/newsfirstlive-kannada/media/post_attachments/wp-content/uploads/2024/11/Rasikh-Dar.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪೂರ್ಣಗೊಂಡಿದೆ. ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆನ್‌ಕ್ಯಾಪ್ಡ್ ಯುವ ವೇಗದ ಬೌಲರ್ ರಸಿಖ್ ದಾರ್ ಮೇಲೆ ಕೋಟಿ ಕೋಟಿ ಸುರಿದಿದೆ.
ರಾಸಿಖ್ ದಾರ್ ಅವರಿಗೆ ಆರ್‌ಸಿಬಿ ಫ್ರಾಂಚೈಸಿ ಬರೋಬ್ಬರಿ 6 ಕೋಟಿ ನೀಡಿ ಬಿಡ್ ಮಾಡಿದೆ. ರಸಿಖ್ ದಾರ್ ಉತ್ತಮ ವೇಗದ ಬೌಲರ್ ಆಗಿದ್ದು, ಈ ಹಿಂದೆ ಐಪಿಎಲ್‌ನಲ್ಲಿ ಆಡಿದ ಅನುಭವ ಇದೆ.
ಈಗಾಗಲೇ ಆರ್‌ಸಿಬಿ ಆಸ್ಟ್ರೇಲಿಯಾ ವೇಗದ ಬೌಲರ್ ಜೋಶ್ ಹೆಜಲ್ವುಡ್ ಅವರನ್ನು 12.50 ಕೋಟಿಗೆ ಖರೀದಿ ಮಾಡಿತ್ತು. ಈ ಬೆನ್ನಲ್ಲೇ ಬೌಲಿಂಗ್ ವಿಭಾಗಕ್ಕೆ ಮತ್ತೋರ್ವ ಆಟಗಾರ ರಸಿಖ್ ದಾರ್ ಅವರನ್ನು ಸೇರಿಸಿಕೊಂಡಿದೆ.
ಯಾರು ಈ ರಸಿಖ್ ದರ್?
ಜಮ್ಮು ಕಾಶ್ಮೀರದ ಯುವ ವೇಗಿ ರಸಿಖ್ ದರ್. ಇವರು ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ರಸಿಖ್ ತಾವು ಆಡಿದ 11 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಪಡೆದಿದ್ದಾರೆ.
ಫ್ಯಾನ್ಸ್ ಭಾರೀ ಆಕ್ರೋಶ
ಅನ್ಕ್ಯಾಪ್ಡ್ ಪ್ಲೇಯರ್ ಮೇಲೆ ಕೋಟಿ ಕೋಟಿ ಸುರಿದಿದ್ದಕ್ಕೆ ಆರ್‌ಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಹೆಸರೇ ಗೊತ್ತಿಲ್ಲದ ಆಟಗಾರನ ಖರೀದಿ ಮಾಡಲು ಬೇಕಾದಷ್ಟು ಹಣ ಇದೆ. ಆದರೆ, ಕನ್ನಡಿಗರನ್ನು ಖರೀದಿ ಮಾಡಲು ನಿಮ್ಮ ಬಳಿ ಹಣ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: IPL 2025: RCB ಸೇರಿದ್ದೇ ತಡ ಕೇವಲ 15 ಬಾಲ್ನಲ್ಲಿ 50 ರನ್ ಚಚ್ಚಿದ್ದ ಸ್ಟಾರ್ ಪ್ಲೇಯರ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್