/newsfirstlive-kannada/media/post_attachments/wp-content/uploads/2025/06/rcb19.jpg)
ಶಿವಮೊಗ್ಗ: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೈಕ್ ಱಲಿಯಲ್ಲಿ ಯುವಕನೊರ್ವ ಮೃತಪಟ್ಟಿದ್ದ. ಮೃತಪಟ್ಟ ದುರ್ದೈವಿ ಹೆಸರು ಅಭಿಷೇಕ್ (21) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಆರ್‌ಸಿಬಿ ಭಲೇ.. ಭೇಷ್..! ತಮಿಳುನಾಡು ಸಿಎಂ MK ಸ್ಟಾಲಿನ್ ಬೆಂಗಳೂರು ತಂಡಕ್ಕೆ, ಕೊಹ್ಲಿ ಬಗ್ಗೆ ಏನಂದ್ರು?
ಮೃತ ಯುವಕ ಶಿವಮೊಗ್ಗದ ವೆಂಕಟೇಶ ನಗರದ ನಿವಾಸಿಯಾಗಿದ್ದ. ಈತ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದ. ಇನ್ನೂ, ನಿನ್ನೆ ಆರ್‌ಸಿಬಿ ಗೆದ್ದ ಖುಷಿಯಲ್ಲಿ ಬೈಕ್ ನಡೆಯುತ್ತಿತ್ತು. ಆದ್ರೆ ಇದೇ ಱಲಿಯ ವೇಳೆ ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಂ ವೃತ್ತದ ಬಳಿ ನಡೆದ ಘಟನೆಯಲ್ಲಿ ಯುವಕ ಬಲಿಯಾಗಿದ್ದಾನೆ. ಬೈಕ್ಗಳ ನಡುವೆ ಸಂಭವಿಸಿದ ಡಿಕ್ಕಿಯಿಂದ ಯುವಕನ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ