರೆ ದರ್ಶನ್​ ಆ ಪ್ರೀತಿಯನ್ನ ಉಳಿಸಿಕೊಂಡಿಲ್ಲ. ಹೀಗಾಗಿ, ದರ್ಶನ್ ಪಾಲಿನ ಸೆಲೆಬ್ರಿಟಿಗಳು ರಾಂಗ್​ ಆಗಿದ್ದು, ಯಾವ ಕೈನಲ್ಲಿ ಅಭಿಮಾನ ತೋರಿಸಿದ್ರೋ ಅದೇ ಕೈನಲ್ಲಿ ರೇಡಿಯಂ ಸ್ಟಿಕ್ಕರ್ ರಿಮೂವ್ ಮಾಡಿ ಬೇಸರ ಹೊರಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan36.jpg)
ದರ್ಶನ್ ಹೆಸರು ಹಾಕಿಕೊಂಡು ಬೈಕ್ ಓಡಿಸೋಕೆ ಅಭಿಮಾನಿಗಳಲ್ಲಿ ಬೇಸರ ಕಂಡು ಬರ್ತಾಯಿದ್ರೆ ಅತ್ತ ಮತ್ತೆ ಕೆಲ ಅಭಿಮಾನಿಗಳು ಈಗಲೂ ದರ್ಶನ್ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಎಲ್ಲೋ ಏನೋ ಮಿಸ್​ ಆಗ್ತಾಯಿದೆ ನಮ್ಮಣ್ಣ ಹೀಗೆ ಮಾಡೋಕೆ ಸಾಧ್ಯಾನೇ ಇಲ್ಲ ಅಂತ ಈಗಲೂ ಅಂದಾಭಿಮಾನ ತೋರ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತು ದರ್ಶನ್ ಪರವಹಿಸಿ ವ್ಯಾಪಕ ಚರ್ಚೆ ಮಾಡ್ತಿದ್ದಾರೆ. ಈಗಲೂ ಜೈಲ್​ ಬಳಿ ಬಂದು ಡಿ ಬಾಸ್​ಗೆ ಜೈ ಅಂತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ, ದರ್ಶನ್​ ಹೊರತು ಪಡಿಸಿದಂತೆ ಬಹುತೇಕರು ದರ್ಶನ್​ ಅಭಿಮಾನಿಗಳು. ದರ್ಶನ್​ ಜೊತೆ ಒಂದು ಸೆಲ್ಫಿಗಾಗಿನೋ ಅಥವಾ ದರ್ಶನ್​ನ ಒಂದು ಬಾರಿ ಕಣ್ತುಂಬಿಕೊಳ್ಳೋದಕ್ಕೋ ಬಂದವರು.
View this post on Instagram
ಹುಚ್ಚು ಅಭಿಮಾನವೇ ಇಂದು ಅವರನ್ನ ಜೈಲು ಪಾಲು ಮಾಡಿದೆ. ಹೀಗಾಗಿ, ಅಭಿಮಾನಿಗಳ ಬಲವನ್ನೇ ದರ್ಶನ್ ದುರ್ಬಳಕೆ ಮಾಡಿಕೊಂಡಿದ್ದಾಗಿ ಪೊಲೀಸರು ಕೋರ್ಟ್​ಗೆ ಸಲ್ಲಿಸಿದ ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಅಭಿಮಾನಿಗಳನ್ನ ಬಳಕೆ ಮಾಡಿಕೊಂಡೇ ರೇಣುಕಾಸ್ವಾಮಿ ಅಪಹರಣ, ಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಪೊಲೀಸ್ ತನಿಖೆಗೂ ಅಡ್ಡಿಪಡಿಸಲು ಯತ್ನ ಅಂತ ಪೊಲೀಸರು ಉಲ್ಲೇಖಿಸಿದ್ದಾರೆ. ಹಣ ಬಲವೋ ಅಥವಾ ಅಂದಾಭಿಮಾನವೋ ಒಟ್ಟಿನಲ್ಲಿ ದರ್ಶನ್​ ಜೊತೆ ಜೊತೆಗೆ 17 ಆರೋಪಿಗಳಿಗೆ ಜುಲೈ 4ರವರೆಗೆ ಜೈಲೂಟ ಫಿಕ್ಸ್​​ ಮಾಡಿದೆ. ಇಷ್ಟೇ ಅಲ್ಲ ಹತ್ಯೆ ಅರೋಪಿಗಳಿಗೆ ಕಾನೂನಿನ ಕುಣಿಕೆಯೇ ಪರ್ಮನೆಂಟ್​ ಆಗ್ಬೇಕು. ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕಿದೆ ಅನ್ನೋದೇ ಪ್ರತಿಯೊಬ್ಬರ ಒತ್ತಾಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us