/newsfirstlive-kannada/media/post_attachments/wp-content/uploads/2024/07/DARSHAN-14.jpg)
ಮುಂಬೈ: ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್​ ಈಗ ಒಂದು ಮುದ್ದಾದ ಮಗಳಿಗೆ ತಂದೆ ತಾಯಿ ಆಗಿದ್ದಾರೆ. ಎರಡು ವರ್ಷದ ಅವರ ದಾಂಪತ್ಯದ ಮಧುರ ಗುರುತಾಗಿ ರಾಜಕುಮಾರಿಯೊಬ್ಬಳು ಈಗಾಗಲೇ ರಹಾ ಕಪೂರ್ ಅನ್ನೋ ಹೆಸರಿನಲ್ಲಿ ಮನೆ ತುಂಬಾ ತಪ್ಪಿದ ಹೆಜ್ಜೆಗಳನ್ನಿಡುತ್ತಾ ನಡೆಯುತ್ತಿದ್ದಾಳೆ. ಅಂದಿನಿಂದ ಇಂದಿನವರೆಗೂ ತಮ್ಮ ಮುಂದ್ದಾದ ಮಗುವಿಗೆ ಸಮಯ ಕೊಡುವುದರಲ್ಲಿ ಇಬ್ಬರೂ ಹಿಂದೆ ಬಿದ್ದಿಲ್ಲ. ಅವಳಿಗಾಗಿ ಒಬ್ಬರಲ್ಲದಿದ್ದರೆ ಮತ್ತೊಬ್ಬರು ಸಮಯವನ್ನು ನೀಡುತ್ತಾ ರಾಜಕುಮಾರಿಯಂತೆಯೇ ಬೆಳೆಸುತ್ತಿದ್ದಾರೆ. ಈ ನಡುವೆ ಆಲಿಯಾ ರಣಬೀರ್ ಪುತ್ರಿ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದಾಳೆ. ಅದು ಆಗಿದ್ದು ಇಷ್ಟೇ!
/newsfirstlive-kannada/media/post_attachments/wp-content/uploads/2024/07/DARSHAN-15.jpg)
ಜುಲೈ 28 ರಂದು ರಹಾ ಕಪೂರ್ ಹಾಗೂ ರಣಬೀರ್ ಕೆಲವೊಂದಿಷ್ಟು ಸುಂದರ ಸಮಯಗಳನ್ನು ಕಳೆದಿದ್ದರು. ಮಗಳೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ರು. ಫೋಟೋ ಮತ್ತು ವಿಡಿಯೋಗಳಲ್ಲಿ ತಂದೆ ಮಗಳಿಬ್ಬರು ಅದ್ಭುತವಾಗಿ ಕಾಣುತ್ತಿದ್ದರು. ಗ್ರೇ ಕಲರ್ ಟೀ ಶರ್ಟ್​ನಲ್ಲಿ ಡ್ಯಾಶಿಂಗ್ ಲುಕ್​ನಲ್ಲಿ ರಣಬೀರ್ ಮಿಂಚುತ್ತಿದ್ರೆ, ಶ್ವೇತವಸ್ತ್ರದ ಬಣ್ಣದಲ್ಲಿ ರಹಾ ಮುದ್ದು ಮುದ್ದಾಗಿ ಕಾಣುತ್ತಿದ್ದಳು. ಮುಖದಲ್ಲಿನ ಆ ಮುದ್ದು ಖುದ್ದು ಅವಳ ತಾಯಿಯನ್ನೇ ಜ್ಞಾಪಿಸುತ್ತಿತ್ತು. ಇದನ್ನು ನೋಡಿದ ಅಭಿಮಾನಿಗಳು ರಹಾ ಆಲಿಯಾಳ ಕಾರ್ಬನ್ ಕಾಪಿ ಎಂದೇ ಚೆಂದವಾಗಿ ಛೇಡಿಸುತ್ತಿದ್ದಾರೆ.
we got raha kapoor smiling at paparazzi before GTA 6 ??? SHES SUCH A CUTIE pic.twitter.com/pWqzCqlN6j
— ? (@softiealiaa)
we got raha kapoor smiling at paparazzi before GTA 6 😭😭😭 SHES SUCH A CUTIE pic.twitter.com/pWqzCqlN6j
— 🍕 (@softiealiaa) July 28, 2024
">July 28, 2024
/newsfirstlive-kannada/media/post_attachments/wp-content/uploads/2024/07/DARSHAN-16.jpg)
ಇಷ್ಟು ಮಾತ್ರವಲ್ಲ ಅಭಿಮಾನಿಗಳು ಇನ್ನೂ ಕೆಲವು ವಿಷಯಗಳನ್ನು ರಹಾಳನ್ನು ಆಲಿಯಾಗೆ ಹೋಲಿಸಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಾಯಿ ಮಗಳ ಇಬ್ಬರ ಫೋಟೋವನ್ನು ಕೊಲೇಜ್ ಮಾಡಿ ಇಬ್ಬರೂ ಒಂದೇ ತರ ಕಾಣುತ್ತಿದ್ದೀರಾ, ನಿಮ್ಮ ಮುದ್ದು ಮುಖವೇ ಮಗಳ ಮುಖದಲ್ಲಿ ಇಳಿದು ಬಂದಿದೆ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲದೇ ಮಿನಿ ಆಲೂ ಅಂತೆಲ್ಲಾ ಶಿರ್ಷಿಕೆಗಳನ್ನು ಕೊಟ್ಟು ಸಂತಸವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us