newsfirstkannada.com

‘ನಾಚಿಕೆ ಆಗಬೇಕು ನಿನಗೆ’- ಕನ್ನಡಿಗ ರಾಹುಲ್​​ ವಿರುದ್ಧ ಆಕ್ರೋಶ ಹೊರಹಾಕಿದ ಫ್ಯಾನ್ಸ್​​

Share :

Published May 8, 2024 at 9:00pm

  ಇಂದು ಲಕ್ನೋ ಸೂಪರ್​ ಜೈಂಟ್ಸ್​​​, ಹೈದರಾಬಾದ್​​ ಮಧ್ಯೆ ರೋಚಕ ಪಂದ್ಯ

  ಕನ್ನಡಿಗ ಕೆ.ಎಲ್​​ ರಾಹುಲ್​ ಕೈಯಲ್ಲಿ ಆರ್​​ಸಿಬಿ ತಂಡದ ಪ್ಲೇ ಆಫ್​ ಭವಿಷ್ಯ

  ಟಾಸ್​ ಗೆದ್ದ ಕೆ.ಎಲ್​​ ರಾಹುಲ್​ ನೇತೃತ್ವದ ಲಕ್ನೋ ಟೀಮ್​ ಬ್ಯಾಟಿಂಗ್​ ಆಯ್ಕೆ

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​ ಅರ್ಧ ಮುಗಿದು ಹೋಗಿದೆ. ಇಂದು ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 57ನೇ ಐಪಿಎಲ್​ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿ ಆಗುತ್ತಿವೆ.

ಇನ್ನು, ಟಾಸ್​ ಗೆದ್ದ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​​ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಬೌಲಿಂಗ್​ ಮಾಡಲಿದೆ.

ಲಕ್ನೋ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​​ ಮತ್ತೆ ತನ್ನ ತಂಡಕ್ಕೆ ಕೈ ಕೊಟ್ಟಿದ್ದಾರೆ. ಪ್ಲೇ ಆಫ್​ಗೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಹುಲ್​ ಕೇವಲ ಸಿಂಗಲ್ಸ್​ ಆಡಿದ್ದಾರೆ. ಅದು 33 ಬಾಲ್​ನಲ್ಲಿ 29 ರನ್​​ ಗಳಿಸಿ ಔಟಾಗಿದ್ದಾರೆ. ಇವರ ಸ್ಟ್ರೈಕ್​ ರೇಟ್​ 90ಕ್ಕಿಂತಲೂ ಕಡಿಮೆ. ಟಿ20 ಪಂದ್ಯದಲ್ಲಿ ಟೆಸ್ಟ್​ ಆಡಿದಂತೆ ಆಡಿದ ಕಾರಣ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಇನ್ನು, ಟಿ20 ವಿಶ್ವಕಪ್​ಗೆ ಟೀಮ್​​ ಇಂಡಿಯಾದಿಂದ ಕೆ.ಎಲ್​ ರಾಹುಲ್​ ಅವರನ್ನು ಕೈ ಬಿಡಲಾಗಿದೆ. ಯಾಕೆ ಕೈ ಬಿಟ್ಟರು ಅನ್ನೋದಕ್ಕೆ ರಾಹುಲ್​ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಷ್ಟು ಸ್ಲೋ ಇನ್ನಿಂಗ್ಸ್​​ ತಂಡವನ್ನು ಸೋಲಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ ನಾಚಿಕೆ ಆಗಬೇಕು ಹೀಗೆ ಬ್ಯಾಟಿಂಗ್​ ಮಾಡೋದಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಲಕ್ನೋ ಫಸ್ಟ್​ ಬ್ಯಾಟಿಂಗ್​​.. ಕನ್ನಡಿಗನ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​​ ಭವಿಷ್ಯ; ಏನಿದು ಸ್ಟೋರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ನಾಚಿಕೆ ಆಗಬೇಕು ನಿನಗೆ’- ಕನ್ನಡಿಗ ರಾಹುಲ್​​ ವಿರುದ್ಧ ಆಕ್ರೋಶ ಹೊರಹಾಕಿದ ಫ್ಯಾನ್ಸ್​​

https://newsfirstlive.com/wp-content/uploads/2024/05/KL-Rahul_LSG_1.jpg

Load More