BCCI ಮೇಲೆ ಅಭಿಮಾನಿಗಳು ಕೋಪ.. ಕೊಹ್ಲಿ, ರೋಹಿತ್​ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ..?

author-image
Ganesh
Updated On
BCCI ಮೇಲೆ ಅಭಿಮಾನಿಗಳು ಕೋಪ.. ಕೊಹ್ಲಿ, ರೋಹಿತ್​ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ..?
Advertisment
  • ಟೆಸ್ಟ್​, ಟಿ-20Iಗೆ ಕೊಹ್ಲಿ, ರೋಹಿತ್​ ಶರ್ಮಾ ನಿವೃತ್ತಿ
  • ನಿವೃತ್ತಿ ಬಳಿಕ ಅಭಿಮಾನಿಗಳಿಗೆ ಕಾಡ್ತಿದೆ ಬೇಸರ
  • ಕೊಹ್ಲಿ, ರೋಹಿತ್​ಗೆ ಸಿಗಲಿಲ್ಲ ಅದ್ಧೂರಿ ವಿದಾಯ

ಟಿ20 ಬಳಿಕ ಟೆಸ್ಟ್​ಗೆ ಗುಡ್​ ಬೈ ಹೇಳಿದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಗೆ ಸರಿಯಾದ ಫೇರ್​ವೆಲ್​ ಸಿಗಲಿಲ್ಲ ಅನ್ನೋ ಬೇಸರ ಅಭಿಮಾನಿಗಳ ವಲಯದಲ್ಲಿದೆ. ದಿಗ್ಗಜರಿಗೆ ಗೌರವ ಸಲ್ಲಿಸಬೇಕು ಕ್ರಿಕೆಟ್​​ಗೆ ನೀಡಿದ ಸಾಧನೆಯನ್ನ ಸ್ಮರಿಸಬೇಕು ಅಂತಾ ಬಿಸಿಸಿಐ ವಲಯದಲ್ಲಿ ಸಣ್ಣ ಚರ್ಚೆಯೂ ನಡೀತಿಲ್ಲ. ಇಂತಹ ಸಂದರ್ಭದಲ್ಲಿ ವಿದೇಶಿ ಬೋರ್ಡ್​​ ಒಂದು ಜೋಡೆತ್ತುಗಳಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲು ಸ್ಪೆಷಲ್​​ ಪ್ಲಾನ್​ ರೂಪಿಸಿದೆ. ಅಕ್ಟೋಬರ್​​ನಲ್ಲಿ ಗ್ರ್ಯಾಂಡ್​​ ಗುಡ್​ ಬೈ ಹೇಳಲು ಸಿದ್ಧತೆ ಆರಂಭವಾಗಿದೆ.

ಟೆಸ್ಟ್​​ ಕ್ರಿಕೆಟ್​ನಿಂದ ವಿರಾಟ್​ ವಿದಾಯ

20 ಅಕ್ಟೋಬರ್​​ 2024.. ಅಂದು ರಾತ್ರಿ ಇಡೀ ದೇಶ ಸಂಭ್ರಮದ ಕಡಲಲ್ಲಿ ಮುಳುಗಿತ್ತು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದ ಸಂಭ್ರಮದ ಇಡೀ ದೇಶವನ್ನ ಆವರಿಸಿತ್ತು. ಟ್ರೋಫಿ ಗೆದ್ದ ಕೆಲವೇ ಕ್ಷಣಗಳಲ್ಲಿ ಫ್ಯಾನ್ಸ್​ಗೆ ಶಾಕ್​ ಎದುರಾಯ್ತು. ಕಿಂಗ್​ ವಿರಾಟ್​ ಕೊಹ್ಲಿ, ಕ್ಯಾಪ್ಟನ್​ ರೋಹಿತ್​ ಶರ್ಮಾ ಟಿ20 ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿಬಿಟ್ರು. ಟಿ20 ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದ್ದ ರೋ-ಕೊ ಜೋಡಿ, ಈ ಐಪಿಎಲ್​ ವೇಳೆ ಮತ್ತೊಂದು ಶಾಕ್​​ ನೀಡಿದ್ರು. ಸೀಸನ್​ 18ರ ಐಪಿಎಲ್​ನ ಫೀವರ್​ ಕ್ರಿಕೆಟ್​ ಲೋಕವನ್ನ ಆವರಿಸಿದ್ದ ಸಂದರ್ಭದಲ್ಲಿ ಟೆಸ್ಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿಬಿಟ್ರು. ಮೇ 7ಕ್ಕೆ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರೆ, ಅದಾದ ಐದೇ ಐದು ದಿನ ಅಂತರದಲ್ಲಿ ಕೊಹ್ಲಿ ಕೂಡ ಟೆಸ್ಟ್​​ಗೆ ವಿದಾಯ ಘೋಷಿಸಿಬಿಟ್ರು.

ದಿಗ್ಗಜರಿಗೆ ಸಿಗಲಿಲ್ಲ ಅದ್ಧೂರಿ ವಿದಾಯ..!

ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ.. ದಶಕಕ್ಕೂ ಅಧಿಕ ಕಾಲ ಭಾರತೀಯ ಕ್ರಿಕೆಟ್​ಗಾಗಿ ದಣಿವರಿಯದೆ ದುಡಿದ ಜೋಡೆತ್ತುಗಳು. ಕ್ರಿಕೆಟ್​ ಜಗತ್ತನ್ನ ಇಂದು ಟೀಮ್​ ಇಂಡಿಯಾ ಡಾಮಿನೇಟ್​ ಮಾಡ್ತಿದೆ ಅಂದ್ರೆ ಅದರ ಹಿಂದೆ ರೋಕೊ ಜೋಡಿಯ ಅಪಾರ ಶ್ರಮವಾಗಿದೆ. ಇವರಿಬ್ಬರೂ ಭಾರತೀಯ ಕ್ರಿಕೆಟ್​ಗೆ ನೀಡಿರೋ ಕೊಡುಗೆಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲ. ಇಂತಹ ದಿಗ್ಗಜರು ದಿಢೀರ್​ ನಿವೃತ್ತಿ ಘೋಷಿಸಿದ್ರು. ಹೀಗಾಗಿ ಸರಿಯಾದ ಫೇರ್​​ವೆಲ್​ ಸಿಗಲಿಲ್ಲ. ಬಿಸಿಸಿಐ ಕೂಡ ಈ ಬಗ್ಗೆ ಯೋಚಿಸಿಯೇ ಇಲ್ಲ. ಕ್ರಿಕೆಟ್​ಗೆ ಎಲ್ಲವನ್ನೂ ಕೊಟ್ಟ ಲೆಜೆಂಡ್​ಗಳಿಗೆ ಅದ್ಧೂರಿ ವಿದಾಯ ಸಿಗಲಿಲ್ಲ ಅನ್ನೋ ಬೇಸರ ಅಭಿಮಾನಿಗಳ ವಲಯವನ್ನ ಕಾಡ್ತಿದೆ. ಆ ಬೇಸರವನ್ನ ತಣಿಸಲು ಆಸ್ಟ್ರೇಲಿಯನ್​ ಕ್ರಿಕೆಟ್​ ಮಂಡಳಿ ಇದೀಗ ಮುಂದಾಗಿದೆ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್​ನ್ಯೂಸ್​.. ಯುನೈಟೆಡ್ ಸ್ಪಿರಿಟ್ಸ್ ಕಂಪನಿ ಕೊಟ್ಟ ಸ್ಪಷ್ಟನೆ ಏನು?

publive-image

ಏಕದಿನಕ್ಕೂ ಶೀಘ್ರದಲ್ಲೇ ಜೋಡೆತ್ತುಗಳ ವಿದಾಯ?

ಟೆಸ್ಟ್​, ಟಿ20ಗೆ ಗುಡ್​ ಬೈ ಹೇಳಿದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಸದ್ಯ ಏಕದಿನ ಫಾರ್ಮೆಟ್​ಗೆ ಮಾತ್ರ ಸೀಮಿತವಾಗಿದ್ದಾರೆ. 2027ರ ಏಕದಿನ ವಿಶ್ವಕಪ್​ವರೆಗೆ ಇವರಿಬ್ಬರೂ ಒನ್​ ಡೇ ಕ್ರಿಕೆಟ್​ ಆಡ್ತಾರೆ ಅನ್ನೋ ಸುದ್ದಿಯಿದೆ. ಈ ಬಗ್ಗೆ ಯಾವುದೇ ಗ್ಯಾರೆಂಟಿ ಇಲ್ಲ. ಇನ್ಮುಂದೆ ವರ್ಷದಲ್ಲಿ ಕೆಲವೇ ಕೆಲವು ದಿನ ಮೈದಾನಕ್ಕಿಳಿಯೋ ಇವರಿಬ್ಬರು 2027ರ ವಿಶ್ವಕಪ್​ ಆಡಬೇಕಂದ್ರೆ ವಯಸ್ಸು, ಫಾರ್ಮ್​, ಫಿಟ್​ನೆಸ್​, ಯುವ ಆಟಗಾರರ ಪೈಪೋಟಿಯನ್ನ ಮೀರಿ ನಿಲ್ಲಬೇಕಿದೆ. ಹೀಗಾಗಿ ಈ ದಿಗ್ಗಜರು ವಿಶ್ವಕಪ್​ಗೂ ಮುನ್ನವೇ ನಿವೃತ್ತಿ ಘೋಷಿಸಿದ್ರೂ ಅಚ್ಚರಿಪಡಬೇಕಿಲ್ಲ.

ಆಸ್ಟ್ರೇಲಿಯಾದಲ್ಲಿ ಗ್ರ್ಯಾಂಡ್​​ ಗುಡ್​ ಬೈ

ಏಕದಿನಕ್ಕೆ ಕೊಹ್ಲಿ, ರೋಹಿತ್​ ನಿವೃತ್ತಿ ಹೇಳ್ತಾರಾ? ಇಲ್ವಾ? ಅನ್ನೋದು ಗೊತ್ತಿಲ್ಲ. ಅದಾಗಲೇ ದಿಗ್ಗಜರಿಗೆ ಗ್ರ್ಯಾಂಡ್​​ ಗುಡ್​ ಬೈ ಹೇಳೋಕೆ ಸಿದ್ಧತೆ ಆರಂಭವಾಗಿದೆ. ಬಿಸಿಸಿಯ, ಐಸಿಸಿ ಅಲ್ಲ.. ಆಸ್ಟ್ರೇಲಿಯಾದ ಕ್ರಿಕೆಟ್​ ಸಂಸ್ಥೆ ಜೋಡೆತ್ತುಗಳಿಗೆ ಬೀಳ್ಕೋಡುಗೆ ನೀಡಲು ಸ್ಪೆಷಲ್​ ಪ್ಲಾನ್​ ರೂಪಿಸಿದೆ. ಮುಂಬರೋ ಅಕ್ಟೋಬರ್​ನಲ್ಲಿ ಟೀಮ್​ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಆಸ್ಟ್ರೇಲಿಯಾಗೆ ತೆರಳಲಿದೆ. ಇದು ಕೊಹ್ಲಿ-ರೋಹಿತ್​ ಶರ್ಮಾ ಪಾಲಿಗೂ ಬಹುತೇಕ ಕೊನೆಯ ಆಸ್ಟ್ರೇಲಿಯಾ ಟೂರ್​ ಆಗಲಿದೆ. ಹೀಗಾಗಿ ಈ ಪ್ರವಾಸದ ಅಂತ್ಯದಲ್ಲಿ ಇಬ್ಬರೂ ಆಟಗಾರರಿಗೆ ಅದ್ಧೂರಿ ಫೇರ್​ವೆಲ್​ ನೀಡಲು ಕ್ರಿಕೆಟ್​ ಆಸ್ಟ್ರೇಲಿಯಾ ಪ್ಲಾನ್​ ಮಾಡಿಕೊಂಡಿದೆ.

ಕೊಹ್ಲಿ,ರೋಹಿತ್​ಗೆ ಅದ್ಧೂರಿ ಬೀಳ್ಕೊಡುಗೆ
ನಮ್ಮ ದೇಶದಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಆಡುವ ಕೊನೆಯ ಸರಣಿ ಇದು ಅನ್ನಿಸ್ತಾ ಇದೆ. ಇದು ಆಗಿರಲೂಬಹುದು. ಆಗದೇನೂ ಇರಬಹುದು. ಒಂದು ವೇಳೆ ಇದೇ ಕೊನೆಯ ಪ್ರವಾಸವಾದ್ರೆ, ನಾವು ಅವರಿಗೆ ಅದ್ಧೂರಿ ಬೀಳ್ಕೊಡುಗೆ ನೀಡುತ್ತೆವೆ. ಕ್ರಿಕೆಟ್​ಗೆ ಅವರು ನೀಡಿದ ಕೊಡುಗೆಯನ್ನ ಸ್ಮರಿಸುತ್ತೇವೆ -ಟಾಡ್​​ ಗ್ರೀನ್​ಬರ್ಗ್​​​, ಕ್ರಿಕೆಟ್​ ಆಸ್ಟ್ರೇಲಿಯಾ CEO

ಇದನ್ನೂ ಓದಿ: ವಿಜಯ್ ಮಲ್ಯಗೆ ತಪ್ಪದ ಸಂಕಷ್ಟಗಳು.. ಸಾಲ, ಬಡ್ಡಿ, ಚಕ್ರ ಬಡ್ಡಿಯ ಅಸಲಿ ಲೆಕ್ಕಾಚಾರ ಇಲ್ಲಿದೆ..!

publive-image

ಕೊಹ್ಲಿ ಭಾರತೀಯ ಕ್ರಿಕೆಟಿಗನಾಗಿದ್ರೂ ಆಸ್ಟ್ರೇಲಿಯಾದಲ್ಲಿ ಸಪರೇಟ್​ ಫ್ಯಾನ್​ ಬೇಸ್​ ಹೊಂದಿದ್ದಾರೆ. ಎಷ್ಟೋ ಆಸ್ಟ್ರೇಲಿಯನ್​ ಆಟಗಾರರಿಗೆ ಇಲ್ಲ. ಅದಕ್ಕಿಂತ ಹೆಚ್ಚಿನ ಅಭಿಮಾನಿಗಳು ವಿರಾಟ್​​ ಕೊಹ್ಲಿಗಿದ್ದಾರೆ. ಅಲ್ಲಿನ ಪ್ರಧಾನಿ ಅಂಟೋನಿ ಅಲ್ಬನೆಸ್​​ಯಿಂದ ಹಿಡಿದು ಸಾಮಾನ್ಯ ಜನರವೆಗೆ ಕೊಹ್ಲಿ ಅಭಿಮಾನಿಗಳ ದೊಡ್ಡ ಬಳಗ ಇದೆ. ಹಿಟ್​​ ಮ್ಯಾನ್​ ರೋಹಿತ್​ ಶರ್ಮಾಗೂ ಕಾಂಗರೂ ನಾಡಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಇಬ್ಬರು ದಿಗ್ಗಜರಿಗಿರೋ ಫ್ಯಾನ್​ ಬೇಸ್​ ಬೀಳ್ಕೊಡುಗೆ ನೀಡಲು ಕ್ರಿಕೆಟ್​​ ಆಸ್ಟ್ರೇಲಿಯಾ ಚಿಂತಿಸಿರೋದ್ರ ಹಿಂದಿನ ಪ್ರಮುಖ ಕಾರಣವಾಗಿದೆ.

ಭಾರತೀಯ ಕ್ರಿಕೆಟ್​ ಮಾತ್ರವಲ್ಲ.. ವಿಶ್ವ ಕ್ರಿಕೆಟ್​ಗೆ ರೋಹಿತ್​-ಕೊಹ್ಲಿ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಕ್ರಿಕೆಟ್​​ನ ಜನಪ್ರಿಯತೆ ಹೆಚ್ಚಿಸುವಲ್ಲಿ ಇಬ್ಬರೂ ಕೆಲಸ ಮಾಡಿದ್ದಾರೆ. ಯುವ ಆಟಗಾರರ ಪಾಲಿಗೆ ರೋಲ್​ ಮಾಡೆಲ್​. ಇಬ್ಬರೂ ದಿಗ್ಗಜರಿಗೆ ಫೇರ್​​ವೆಲ್​ ನೀಡಿ ಅವರ ಕೊಡುಗೆಯನ್ನ ಸ್ಮರಿಸೋ ಕ್ರಿಕೆಟ್​ ಆಸ್ಟ್ರೇಲಿಯಾದ ನಿರ್ಧಾರ ಸ್ವಾಗತಾರ್ಹ. ಇದನ್ನ ನೋಡಿದ ಮೇಲಾದ್ರೂ ನಮ್ಮ ಬಿಸಿಸಿಐ ಎಚ್ಚೆತ್ತುಕೊಂಡು ದಿಗ್ಗಜರ ಫೇರ್​​ವೆಲ್​ಗೆ ಪ್ಲಾನ್​ ರೂಪಿಸಬೇಕಿದೆ.

ಇದನ್ನೂ ಓದಿ: ಕಾಲ್ತುಳಿತ ಪ್ರಕರಣ.. ಬಿಸಿಸಿಐ ನಿರ್ಧಾರದಿಂದ KSCAಗೆ ಭಾರೀ ಪೆಟ್ಟು..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment