Advertisment

ದರ್ಶನ್ ವಿಚಾರಣಾಧೀನ ಕೈದಿ ನಂಬರ್​​ ಮೇಲೂ ಅಭಿಮಾನಿಗಳ ಕಣ್ಣು.. ಇನ್ಮುಂದೆ ವಿಶೇಷವಾಗಿ ಬಳಸಲು ನಿರ್ಧಾರ..!

author-image
AS Harshith
Updated On
ದರ್ಶನ್ ವಿಚಾರಣಾಧೀನ ಕೈದಿ ನಂಬರ್​​ ಮೇಲೂ ಅಭಿಮಾನಿಗಳ ಕಣ್ಣು.. ಇನ್ಮುಂದೆ ವಿಶೇಷವಾಗಿ ಬಳಸಲು ನಿರ್ಧಾರ..!
Advertisment
  • ದರ್ಶನ್ ಜೈಲುವಾಸ ನೆನೆದು ಗಳಗಳನೆ ಕಣ್ಣೀರು ಹಾಕಿದ ಅಭಿಮಾನಿ
  • ನಾಡ ಅಧಿದೇವತೆ ಚಾಮುಂಡಿಗೆ ಹರಕೆ ಹೊತ್ತಿರುವ ದರ್ಶನ್​ ಫ್ಯಾನ್​
  • ದರ್ಶನ್ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ

ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ದರ್ಶನ್​ಗೆ 6106 ನಂಬರ್​ ಕೊಟ್ಟಿದ್ದಾರೆ. ಆದರೀಗ ಇದೇ ನಂಬರ್​ ಅನ್ನು ದರ್ಶನ್​ ಅಭಿಮಾನಿಯೊಬ್ಬ ಲಕ್ಕೀ ನಂಬರ್​ ಎಂದು ಹೇಳಿಕೊಂಡಿದ್ದಾನೆ. ಮಾತ್ರವಲ್ಲದೆ ಅದೇ ನಂಬರ್​ ನಮ್ಮ ಗಾಡಿ ಮೇಲೆ ಇರುತ್ತೆ ಎಂದಿದ್ದಾನೆ.

Advertisment

ಹೌದು. ಅಭಿಮಾನಿ ಧನುಷ್ ಎಂಬಾತ 6106 ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್. ಈ ನಂಬರ್ ನಮ್ಮ ಗಾಡಿ ಮೇಲೆ ಇರುತ್ತೆ ಎಂದು ಆರ್ ಟಿಓದಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾನೆ. ಮಾತ್ರವಲ್ಲದೆ ಈ ಕುರಿತಾಗಿ ವಿಡಿಯೋ ಮಾಡುವ ಮೂಲಕ ಹೇಳಿಕೊಂಡಿದ್ದಾನೆ.

publive-image

ಇದನ್ನೂ ಓದಿ: ದರ್ಶನ್ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ.. ಅದಕ್ಕೆ ಪೊಲೀಸರು ಏನ್ ಮಾಡಿದ್ದಾರೆ ಗೊತ್ತಾ?

ವಿಡಿಯೋದಲ್ಲಿ ದರ್ಶನ್ ಜೈಲುವಾಸ ನೆನೆದು ಅಭಿಮಾನಿ ಧನುಷ್ ಗಳಗಳನೆ ಕಟ್ಟೀರಿಟ್ಟಿದ್ದಾನೆ. ಶೀಘ್ರ ಬಿಡುಗಡೆಗೆ ಹರಕೆ ಹೊತ್ತಿದ್ದಾನೆ. ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಹೊರುವ ಮೂಲಕ ದರ್ಶನ್​ ಬೇಗ ಹೊರಬರಲು ಪ್ರಾರ್ಥಿಸಿದ್ದಾನೆ. ಇಷ್ಟು ಮಾತ್ರವಲ್ಲ, ದರ್ಶನ್ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದಾನೆ.

Advertisment

publive-image

ಇದನ್ನೂ ಓದಿ: ಹಿರಿಮಗ, ಕಿರಿಮಗ ಇಬ್ಬರೂ ಜೈಲಲ್ಲಿ.. ಸಂಕಷ್ಟಕ್ಕೆ ಸಿಲುಕಿದ ರೇವಣ್ಣ.. ಇಂದು ನಡೆಯಲಿದೆ ಮಹತ್ವದ ಬೆಳವಣಿಗೆ

ಮೈಸೂರು ಮೂಲದ ಧನುಷ್, ‘ನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮ‌ಬಾಸನ್ನ ನಾವು ಎಂದೂ ಬಿಟ್ಟುಕೊಡೋದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದ್ರೆ ರಾಜಾರೋಷವಾಗಿ ಬರ್ತಾರೆ ಎಂದು ಅಭಿಮಾನಿ’ ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment