Advertisment

ದರ್ಶನ್​ ರಿಲೀಸ್​​ಗೆ ಫುಲ್​ ಖುಷ್​! ಕಾರು ಫಾಲೋ ಮಾಡಿದ ​​ಫ್ಯಾನ್ಸ್​​.. ಲಾಠಿ ಬೀಸಿದ ಪೊಲೀಸರು

author-image
AS Harshith
Updated On
ದರ್ಶನ್​ ರಿಲೀಸ್​​ಗೆ ಫುಲ್​ ಖುಷ್​! ಕಾರು ಫಾಲೋ ಮಾಡಿದ ​​ಫ್ಯಾನ್ಸ್​​.. ಲಾಠಿ ಬೀಸಿದ ಪೊಲೀಸರು
Advertisment
  • ಜೈಲಿಂದ ದರ್ಶನ್​ ರಿಲೀಸ್​.. ಅಭಿಮಾನಿಗಳು ಫುಲ್​ಖುಷ್​​
  • ರಸ್ತೆಯುದ್ದಕ್ಕೂ ದರ್ಶನ್​ ಕಾರನ್ನು ಫಾಲೋ ಮಾಡಿ ಸೆಲೆಬ್ರೇಷನ್
  • ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ ಫ್ಯಾನ್ಸ್​

ಕೊಲೆ ಕೇಸ್​ನಲ್ಲಿ 131 ದಿನಗಳ ಜೈಲಿನಲ್ಲಿದ್ದ ದರ್ಶನ್​, ಬಿಡುಗಡೆಯಾಗಿದ್ದಾರೆ. ದರ್ಶನ್ ಜೈಲಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ. ತಮ್ಮ ನೆಚ್ಚಿನ ನಟ ದರ್ಶನ್​ನನ್ನು​ ನೋಡಲು ಅಭಿಮಾನಿಗಳು ಹರಸಾಹಸ ಪಟ್ಟಿದ್ದಾರೆ.

ಟೋಲ್​ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು

Advertisment

ಬಳ್ಳಾರಿಯಿಂದ ಬೆಂಗಳೂರಿನ ಕಡೆ ಪಯಣ ಬೆಳೆಸಿದ ದಾರಿಯಲ್ಲೆಲ್ಲ ದರ್ಶನ್ ಫ್ಯಾನ್ಸ್ ಸೆಲೆಬ್ರೇಷನ್ ಮಾಡಿದ್ರು. ದರ್ಶನ್ ಕಾರನ್ನು ಫಾಲೋ ಮಾಡುತ್ತಾ ಜಯಘೋಷ ಹಾಕಿದ್ರು. ಬಾಗೇಪಲ್ಲಿ ಟೋಲ್ ಬಳಿ ಅವರ ಅಭಿಮಾನಿಗಳು ದರ್ಶನ್ ಅವರನ್ನ ನೋಡಲು ಮುಗಿಬಿದ್ದ ದೃಶ್ಯಗಳು ಕಂಡು ಬಂದ್ವು. ಕೆಲವರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ರು.

publive-image

ರಾತ್ರಿಯಿಡೀ ದರ್ಶನ್​ ಮನೆ ಮುಂದೆ ಇದ್ದ ಅಭಿಮಾನಿಗಳು​

ನಟ ದರ್ಶನ್​ ಬೆಂಗಳೂರಿಗೆ ಬರುತ್ತಿರುವ ಸುದ್ದಿ ಕೇಳ್ತಿದ್ದ ಅಭಿಮಾನಿಗಳು ದರ್ಶನ್​ ನಿವಾಸದತ್ತ ದೌಡಾಯಿಸಿದ್ರು. ಹೊಸಕೆರೆ ಹಳ್ಳಿಯಲ್ಲಿರುವ ವಿಜಯಲಕ್ಷ್ಮಿ ಅಪಾರ್ಟ್​ಮೆಂಟ್​ ಬಳಿ ಅಭಿಮಾನಿಗಳು ಜಮಾಯಿಸಿದ್ರು. ದರ್ಶನ್​ನನ್ನು ನೋಡಬೇಕೆಂದು ಪಟ್ಟು ಹಿಡಿದು ಕಾದು ನಿಂತಿದ್ರು. ಈ ವೇಳೆ ಸ್ಥಳಕ್ಕೆ ಬಂದ ದರ್ಶನ್​ ಪುತ್ರ ವಿನೇಶ್​, ಮನೆಗಳಿಗೆ ತೆರಳುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ್ರು.

Advertisment

publive-image

ದರ್ಶನ್​ ಫ್ಯಾನ್ಸ್​ ನಿಯಂತ್ರಸಲು ಪೊಲೀಸರ ಹರಸಾಹಸ

ಇನ್ನು ಹೊಸಕೆರೆಹಳ್ಳಿಯ ಅಪಾರ್ಟ್​ಮೆಂಟ್​ ಬಳಿ ಜಮಾಯಿಸಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸ್​ ಸಿಬ್ಬಂದಿ ಹರಸಾಹಸವನ್ನೇ ಪಟ್ರು. ಒಂದು ಹಂತದಲ್ಲಿ ಪೊಲೀಸರು ಲಾಠಿ ಬೀಸುವ ಮೂಲಕ ಗುಂಪು ಚದುರಿಸಲು ಹರಸಾಹಸ ಪಟ್ರು.

ಒಟ್ಟಾರೆ ದರ್ಶನ್​ಗೆ ಬೇಲ್​ ಸಿಕ್ಕಿರುವ ಖುಷಿಯಿಂದ ಕಳೆದ ರಾತ್ರಿಯೇ ದರ್ಶನ್​ ಅಭಿಮಾನಿಗಳು ಹಬ್ಬವನ್ನು ಆಚರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment