newsfirstkannada.com

ಕಷ್ಟ ಕಾಲದಲ್ಲಿ ದಾಸನಿಗೆ ಬಿಗ್ ಶಾಕ್‌.. ದರ್ಶನ್‌ ಜೈಲಿಗೆ ಹೋದ ಬೆನ್ನಲ್ಲೇ ಏನೇಲ್ಲಾ ಆಯ್ತು?

Share :

Published June 23, 2024 at 6:09am

    ದರ್ಶನ್​ ಜೈಲಿಗೆ ಹೋಗುತ್ತಿದ್ದಂತೆ ಸಹವಾಸನೇ ಬೇಡಪ್ಪ ಅಂದ್ರಾ ಕೆಲವು ಫ್ಯಾನ್ಸ್?

    ಅತ್ಯಂತ ಪ್ರೀತಿಯಿಂದ ವಾಹನದ ಮೇಲೆ ಹಾಕಿಕೊಂಡಿದ್ದ ಸ್ಟಿಕ್ಕರ್‌ಗೆ ಗೇಟ್‌ಪಾಸ್‌!

    ಅಭಿಮಾನಿಗಳ‌ ಬಲವನ್ನೇ ದರ್ಶನ್‌ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ

ಡಿ ಬಾಸ್​… ಡಿ ಬಾಸ್..​ ಡಿ ಬಾಸ್…​ ಎಲ್ಲೇ ಹೋದ್ರು, ಏನೇ ಮಾಡಿದ್ರು, ದರ್ಶನ್​ ಜಪ ಮಾಡುತ್ತಿದ್ದರು ಫ್ಯಾನ್ಸ್​. ಆದ್ರೆ, ಮನೆ, ಮನದಲ್ಲಿಟ್ಟು ಆರಾಧಿಸುತ್ತಾ ಇದ್ದ ಫ್ಯಾನ್ಸ್​ಗೆ ದರ್ಶನ್​ ಕೊಟ್ಟ ಉಡುಗೊರೆ ಕ್ರೌರ್ಯ. ಹತ್ಯೆ ಕೇಸ್​ನಲ್ಲಿ ಅದ್ಯಾವಾಗ ನಟ ದರ್ಶನ್ ಕರಾಳ ಮುಖ ಬಯಲಾಯ್ತೋ ಫ್ಯಾನ್ಸ್​ ಬೇಸರಗೊಂಡಿದ್ದಾರೆ. ಬೈಕ್​, ಕಾರಿನ​ ಮೇಲೆ ರಾರಾಜಿಸ್ತಾಯಿದ್ದ ಡಿ ಬಾಸ್​ ಅನ್ನು ಶಾಶ್ವತವಾಗಿ ಅಳಿಸಿ ಹಾಕುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್​​, ಪವಿತ್ರ ಈ ಜೀವನವೇ ಬೇಡ ಅಂತ ನರಕ ಅನುಭವಿಸಬೇಕು; ರೇಣುಕಾಸ್ವಾಮಿ ತಾಯಿ ಹಿಡಿಶಾಪ

ರೇಣುಕಾಸ್ವಾಮಿ ಹತ್ಯೆ ಆರೋಪಿ ಆಗಿರೋ ದರ್ಶನ್​ ಸಹವಾಸನೇ ಬೇಡಪ್ಪ ಅಂತ ಫ್ಯಾನ್ಸ್​ ನಿರ್ಧಾರ ಮಾಡ್ಬಿಟ್ಟಂತೆ ಕಾಣಿಸುತ್ತಾ ಇದೆ. ಡಿ ಬಾಸ್ ಹೆಸರಿನ ರೇಡಿಯಂ ಸ್ಟಿಕ್ಕರ್ ಅನ್ನು ಬೈಕ್, ಕಾರ್​ಗಳ ಮೇಲೆ ಫ್ಯಾನ್ಸ್​ ಅತ್ಯಂತ ಪ್ರೀತಿಯಿಂದ ಹಾಕಿಕೊಂಡಿದ್ದರು. ಆದ್ರೆ ದರ್ಶನ್​ ಆ ಪ್ರೀತಿಯನ್ನ ಉಳಿಸಿಕೊಂಡಿಲ್ಲ. ಹೀಗಾಗಿ, ದರ್ಶನ್ ಪಾಲಿನ ಸೆಲೆಬ್ರಿಟಿಗಳು ರಾಂಗ್​ ಆಗಿದ್ದು, ಯಾವ ಕೈನಲ್ಲಿ ಅಭಿಮಾನ ತೋರಿಸಿದ್ರೋ ಅದೇ ಕೈನಲ್ಲಿ ರೇಡಿಯಂ ಸ್ಟಿಕ್ಕರ್ ರಿಮೂವ್ ಮಾಡಿ ಬೇಸರ ಹೊರಹಾಕಿದ್ದಾರೆ.

ದರ್ಶನ್ ಹೆಸರು ಹಾಕಿಕೊಂಡು ಬೈಕ್ ಓಡಿಸೋಕೆ ಅಭಿಮಾನಿಗಳಲ್ಲಿ ಬೇಸರ ಕಂಡು ಬರ್ತಾಯಿದ್ರೆ ಅತ್ತ ಮತ್ತೆ ಕೆಲ ಅಭಿಮಾನಿಗಳು ಈಗಲೂ ದರ್ಶನ್‌ ಪರ ಬ್ಯಾಟಿಂಗ್‌ ಮಾಡ್ತಿದ್ದಾರೆ. ಎಲ್ಲೋ ಏನೋ ಮಿಸ್​ ಆಗ್ತಾಯಿದೆ ನಮ್ಮಣ್ಣ ಹೀಗೆ ಮಾಡೋಕೆ ಸಾಧ್ಯಾನೇ ಇಲ್ಲ ಅಂತ ಈಗಲೂ ಅಂದಾಭಿಮಾನ ತೋರ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಂತು ದರ್ಶನ್‌ ಪರವಹಿಸಿ ವ್ಯಾಪಕ ಚರ್ಚೆ ಮಾಡ್ತಿದ್ದಾರೆ. ಈಗಲೂ ಜೈಲ್​ ಬಳಿ ಬಂದು ಡಿ ಬಾಸ್​ಗೆ ಜೈ ಅಂತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ, ದರ್ಶನ್​ ಹೊರತು ಪಡಿಸಿದಂತೆ ಬಹುತೇಕರು ದರ್ಶನ್​ ಅಭಿಮಾನಿಗಳು. ದರ್ಶನ್​ ಜೊತೆ ಒಂದು ಸೆಲ್ಫಿಗಾಗಿನೋ ಅಥವಾ ದರ್ಶನ್​ನ ಒಂದು ಬಾರಿ ಕಣ್ತುಂಬಿಕೊಳ್ಳೋದಕ್ಕೋ ಬಂದವರು.

View this post on Instagram

A post shared by Kiccha Sudeep (@karthikjanani59)

ಹುಚ್ಚು ಅಭಿಮಾನವೇ ಇಂದು ಅವರನ್ನ ಜೈಲು ಪಾಲು ಮಾಡಿದೆ. ಹೀಗಾಗಿ, ಅಭಿಮಾನಿಗಳ‌ ಬಲವನ್ನೇ ದರ್ಶನ್‌ ದುರ್ಬಳಕೆ ಮಾಡಿಕೊಂಡಿದ್ದಾಗಿ ಪೊಲೀಸರು ಕೋರ್ಟ್​ಗೆ ಸಲ್ಲಿಸಿದ ರಿಮಾಂಡ್‌ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಅಭಿಮಾನಿಗಳನ್ನ ಬಳಕೆ ಮಾಡಿಕೊಂಡೇ ರೇಣುಕಾಸ್ವಾಮಿ ಅಪಹರಣ, ಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಪೊಲೀಸ್ ತನಿಖೆಗೂ ಅಡ್ಡಿಪಡಿಸಲು ಯತ್ನ ಅಂತ ಪೊಲೀಸರು ಉಲ್ಲೇಖಿಸಿದ್ದಾರೆ. ಹಣ ಬಲವೋ ಅಥವಾ ಅಂದಾಭಿಮಾನವೋ ಒಟ್ಟಿನಲ್ಲಿ ದರ್ಶನ್​ ಜೊತೆ ಜೊತೆಗೆ 17 ಆರೋಪಿಗಳಿಗೆ ಜುಲೈ 4ರವರೆಗೆ ಜೈಲೂಟ ಫಿಕ್ಸ್​​ ಮಾಡಿದೆ. ಇಷ್ಟೇ ಅಲ್ಲ ಹತ್ಯೆ ಅರೋಪಿಗಳಿಗೆ ಕಾನೂನಿನ ಕುಣಿಕೆಯೇ ಪರ್ಮನೆಂಟ್​ ಆಗ್ಬೇಕು. ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕಿದೆ ಅನ್ನೋದೇ ಪ್ರತಿಯೊಬ್ಬರ ಒತ್ತಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಷ್ಟ ಕಾಲದಲ್ಲಿ ದಾಸನಿಗೆ ಬಿಗ್ ಶಾಕ್‌.. ದರ್ಶನ್‌ ಜೈಲಿಗೆ ಹೋದ ಬೆನ್ನಲ್ಲೇ ಏನೇಲ್ಲಾ ಆಯ್ತು?

https://newsfirstlive.com/wp-content/uploads/2024/06/darshan42.jpg

Load More