ಮುಂದಿನ ಸೀಸನ್ 11 ಬಗ್ಗೆ ಶುರುವಾಗಿದೆ ಚರ್ಚೆ
ಇಂದು ಬಿಗ್ ಬಾಸ್ ಸೀಸನ್ 10 ಫಿನಾಲೆ ಕಾರ್ಯಕ್ರಮ
ಯಾರು ಗೊತ್ತಾ ಆ ಸ್ಪರ್ಧಿ? ಯಾಕಷ್ಟು ಡಿಮ್ಯಾಂಡ್? ಇಲ್ಲಿದೆ ಮಾಹಿತಿ
ಬಿಗ್ ಬಾಸ್ ಸೀಸನ್ 10ಗೆ ವಿರಾಮ ಹೇಳುವ ಸಮಯ ಬಂದಿದೆ. ಇಂದು ಫಿನಾಲೆ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ವಿಜಯ ಶಾಲಿಯನ್ನು ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ. ಅಲ್ಲಿಗೆ 2023ರ ಬಿಗ್ ಬಾಸ್ ವಿನ್ನರ್ ಯಾರೆಂಬುದು ಗೊತ್ತಾಗಲಿದೆ. ಆದರೆ ಅದಕ್ಕೂ ಮುನ್ನವೇ ಮುಂಬರುವ ಸೀಸನ್ 11 ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಸ್ಪರ್ಧಿಯೊಬ್ಬರಿಗೆ ಭಾರೀ ಡಿಮ್ಯಾಂಡ್ ಬಂದಿದ್ದು, ಫ್ಯಾನ್ಸ್ ಸೀಸನ್ 11ನಲ್ಲಿ ಇವರನ್ನ ಸ್ಪರ್ಧಿಯಾಗಿ ಬರಮಾಡಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸೀಸನ್ 10ರ 5ನೇ ರನ್ನರ್ ಯಾರೆಂಬುದನ್ನು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ತುಕಾಲಿ ಸಂತೋಷ್ 5ನೇ ರನ್ನರ್ ಅಪ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಇವರು ಮನೆಯಿಂದ ಹೊರ ಬಂದಿದ್ದೇ ತಡ, ಇವರ ಪತ್ನಿ ಮಾನಸ ಬಗ್ಗೆ ತುಕಾಲಿ ಫ್ಯಾನ್ಸ್ ಮಾತನಾಡುತ್ತಿದ್ದಾರೆ. ಮಾತ್ರವಲ್ಲದೆ ಮುಂದಿನ ಸೀಸನ್ 11ನಲ್ಲಿ ತುಕಾಲಿ ಮಡದಿಯನ್ನು ಸ್ಪರ್ಧಿಯಾಗಿ ಬರಮಾಡಿಕೊಳ್ಳಿ ಎಂದು ಬಿಗ್ ಬಾಸ್ ಬಳಿ ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೊತೆಗೆ ಡಿಮ್ಯಾಂಡ್ ಕೂಡ ಕೇಳಿಬರುತ್ತಿದೆ.
ಬಿಗ್ ಬಾಸ್ ಸೀಸನ್ 10ನಲ್ಲಿ ದೊಡ್ಮನೆಗೆ ತುಕಾಲಿ ಅವರ ಮಡದಿಯನ್ನು ಕರೆಸಿಕೊಂಡಿದ್ದರು. ಈ ವೇಳೆ ನಕ್ಕು ನಗಿಸುವಂತೆ ಮಾತನಾಡುತ್ತಾ, ತುಕಾಲಿ ಸಂತೋಷ್ಗೆ ಬಾರಿಸುತ್ತಾ ಎಲ್ಲರ ಗಮನಸೆಳೆದಿದ್ದರು. ಹೀಗಾಗಿ ತುಕಾಲಿ ಫ್ಯಾನ್ಸ್ ಮಾನಸ ಅವರನ್ನು ಮುಂದಿನ ಸೀಸನ್ 11ಗೆ ಬರಮಾಡಿಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಇಂದು ಸೀಸನ್ 10 ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ. ದೊಡ್ಮನೆಯಲ್ಲಿ ಐದು ಜನರು ಉಳಿದುಕೊಂಡಿದ್ದು, ವಿನಯ್, ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್ ಮತ್ತು ಡ್ರೋನ್ ಪ್ರತಾಪ್ ಮೇಲೆ ಎಲ್ಲರ ಕಣ್ಣಿದೆ. ಈ ಐವರಲ್ಲಿ ನಾಲ್ವರು ರನ್ನರ್ ಅಪ್ ಆದರೆ, ಓರ್ವ ವಿನ್ನರ್ ಆಗಲಿದ್ದಾರೆ. ಈ ಕ್ಷಣವನ್ನು ಕಾಣಲು ಬಿಗ್ ಬಾಸ್ ಮತ್ತು ಕಿಚ್ಚನ ಫ್ಯಾನ್ಸ್ ಕಾದು ಕುಳಿತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ