IPL 2025: KL ರಾಹುಲ್​​ ಬೆನ್ನಲ್ಲೇ ಆರ್​​ಸಿಬಿಯಿಂದ ಮತ್ತೊಬ್ಬ ಕನ್ನಡಿಗನಿಗೆ ಭಾರೀ ಅನ್ಯಾಯ

author-image
Ganesh Nachikethu
Updated On
’ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್​​ ರಾಹುಲ್​​​ ಆರ್​​ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
  • ಕೆಎಲ್​​ ರಾಹುಲ್​ ಜತೆಗೆ ಮತ್ತೊಬ್ಬ ಕನ್ನಡಿಗನಿಗೆ ಅನ್ಯಾಯ
  • ಆರ್​​ಸಿಬಿ ತಂಡ ಸ್ಟಾರ್​ ಕನ್ನಡಿಗನಿಗೆ ಅನ್ಯಾಯ ಮಾಡಿದ್ದೇಕೆ?

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಮುಂದಿನ ಸೀಸನ್​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್​​ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್​​ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್‌ ದಯಾಳ್‌ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್​​ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಆದರೆ, ಆರ್​​​ಸಿಬಿ ಕೆ.ಎಲ್​ ರಾಹುಲ್​ ಮಾತ್ರವಲ್ಲ ಮತ್ತೋರ್ವ ಕನ್ನಡಿಗನಿಗೂ ಅನ್ಯಾಯ ಮಾಡಿದೆ.

ಫ್ಯಾನ್ಸ್​ಗೆ ಭಾರೀ ಬೇಸರ

ಐಪಿಎಲ್‌ ಮೆಗಾ ಹರಾಜು ಮುಗಿದಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿದೆ. ಸಿರಾಜ್​, ಮ್ಯಾಕ್ಸ್​ವೆಲ್​​, ವಿಲ್​ ಜಾಕ್ಸ್​​, ಫಾಫ್​ ಡುಪ್ಲೆಸಿಸ್​ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬಿಡ್ ಮಾಡೋ ಗೋಜಿಗೆ ಹೋಗಲಿಲ್ಲ ಆರ್‌ಸಿಬಿ. ಆದರೆ ಹಾರ್ದಿಕ್‌ ಪಾಂಡ್ಯ ಬ್ರದರ್‌ ಕೃನಾಲ್ ಪಾಂಡ್ಯಗೆ ಗಾಳ ಹಾಕಿದೆ.

ಕೃನಾಲ್‌ ಪಾಂಡ್ಯ ಬೇಸ್‌ ಪ್ರೈಸ್‌ 2 ಕೋಟಿ. ಮೊದಲಿಗೆ ಕೃನಾಲ್ ಪಾಂಡ್ಯಗೆ ಯಾರು ಬಿಡ್‌ ಮಾಡಲಿಲ್ಲ. ಕೊನೆಗೆ ಆರ್‌ಸಿಬಿ ಬಿಡ್‌ ಮಾಡಿತು. ಬಳಿಕ ರಾಜಸ್ಥಾನ್, ಆರ್​​ಸಿಬಿ ಮಧ್ಯೆ ಪೈಪೋಟಿ ನಡೆಯಿತು. ಕೊನೆಗೆ ಕೃನಾಲ್​ 5.75 ಕೋಟಿಗೆ ಆರ್​​ಸಿಬಿ ತಂಡದ ಪಾಲಾದ್ರು. ಕೆ.ಎಲ್​ ರಾಹುಲ್​ ಅವರನ್ನು ಬಿಡ್​ ಮಾಡದ ಆರ್​​ಸಿಬಿಯಿಂದ ಮತ್ತೊಬ್ಬ ಕನ್ನಡಿಗನಿಗೂ ಅನ್ಯಾಯ ಆಗಿದೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ.

ಆರ್​​ಸಿಬಿ ಫ್ಯಾನ್ಸ್​ ಆಕ್ರೋಶವೇಕೆ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕೃನಾಲ್‌ ಬದಲು ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ಅವರನ್ನು ಖರೀದಿ ಮಾಡಬಹುದಿತ್ತು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಮಯಾಂಕ್‌ ಅಗರ್‌ವಾಲ್‌ ಅನ್‌ಸ್ಟೋಲ್ಡ್ ಆಗಿದ್ದಾರೆ. ಕೃನಾಲ್‌ಗೆ 5.75 ಕೋಟಿ ಕೊಡುವ ಬದಲು 1 ಕೋಟಿ ಕೊಟ್ಟು ಮಯಾಂಕ್‌ ಖರೀದಿ ಮಾಡಬೇಕಿತ್ತು ಎಂದು ಫ್ಯಾನ್ಸ್‌ ಫುಲ್ ಗರಂ ಆಗಿದ್ದಾರೆ.

ಇದನ್ನೂ ಓದಿ: 2025ರ ಐಪಿಎಲ್​; ಆರ್​​ಸಿಬಿ ತಂಡದಿಂದ ಕೊಹ್ಲಿ ಶಿಷ್ಯನನ್ನು ಕೈ ಬಿಡಲು ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment