/newsfirstlive-kannada/media/post_attachments/wp-content/uploads/2025/06/Rohit-Kohli.jpg)
ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾರ್ಚ್ 7 ರಂದು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಹೇಳಿದರು. ಬೆನ್ನಲ್ಲೇ ಮಾರ್ಚ್ 12 ರಂದು ವಿರಾಟ್ ಕೊಹ್ಲಿ ಗುಡ್ಬೈ ಹೇಳಿದರು. 2024ರಲ್ಲಿ ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಈ ದೋಸ್ತಿಗಳು, ಟಿ-20 ಕ್ರಿಕೆಟ್ಗೂ ವಿದಾಯ ಹೇಳಿದ್ದಾರೆ. ಟಿ-20 ವಿಶ್ವಕಪ್ ಗೆಲ್ಲುವ ಮೂಲಕ ಇಬ್ಬರು ದಂತಕತೆಗಳಿಗೆ ಒಳ್ಳೆಯ ವಿದಾಯ ಸಿಕ್ಕಿತ್ತು.
ಆದರೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಸಂದರ್ಭದಲ್ಲಿ ಯಾವುದೇ ಬೀಳ್ಕೊಡಿಗೆ ಸಿಕ್ಕಿಲ್ಲ. ಕ್ರಿಕೆಟ್ ಲೋಕ ಕಂಡ ಇಬ್ಬರು ದಂತೆಕತೆಗಳು ಇವರು. ಕ್ರಿಕೆಟ್ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಈ ದಿಗ್ಗಜರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ವಿಶೇಷ ಗೌರವ ನೀಡೋದಾಗಿ ಘೋಷಿಸಿದೆ.
ಅಂದ್ಹಾಗೆ ಇವರಿಬ್ಬರು ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಮುಂದಿನ ಅಕ್ಟೋಬರ್ನಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯನ್ನು ಆಡಲು ಆಸ್ಟ್ರೇಲಿಯಾಗೆ ಹೋಗಲಿದೆ. ಈ ವೇಳೆ ರೋಹಿತ್ ಮತ್ತು ಕೊಹ್ಲಿ ಟೀಂ ಇಂಡಿಯಾದ ಭಾಗವಾಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ವಿದಾಯದ ಸರಣಿಯಾಗಿ ಏರ್ಪಡಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಆಂಗ್ಲರ ಕಾಡಲು ದೋಸ್ತಿಗಳು ರೆಡಿ.. ರೋಹಿತ್ ಸ್ಥಾನಕ್ಕೆ ರಾಹುಲ್, ಕೊಹ್ಲಿ ಸ್ಲಾಟ್ಗೆ ಮತ್ತೊಬ್ಬ ಕನ್ನಡಿಗ..!
🚨 FAREWELL FOR KOHLI AND ROHIT. 🚨
- Cricket Australia is planning a special farewell for Virat Kohli and Rohit Sharma during India's ODI tour as it'll potentially be their last matches Down Under. (Cricexec). pic.twitter.com/N7m6soDoJD— Mufaddal Vohra (@mufaddal_vohra) June 8, 2025
ಇಬ್ಬರು ದಂತಕತೆಗಳು ಆಸ್ಟ್ರೇಲಿಯಾ ಪ್ರವಾಸವನ್ನು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಬೀಳ್ಕೊಡುಗೆ ನೀಡಲು ಆಸ್ಟ್ರೇಲಿಯಾ ಕ್ರಿಕೆಟ್ ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ. ಯಾಕೆಂದರೆ ರೋಹಿತ್ ಮತ್ತು ಕೊಹ್ಲಿ ಆಸ್ಟ್ರೇಲಿಯಾಗೆ ಮತ್ತೆ ಟೀಂ ಇಂಡಿಯಾದ ಭಾಗವಾಗಿ ಬ್ಯಾಟ್ ಬಿಸಲು ಬರುತ್ತಾರೆ ಅನ್ನೋದಕ್ಕೆ ಗ್ಯಾರಂಟಿ ಇಲ್ಲ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಇಂಥ ಪ್ಲಾನ್ ಮಾಡಿದೆ.
ಟೀಂ ಇಂಡಿಯಾಗೆ ದೀರ್ಘಕಾಲ ಸೇವೆ ಸಲ್ಲಿಸಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಇಬ್ಬರು ಸ್ಟಾರ್ ಆಟಗಾರರು 2027 ರ ಏಕದಿನ ವಿಶ್ವಕಪ್ ವರೆಗೆ ಆಡಲು ಬಯಸಿದ್ದಾರೆ. ಮುಂದಿನ ವಿಶ್ವಕಪ್ ಗೆದ್ದ ನಂತರವೇ ಇಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲು ಬಯಸುತ್ತಾರೆ. ಆದರೆ ಅಲ್ಲಿಯವರೆಗೆ ಇಬ್ಬರು ಆಟಗಾರರು ಫಾರ್ಮ್ನಲ್ಲಿ ಇರೋದು ಮುಖ್ಯವಾಗಿದೆ.
ಇದನ್ನೂ ಓದಿ: ಪಂತ್, ಗಿಲ್ ಅಲ್ಲವೇ ಅಲ್ಲ.. ರೋಹಿತ್ ನಂತರ ODI ಕ್ಯಾಪ್ಟನ್ಸಿ ಪಟ್ಟ ಈ ಆಟಗಾರನಿಗೆ ಬಹುತೇಕ ಫಿಕ್ಸ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ