/newsfirstlive-kannada/media/post_attachments/wp-content/uploads/2024/06/Rohit-Sharma_out.jpg)
ಇಂದು ಬಾರ್ಬಡೋಸ್ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯುತ್ತಿರೋ 2024ರ ಟಿ20 ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ, ಟೀಮ್ ಇಂಡಿಯಾ ಮುಖಾಮುಖಿ ಆಗಿವೆ. ಹೇಗಾದ್ರೂ ಮಾಡಿ ಫೈನಲ್ ಗೆದ್ದು ಟ್ರೋಫಿ ತಮ್ಮದಾಗಿಸಿಕೊಳ್ಳಬೇಕು ಎಂದು ಎರಡು ತಂಡಗಳು ಪೈಪೋಟಿ ನಡೆಸುತ್ತಿವೆ.
ಇನ್ನು, ಟಾಸ್ ಗೆದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಏಡನ್ ಮರ್ಕ್ರಮ್ ನಾಯಕತ್ವದ ಸೌತ್ ಆಫ್ರಿಕಾ ಬೌಲಿಂಗ್ ಮಾಡುತ್ತಿದೆ.
ಟೀಮ್ ಇಂಡಿಯಾದ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಎಂದಿನಂತೆ ಅಬ್ಬರಿಸಲು ಮುಂದಾದ್ರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಶುರು ಮಾಡಿದ ರೋಹಿತ್ ಕೇಶವ್ ಮಹಾರಾಜ್ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಚಚ್ಚಿದ್ರು. ಬಳಿಕ ಮತ್ತೊಂದು ಬೌಂಡರಿ ಬಾರಿಸಲು ಹೋಗಿ ರೋಹಿತ್ ಕ್ಯಾಚ್ ಕೊಟ್ಟರು.
ತಾನು ಆಡಿದ 3 ಬಾಲ್ನಲ್ಲಿ 2 ಫೋರ್ ಸಮೇತ 9 ರನ್ ಗಳಿಸಿ ಪೆವಿಲಿಯನ್ಗೆ ತೆರಳಿದ್ರು. ಐಸಿಸಿ ಮೆಗಾ ಟೂರ್ನಮೆಂಟ್ನಲ್ಲಿ ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ರೋಹಿತ್ ಶರ್ಮಾ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ವಿಶೇಷ ಸೂಚನೆ:ಟಾಸ್ ಗೆದ್ದ ಕ್ಯಾಪ್ಟನ್ ರೋಹಿತ್ನಿಂದ ಅಚ್ಚರಿ ನಿರ್ಧಾರ.. ಬಲಿಷ್ಠ ಟೀಮ್ ಇಂಡಿಯಾ ಕಣಕ್ಕೆ!
ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ