/newsfirstlive-kannada/media/post_attachments/wp-content/uploads/2025/06/RCB-32.jpg)
ಹೊರ ಜಗತ್ತಿಗೆ ಅಸಂಖ್ಯ ಅಭಿಮಾನಿಗಳೇ ಅವ್ರೆ ಆರ್ಸಿಬಿ ತಂಡದ ಶಕ್ತಿ. 2008ರಿಂದ 2025.. ಈ ಸುದೀರ್ಘ 25 ವರ್ಷಗಳ ಪ್ರಯಾಣದಲ್ಲಿ ಸೀಸನ್ನಿಂದ ಸೀಸನ್ಗೆ ತಂಡದ ಮೇಲೆ ಅಭಿಮಾನಿಗಳ ಪ್ರೀತಿ ಹೆಚ್ಚಾಗ್ತಿದ್ಯೇ ಹೊರತು ಒಂದು ಪರ್ಸೆಂಟ್ ಕೂಡ ಕಡಿಮೆಯಾಗಿಲ್ಲ. ಇಡೀ ಕರ್ನಾಟಕ ಜನ ಆರ್ಸಿಬಿ ಕೇಳಿದಕ್ಕಿಂತ ಹೆಚ್ಚಾಗಿ ಪ್ರೀತಿ ನೀಡಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಮಾಲೀಕರು ಫ್ಯಾನ್ಸ್ನ ಜಸ್ಟ್ ಬ್ಯುಸಿನೆಸ್ ಆ್ಯಂಗಲ್ನಲ್ಲಿ ನೋಡ್ತಿದ್ದಾರೆ. ಅಭಿಮಾನಿಗಳ ಅಭಿಮಾನ ಇವರಿಗೆ ಬಂಡವಾಳ.
17 ವರ್ಷಗಳು.. ಸೋಲು, ಹತಾಶೆ, ಹಿನ್ನಡೆಯನ್ನೇ ಹಾಸುಹೊದ್ದಿದ್ದ ಅಸಂಖ್ಯ ಛಿದ್ರವಾದ ಹೃದಯಗಳು. ಈ ಸುದೀರ್ಘ ಕಾಯುವಿಕೆ, ನೋವು ಕೊನೆಗೂ ಈ ಸೀಸನ್ನಲ್ಲಿ ಅಂತ್ಯವಾಯ್ತು. ಲಾಯಲ್ ಅಭಿಮಾನಿಗಳ ಪ್ರಾರ್ಥನೆಗೆ ಕೊನೆಗೂ ಆ ದೇವರು ಕಣ್ಣು ಬಿಟ್ಟು. 17 ವರ್ಷಗಳು ಕನಸು ನನಸಾಗಿ 18 ಗಂಟೆಯೂ ಕಳೆದಿರಲಿಲ್ಲ. ಅದ್ಯಾರ ಕಣ್ಣು ಬಿತ್ತೋ.. ಘೋರ ದುರಂತ ನಡೆದು ಬಿಡ್ತು.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣದಲ್ಲಿ ವಿರಾಟ್ ಕೊಹ್ಲಿಗೂ ಸಂಕಷ್ಟ.. ದಾಖಲಾಯ್ತು ಕೇಸ್..!
ಅಭಿಮಾನಿಗಳ ಪ್ರಾರ್ಥನೆಗೆ ದೇವರು ಕೃಪೆ ತೋರಿದ ಧನ್ಯವಾದ ಹೇಳಬೇಕೋ? ಅಥವಾ ಸಂಭ್ರಮವನ್ನ ಅಷ್ಟೇ ವೇಗವಾಗಿ ಕಿತ್ತುಕೊಂಡ ಎಂದು ಶಪಸಿಬೇಕೋ? ಒಂದೋ ಗೊತ್ತಾಗ್ತಿಲ್ಲ. 11 ಜನ ಅಮಾಯಕ ಅಭಿಮಾನಿಗಳ ಸಾವಿಗೆ ಕಾರಣ ಯಾರು? ಹಲವರು ಗಾಯ ಮಾಡಿಕೊಂಡು ನೋವಲ್ಲಿ ನರಳಾಡ್ತಿದ್ದಾರಲ್ಲಾ ಇದಕ್ಕೆ ಹೊಣೆ ಯಾರು? ಇದಕ್ಕೆ ಉತ್ತರ ಆರ್ಸಿಬಿ ಮ್ಯಾನೇಜ್ಮೆಂಟ್. ಮತ್ತವರ ಬ್ಯುಸಿನೆಸ್ ಮೈಂಡ್ಸೆಟ್.
ಅಭಿಮಾನಿಗಳ ಅಭಿಮಾನ ಫ್ರಾಂಚೈಸಿಯ ಬಂಡವಾಳ..!
ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮವನ್ನ ಹೋಮ್ಗ್ರೌಂಡ್ನಲ್ಲಿ ಅಭಿಮಾನಿಗಳ ಮುಂದೆ ಮಾಡಬೇಕು ಅನ್ನೋದೆಲ್ಲಾ ಸರಿ. ಹಾಗಂತ ಅಲ್ಲೂ ಬ್ಯುಸಿನೆಸ್ ಲೆಕ್ಕಾಚಾರ ಹಾಕಿದ್ದು ಸರೀನಾ? ಕಪ್ ತಂದು ಅಭಿಮಾನಗಳ ಮುಂದೆ ಸೆಲಬ್ರೇಟ್ ಮಾಡಬೇಕು ಅನ್ನೋದೊಂದೆ ಫ್ರಾಂಚೈಸಿಯ ಉದ್ದೇಶವಾಗಿರಲಿಲ್ಲ. ತಮ್ಮ ತಂಡಕ್ಕಿರೋ ಅಭಿಮಾನಿಗಳ ಬಲವನ್ನ ಇಡೀ ವಿಶ್ವಕ್ಕೆ ಮತ್ತೊಮ್ಮೆ ತೋರಿಸೋ ಲೆಕ್ಕಾಚಾರವೂ ಇತ್ತು. ಈ ಇವೆಂಟ್ ಸರಿಯಾಗಿ ನಡೆದಿದ್ರೆ ತಂಡದ ಬ್ರ್ಯಾಂಡ್ವ್ಯಾಲ್ಯೂ ಮತ್ತಷ್ಟು ಹೆಚ್ಚಾಗ್ತಾ ಇತ್ತು ಅನ್ನೋದ್ರಲ್ಲಿ ಡೌಟೇ ಬೇಡ.
ಇದನ್ನೂ ಓದಿ: ಟ್ರೋಫಿ ಗೆಲ್ಲಿಸಿಕೊಟ್ಟ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ.. ಝೀರೋ ಟು ಹೀರೋ..!
ಫೈನಲ್ ಪಂದ್ಯದ ಬಳಿಕ ಆಟಗಾರರ ಈ ವರ್ಷದ ಕಾಂಟ್ರ್ಯಾಕ್ಟ್ ಮುಗಿಯುತ್ತೆ. ಟೈಮ್ ತೆಗೆದುಕೊಂಡು 2 ದಿನ ತಡೆದು ಸರಿಯಾಗಿ ಪ್ಲಾನ್ ಮಾಡಿ ಸೆಲಬ್ರೇಷನ್ ಮಾಡೋಕೆ ಹೊರಟ್ರೆ, ಹಲವು ಆಟಗಾರರು ತವರಿಗೆ ಹೋಗೋ ಸಾಧ್ಯತೆಯಿತ್ತು. ಗೆದ್ದ ಜೋಷ್ ಕಡಿಮೆಯಾಗ್ತಿತ್ತು. ಈವೆಂಟ್ಗೆ ಕಳೆಗುಂದೋ ಸಾಧ್ಯತೆಯಿತ್ತು. ಹೀಗಾಗಿಯೇ ಫ್ರಾಂಚೈಸಿ ಪಂದ್ಯ ಮುಗಿದ ಬೆನ್ನಲ್ಲೇ ತುರಾತುರಿಯಲ್ಲಿ ಕಾರ್ಯಕ್ರಮವನ್ನ ಆಯೋಜಿಸಿತು. ಸರಿಯಾದ ಪ್ಲಾನ್ ಇಲ್ಲದೆ ಪೊಲೀಸರ ಸಲಹೆಯನ್ನ ಗಾಳಿಗೆ ತೂರಿ ಕಾರ್ಯಕ್ರಮ ಆಯೋಜಿಸಿದ್ದು ಅಮಾಯಕರ ಸಾವಿಗೆ ಕಾರಣವಾಯ್ತು.
ಫ್ಯಾನ್ಸ್ ಪ್ರಾಣ ಕಳೆದುಕೊಂಡ್ರೂ ನಿಲ್ಲಲಿಲ್ಲ ಸಂಭ್ರಮ
ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಆರ್ಸಿಬಿ ವಿಧಾನಸೌದದಿಂದ ಸ್ಟೇಡಿಯಂಗೆ ಬರೋಕೆ ಮುನ್ನವೇ ಕಾಲ್ತುಳಿತ ಸಂಭ್ರವಿಸಿತ್ತು. ಇದ್ರ ಮಾಹಿತಿ ಗೊತ್ತಿದ್ದೂ ಸ್ಟೇಡಿಯಂ ಒಳಗೆ ಫ್ರಾಂಚೈಸಿ ಸಂಭ್ರಮಾಚರಣೆ ನಡೆಸಿತು. ಸಂತಾಪ ಸೂಚಿಸಲಿಲ್ಲ, ವಿಷಾದ ವ್ಯಕ್ತಪಡಿಸಲಿಲ್ಲ. ಕನಿಷ್ಟ ಪಕ್ಷ ಸುರಕ್ಷಿತ ಮನೆಗೆ ಹೋಗಿ. ಅವಸರ ಬೇಡ ಎಂಬ ಒಂದು ಹೇಳಿಕೆಯನ್ನಾದ್ರೂ ಕೊಡಿಸಬಹುದಿತ್ತಲ್ವಾ?
ಕನ್ನಡಿಗರು ಅಂದ್ರೆ ಫ್ರಾಂಚೈಸಿಗೆ ಸದಾ ಅಸಡ್ಡೆ
ಕನ್ನಡಿಗರ ವಿಚಾರದಲ್ಲಿ ಫ್ರಾಂಚೈಸಿಗೆ ಅಸಡ್ಡೆ.. ಆರಂಭಿಕ ಸೀಸನ್ ಹೊರತುಪಡಿಸಿದ್ರೆ, ಉಳಿದ ಸೀಸನ್ಗಳಲ್ಲಿ ಕರ್ನಾಟಕದ ಆಟಗಾರರು ಲೆಕ್ಕಕ್ಕಿದ್ರು. ಆಟಕ್ಕಿರಲಿಲ್ಲ..! ಆಕ್ಷನ್ನಲ್ಲೂ ಅಷ್ಟೇ.. ವಿದೇಶಿ ಆಟಗಾರರ ಮೇಲೆಲ್ಲಾ ಕೋಟಿ-ಕೋಟಿ ಸುರಿಯೋ ಫ್ರಾಂಚೈಸಿ ಕನ್ನಡಿಗರಿಗೆ ಬಿಡ್ ಮಾಡೋಕೆ ಹಿಂದೆ ಮುಂದೆ ನೋಡೋದು ಜಗತ್ತಿಗೆ ಗೊತ್ತು. ಮೆಗಾ ಆಕ್ಷನ್ನಲ್ಲಿ ಕೆ.ಎಲ್ ರಾಹುಲ್ ಖರೀದಿ ವಿಚಾರದಲ್ಲಿ ಮಾಡಿದ್ದೂ ಅದನ್ನೇ.
ಇದನ್ನೂ ಓದಿ: KSCAಗೆ ತಾತ್ಕಾಲಿಕ ರಿಲೀಫ್ ಕೊಟ್ಟ ಹೈಕೋರ್ಟ್.. RCB ನಿಖಿಲ್ ಸೋಸಲೆ ವಿಚಾರಣೆ ಏನಾಯ್ತು..?
ಒಬ್ಬೆ ಒಬ್ಬ ಸಪೋರ್ಟ್ ಸ್ಟಾಫ್ ಕನ್ನಡದವರಿಲ್ಲ
ಜಂಟಲ್ಮನ್ ಗೇಮ್ಗೆ ಲೆಜೆಂಡ್ಗಳನ್ನ ಉಡುಗೊರೆಯಾಗಿ ನೀಡಿದ ರಾಜ್ಯ ನಮ್ದು. ಆದ್ರೆ, ಆ ಲೆಜೆಂಡ್ಗಳ್ಯಾರೂ ಆರ್ಸಿಬಿಗೆ ಬೇಡ. ಇಡೀ ಆರ್ಸಿಬಿ ತಂಡದ ಸಪೋರ್ಟ್ ಸ್ಟಾಫ್ನಲ್ಲಿ ಒಬ್ಬೇ ಒಬ್ಬ ಕನ್ನಡಿಗ ಇಲ್ಲ. ಇಷ್ಟರಮಟ್ಟಿಗೆ ಕನ್ನಡಿಗರನ್ನ ನಗ್ಲೆಟ್ ಮಾಡೋ ಫ್ರಾಂಚೈಸಿ ತನ್ನ ಕೆಟ್ಟ ನಿರ್ಧಾರ ತಳೆದು 11 ಮಂದಿ ಕನ್ನಡಿಗರ ಬಲಿ ಪಡೆದಿದೆ. ಮುಂದಾದ್ರೂ ಆರ್ಸಿಬಿ ಕನ್ನಡಿಗರು, ಕರ್ನಾಟಕ, ಮುಖ್ಯವಾಗಿ ಅಭಿಮಾನಿಗಳ ವಿಚಾರದಲ್ಲಿ ಬದಲಾಗಬೇಕಿದೆ.
ಇದನ್ನೂ ಓದಿ: ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಮೇಲೆ ತಿರಂಗ ಧ್ವಜ ಹಾರಿಸಿದ ಪ್ರಧಾನಿ; ಮೋದಿ ಸಂಭ್ರಮದ ಕ್ಷಣಗಳು ಇಲ್ಲಿದೆ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ