newsfirstkannada.com

‘ಶೇಮ್​ ಆನ್​ ಯೂ ರೋಹಿತ್​​’- ಟೀಮ್​ ಇಂಡಿಯಾ ಕ್ಯಾಪ್ಟನ್​​ ವಿರುದ್ಧ ಬಹಿರಂಗ ಆಕ್ರೋಶ

Share :

Published August 7, 2024 at 7:47pm

Update August 7, 2024 at 8:01pm

    ಟೀಮ್​ ಇಂಡಿಯಾ, ಶ್ರೀಲಂಕಾ ಮಧ್ಯೆ ಕೊನೆಯ ಏಕದಿನ ಪಂದ್ಯ

    ಭಾರತ ತಂಡಕ್ಕೆ ಸವಾಲಿನ ಮೊತ್ತ ಟಾರ್ಗೆಟ್​ ಕೊಟ್ಟ ಶ್ರೀಲಂಕಾ!

    ‘ಶೇಮ್​ ಆನ್​ ಯೂ ರೋಹಿತ್​​’ ಎಂದು ಬಹಿರಂಗ ಆಕ್ರೋಶ

ಇಂದು ಆರ್​. ಪ್ರೇಮದಾಸ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಕೊನೆ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಶ್ರೀಲಂಕಾ ಸವಾಲಿನ ಮೊತ್ತ ಟಾರ್ಗೆಟ್​ ನೀಡಿದೆ. ಶ್ರೀಲಂಕಾ ನೀಡಿರೋ 249 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​​ ಇಂಡಿಯಾ ಈಗಾಗಲೇ 6 ವಿಕೆಟ್​ ಕಳೆದುಕೊಂಡಿದೆ. ಇದರ ಮಧ್ಯೆ ಕೆ.ಎಲ್​ ರಾಹುಲ್​ ಕೈ ಬಿಟ್ಟು ಪಂತ್​ ಅವರನ್ನು ಆಯ್ಕೆ ಮಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​ ಗಂಭೀರ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಟೀಮ್​ ಇಂಡಿಯಾ ಶುಭ್ಮನ್​ ಗಿಲ್​ ಮತ್ತು ರೋಹಿತ್​ ಶರ್ಮಾ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್​ಗೆ ಬಂದ ರಿಷಬ್​​​ ಪಂತ್​ ಮೇಲೆ ಟೀಮ್​ ಇಂಡಿಯಾ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದರು. ಆದರೆ, ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿದ ಪಂತ್​ ಕೇವಲ 6 ರನ್​ಗೆ ವಿಕೆಟ್​ ಒಪ್ಪಿಸಿದ್ರು.

ರೋಹಿತ್​ ಶರ್ಮಾ ವಿರುದ್ಧ ಆಕ್ರೋಶ

ಕೆ.ಎಲ್​ ರಾಹುಲ್​ ಬದಲಿಗೆ ಪಂತ್​ ಅವರನ್ನು ಆಯ್ಕೆ ಮಾಡಿದ್ದೀರಿ. ಪಂತ್​ ಒಬ್ಬ ಟೀಮ್​ ಇಂಡಿಯಾ ದೊಡ್ಡ ಫ್ರಾಡ್​​. ಕೇವಲ 6 ರನ್​ಗೆ ಔಟ್​ ಆಗಿದ್ದಾನೆ. ಕೆ.ಎಲ್​ ರಾಹುಲ್​ ಅವರನ್ನು ಕೈ ಬಿಟ್ಟಿದ್ದಕ್ಕೆ ನಿನಗೆ ನಾಚಿಕೆ ಆಗಬೇಕು ಎಂದು ರೋಹಿತ್​ ಶರ್ಮಾ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ಕೆ.ಎಲ್​ ರಾಹುಲ್​​ಗೆ ಕೊಕ್​ ನೀಡಲು ಕಾರಣವೇನು?

ಮುಂಬರೋ ಚಾಂಪಿಯನ್ಸ್ ಟ್ರೋಫಿ 2025ರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪಂತ್​ ಮತ್ತು ಕೆ.ಎಲ್​ ರಾಹುಲ್​ ಮಧ್ಯೆ ಪೈಪೋಟಿ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಮೊದಲ ಪಂದ್ಯದಲ್ಲಿ ಕೆ.ಎಲ್​​ 31 ರನ್​ ಗಳಿಸಿ ಔಟಾದ್ರು. 2ನೇ ಪಂದ್ಯದಲ್ಲಿ ಡಕ್​ ಆಗಿ ಟೀಮ್​ ಇಂಡಿಯಾ ಸೋಲಿಗೆ ಕಾರಣರಾದರು. ಹಾಗಾಗಿ ಗಂಭೀರ್​​ ಮತ್ತು ರೋಹಿತ್​​ ಕೆ.ಎಲ್​ ರಾಹುಲ್​ ಬದಲಿಗೆ ರಿಷಬ್ ಪಂತ್​​ಗೆ ಅವಕಾಶ ನೀಡಿದ್ರು. ಈ ಮೂಲಕ ಕ್ಯಾಪ್ಟನ್​​ ರೋಹಿತ್​​ ಹಠ ಸಾಧಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಶೇಮ್​ ಆನ್​ ಯೂ ರೋಹಿತ್​​’- ಟೀಮ್​ ಇಂಡಿಯಾ ಕ್ಯಾಪ್ಟನ್​​ ವಿರುದ್ಧ ಬಹಿರಂಗ ಆಕ್ರೋಶ

https://newsfirstlive.com/wp-content/uploads/2024/06/ROHIT-SHARMA-8.jpg

Load More