ಫಾಫ್​​ ಕೆಳಗಿಳಿಸಿ ಕೊಹ್ಲಿಗೆ ಪಟ್ಟ ಕಟ್ಟುತ್ತಾ..? ಅಭಿಮಾನಿಗಳ ಚಿತ್ತ ಆರ್​ಸಿಬಿಯತ್ತ..!!

author-image
Ganesh
Updated On
‘ಅಂದಿನ ಆರ್​​​ಸಿಬಿ ಮ್ಯಾಚ್​​ ಸೋಲಿಗೆ ಈತನೇ ಕಾರಣ’- ಬೇಸರ ಹೊರಹಾಕಿದ ಕ್ಯಾಪ್ಟನ್​ ಫಾಫ್​​!
Advertisment
  • ವಿರಾಟ್ ಕೊಹ್ಲಿಗೆ ಮತ್ತೆ ಆರ್​ಸಿಬಿ ಕ್ಯಾಪ್ಟನ್ಸಿ ಪಟ್ಟ?
  • ಕೊಹ್ಲಿ ನಾಯಕತ್ವ ನೀಡಿದ್ರೆ ಸಮಸ್ಯೆಗೆ ಪರಿಹಾರ?
  • ವಿರಾಟ್​​ಗೆ ಪಟ್ಟ ಕಟ್ಟಿದರೆ ಆಗುವ ಲಾಭವೇನು?

ಸತತ ಸೋಲುಗಳಿಂದ ಆರ್​ಸಿಬಿ ಕಂಗೆಟ್ಟಿದೆ. ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಸೋತು ಹೀನಾಯ ಪ್ರದರ್ಶನ ಸ್ಥಿತಿ ತಲುಪಿದೆ. ಇದೇ ಕಳಪೆಯಾಟ ಮುಂದುವರಿದ್ರೆ ಆರ್​ಸಿಬಿ ಪ್ಲೇ ಆಫ್​ ಕನಸು ನುಚ್ಚು ನೂರಾಗಲಿದೆ. ಇದೀಗ ಉಳಿವಿಗಾಗಿ ಆರ್​ಸಿಬಿ ಮುಂದಿರುವುದು ಒಂದೇ ದಾರಿ.

ಸೋಲು.. ಸೋಲು.. ಸೋಲು.. ಪ್ರಸಕ್ತ ಆವೃತ್ತಿಯಲ್ಲಿ ಸೋಲೇ ಆರ್​ಸಿಬಿ ಕೇರ್​ ಆಫ್ ಅಡ್ರೆಸ್​ ಆಗಿದೆ. ಫಾಫ್ ಡುಪ್ಲೆಸಿ ನಾಯಕತ್ವದಲ್ಲಿ ಈ ಹಿಂದಿಗಿಂತಲೂ ಹೀನಾಯ ಪ್ರದರ್ಶನ ನೀಡ್ತಿದೆ. ಹೋರಾಟದ ಪ್ರತಿರೋಧವೂ ತೋರದೆ ಶರಣಾಗ್ತಿದೆ. ಅಳಿವು ಉಳಿವಿನ ಅಂಚಿನಲ್ಲಿರುವ ಆರ್​ಸಿಬಿ, ಸೋಲಿಗೆ ಬ್ರೇಕ್ ಹಾಕಬೇಕಾದ್ರೆ ಇರೋದು ಒಂದೇ ಮಾರ್ಗ.. ಅದೇ ವಿರಾಟ್ ಕೊಹ್ಲಿ..
ಆರ್​ಸಿಬಿ ಪುಟಿದೇಳಬೇಕಾದ್ರೆ, ಆರ್​ಸಿಬಿ ಮ್ಯಾನೇಜ್​​ಮೆಂಟ್ ಮುಂದಿರೋ ಏಕೈಕ ದಾರಿ ಅಂದ್ರೆ ಅದು ವಿರಾಟ್​ ಕೊಹ್ಲಿ. ಕಿಂಗ್​​ ಕೊಹ್ಲಿಯನ್ನ ಹೇಗಾದ್ರು ಕನ್ವಿನ್ಸ್​ ಮಾಡಿ ಮತ್ತೆ ನಾಯಕನ ಪಟ್ಟಕಟ್ಟಬೇಕಿದೆ. ಇಲ್ಲಿದಿದ್ರೆ ಇದೇ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವೇ ಗತಿ.

publive-image

ನಾಯಕನಾಗಿ ವಿರಾಟ್ ಸಕ್ಸಸ್​.. ಅಪಾಯಕಾರಿ..!
ವಿರಾಟ್ ಕೊಹ್ಲಿ.. ಆರ್​ಸಿಬಿಯ ಸಕ್ಸಸ್​ ಫುಲ್ ಕ್ಯಾಪ್ಟನ್.. 9 ವರ್ಷಗಳ ಕಾಲ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ 141 ಪಂದ್ಯಗಳ ನಾಯಕತ್ವ ವಹಿಸಿದ್ದ ವಿರಾಟ್, 65ರಲ್ಲಿ ಗೆದ್ದು ಬೀಗಿದ್ದಾರೆ. ತಂಡವನ್ನ ಫೈನಲ್ಸ್​ಗೆ ಕೊಡೊಂಯ್ದ ಖ್ಯಾತಿಯೀ ವಿರಾಟ್​ಗೆ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ನಾಯಕನಾಗಿದ್ದಾಗ ಬ್ಯಾಟಿಂಗ್​ನಲ್ಲೂ ವಿಶ್ವರೂಪ ತೋರಿದ್ದಾರೆ.

ಇದನ್ನೂ ಓದಿ: ಚೆಪಾಕ್​​ನಲ್ಲಿ ಧೋನಿ ಅಭಿಮಾನಿಗಳಿಗೆ ಚಮಕ್ ಕೊಟ್ಟ ರವಿಂದ್ರ ಜಡೇಜಾ -Video

publive-image

ವಿರಾಟ್​ ಅಗ್ರೆಸ್ಸಿವ್ ಆಟ​​​​​​​​​​​​​​​​​​​​​​​​, ತಂಡಕ್ಕೆ ಹೊಸ ಉತ್ಸಾಹ..!
ಕೊಹ್ಲಿ ಆಕ್ರಮಣಕಾರಿ ಆಟ ನಮಗೆ ಗೊತ್ತೇ ಇದೆ. ವಿರಾಟ್​, ನಾಯಕತ್ವದ ಜವಾಬ್ದಾರಿಯಲ್ಲಿ ಇದ್ದಷ್ಟು ದಿನ ಎದುರಾಳಿಗಳಿಗೆ ಅಪಾಯವೇ ಹೆಚ್ಚು. ಆಕ್ರಮಣಕಾರಿ ನಾಯಕತ್ವದ ಮನೋಭಾವ ಹೊಂದಿರುವ ಕೊಹ್ಲಿ, ಏಟಿಗೆ ಏಟು ಎಂಬ ಲೆಕ್ಕಾಚಾರದಲ್ಲಿ ಇರ್ತಾರೆ. ವಿರಾಟ್​ ಕೊಹ್ಲಿಯ ಈ ಆಕ್ರಮಣಕಾರಿ ಆಟ, ತಂಡಕ್ಕೆ ಹೊಸ ಉತ್ಸಾಹವನ್ನ ತುಂಬುತ್ತೆ.

ಇದನ್ನೂ ಓದಿ:‘ನನ್ನ ಪಾಲಿಗೆ ಆಕೆ ಸತ್ತಂತೆ..’ ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿ ಹೆತ್ತ ತಂದೆ ಆಕ್ರೋಶ

ಆಟಗಾರರನ್ನ ಮೋಟಿವೇಟ್​​ ಮಾಡೋ ಮೋಡಿಗಾರ ಕೊಹ್ಲಿ!
ಆಟಗಾರರಲ್ಲಿ ಸ್ಫೂರ್ತಿ ತುಂಬುವ ಕಲೆಯೇ ವಿರಾಟ್​ ಕೊಹ್ಲಿಯ ಮೇನ್ ಕ್ವಾಲಿಟಿ. ತಂಡ ಸೋಲಿನ ಅಂಚಿನಲ್ಲಿದಾಗಲೂ ತನ್ನ ಮಾತು ನಡೆಯಿಂದಲೇ ತಂಡಕ್ಕೆ ನೆರವಾಗ್ತಾರೆ. ಆಟಗಾರರನ್ನ ಹುರಿದುಂಬಿಸುತ್ತಾರೆ. ಇದು ತಂಡದಲ್ಲಿ ಹೋರಾಟದ ಮನೋಭಾವದ ಕಿಚ್ಚನ್ನೇ ಹೆಚ್ಚಿಸುತ್ತೆ. ಈ ಕಲೆ ನಾಯಕ ಫಾಫ್ ಡುಪ್ಲೆಸಿಯಲ್ಲಿ ಕಾಣೆಯಾಗಿದೆ.

ಇದನ್ನೂ ಓದಿ:ಯುಗಾದಿ ಅಮವಾಸ್ಯೆ ದಿನ ವಿದ್ರಾವಕ ಘಟನೆ; ದೇವರ ಪಲ್ಲಕ್ಕಿ ಹೊತ್ತು ಸ್ನಾನ ಮಾಡುವಾಗ ಇಬ್ಬರು ಮಕ್ಕಳು ಸಾವು

publive-image

ವಿರಾಟ್​ ಕೊಹ್ಲಿಯ ಲೀಡರ್​ಶಿಪ್​ ಕ್ವಾಲಿಟಿ..!
ವಿರಾಟ್ ಕೊಹ್ಲಿ ಗ್ರೇಟ್​ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಪ್ರತಿ ಹಂತದಲ್ಲಿ ಆಟಗಾರರ ಬೆನ್ನಿಗೆ ನಿಲ್ಲುವ ಗುಣ ಇದೆ. ಸಹ ಆಟಗಾರರನ ಬೆನ್ನಿಗೆ ನಿಲ್ಲುವ ವಿರಾಟ್, ವೈಫಲ್ಯದ ಕಂಡಾಗಲೂ ಜೋಶ್ ತುಂಬುತ್ತಾರೆ. ಡೇರಿಂಗ್ ಡಿಸಿಷನ್ ಮೇಕರ್ ಆಗಿರೋ ವಿರಾಟ್, ಪರಿಪಕ್ವ ನಾಯಕ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ PSI ಜಗದೀಶ್ ಬರ್ಬರ ಹತ್ಯೆ ಕೇಸ್; ಅಪರಾಧಿಗೆ ಜೀವಾವಧಿ ಶಿಕ್ಷೆ

ಕೊಹ್ಲಿ ಕ್ಯಾಪ್ಟನ್ಸಿ ತಂಡದ ಸಂಯೋಜನೆಗೆ ನೆರವು
ವಿರಾಟ್​ ಕೊಹ್ಲಿಗೆ ನಾಯಕತ್ವ ನೀಡಿದ್ರೆ, ತಂಡಕ್ಕೆ ಬಿಗ್ ಪ್ಲಸ್ ಪಾಯಿಂಟ್. ಯಾಕಂದ್ರೆ, ಫಾರ್ಮ್​ನಲ್ಲಿ ಇಲ್ಲದಿದ್ದರೂ, ನಾಯಕ ಎಂಬ ಕಾರಣಕ್ಕೆ ಫಾಫ್​​ಗೆ ಪ್ಲೇಯಿಂಗ್​​ ಇಲೆವೆನ್ನಲ್ಲಿ ಸ್ಥಾನ ನೀಡಬೇಕಾಗಿದೆ. ಇದ್ರಿಂದಾಗಿ ವಿಲ್ ಜಾಕ್ಸ್​, ಲೂಕಿ ಫರ್ಗೂಸನ್ ಬೆಂಚ್ ಕಾಯುವಂತಾಗಿದೆ. ಅಕಸ್ಮಾತ್ ಕೊಹ್ಲಿಗೆ ಪಟ್ಟ ಕಟ್ಟಿದ್ರೆ, ತಂಡದ ಆಯ್ಕೆ ವಿಚಾರದಲ್ಲಿ ಸಹಾಯವಾಗಲಿದೆ. ಆದ್ರೆ, ಇಂಥ ಬಿಗ್ ಡಿಶಿಷನ್ ಮ್ಯಾನೇಜ್​ಮೆಂಟ್ ಕೈ ಹಾಕುತ್ತಾ.? ಕಾದು ನೋಡಬೇಕಿದೆ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment