newsfirstkannada.com

3 ವರ್ಷ 72 ಬಾರಿ ಹಾರಾಟ.. ಮಂಗಳ ಗ್ರಹದಲ್ಲಿ ‘ನಾಸಾ’ ಹೆಲಿಕಾಪ್ಟರ್‌ಗೆ ಕೊನೆಗೂ ವಿದಾಯ; ಸಾಧನೆ ಏನು?

Share :

Published January 27, 2024 at 3:37pm

Update January 27, 2024 at 3:46pm

  2021ರಲ್ಲಿ ಮಂಗಳ ಗ್ರಹದ ಅಧ್ಯಯನಕ್ಕೆ ಹೋಗಿದ್ದ ‘ಇಂಜೆನ್ಯುಯಿಟಿ’

  ಮೂರು ವರ್ಷದಲ್ಲಿ 72 ಬಾರಿ ಹಾರಾಟ ನಡೆಸಿದ್ದ ನಾಸಾ ಹೆಲಿಕಾಪ್ಟರ್

  ನಾಸಾ ಹೆಲಿಕಾಪ್ಟರ್‌ ‘ಇಂಜೆನ್ಯುಯಿಟಿ’ಗೆ ವಿಜ್ಞಾನಿಗಳಿಂದ ವಿದಾಯ

ವಾಷಿಂಗ್ಟನ್‌: 2021ರಲ್ಲಿ ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ಅಮೆರಿಕಾದ ನಾಸಾದ ಬಾಹ್ಯಾಕಾಶ ನೌಕೆ ತನ್ನ ಕಾರ್ಯ ನಿಲ್ಲಿಸಿದೆ. ಬರೋಬ್ಬರಿ 3 ವರ್ಷಗಳ ಕಾಲ ಮಂಗಳ ಗ್ರಹದಲ್ಲಿದ್ದ ನಾಸಾದ ಇಂಜೆನ್ಯುಯಿಟಿ ತನ್ನ ಹಾರಾಟವನ್ನು ನಿಲ್ಲಿಸಿದೆ ಎಂದು ನಾಸಾ ವಿಜ್ಞಾನಿಗಳು ಬಹಳ ನೋವಿನ ವಿದಾಯ ಹೇಳಿದ್ದಾರೆ.

ನಾಸಾದ ಇಂಜೆನ್ಯುಯಿಟಿಯನ್ನು ಮಿನಿ ಹೆಲಿಕಾಪ್ಟರ್‌ ಎಂದೇ ಕರೆಯಲಾಗಿತ್ತು. ಇದು 1.8 ಕೆಜಿ ತೂಕವಿದ್ದು ಇನ್ಮುಂದೆ ಹಾರಾಟ ನಡೆಸುವುದಿಲ್ಲ. ಮಂಗಳ ಗ್ರಹದಲ್ಲಿ ಇಂಜೆನ್ಯುಯಿಟಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಕೊನೆಯ ಬಾರಿ ಮಂಗಳ ಗ್ರಹದಲ್ಲಿ ಹಾರಾಟ ನಡೆಸಿದ್ದ ಇಂಜೆನ್ಯುಯಿಟಿ ಹೆಲಿಕಾಪ್ಟರ್‌ನ ರೆಕ್ಕೆಗಳು ಜಖಂಗೊಂಡಿದ್ದವು. ಹೀಗಾಗಿ ಇದರ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮಂಗಳ ಗ್ರಹದಲ್ಲಿ ಬಿದ್ದಿರುವ ನೌಕೆಯು ಹಾರಾಟ ನಡೆಸುವುದನ್ನ ನಿಲ್ಲಿಸಿದ್ದರು ನಾಸಾ ವಿಜ್ಞಾನಿಗಳ ನಿಯಂತ್ರಣದಲ್ಲೇ ಇರಲಿದೆ. 2021ರಲ್ಲಿ ಇಂಜೆನ್ಯುಯಿಟಿ ರೊಬೊಟಿಕ್ ಹೆಲಿಕಾಪ್ಟರ್‌ ಮಂಗಳ ಗ್ರಹವನ್ನು ತಲುಪಿತ್ತು. ಕಳೆದ ಮೂರು ವರ್ಷಗಳಲ್ಲಿ ಇದು 19 ಕಿಲೋ ಮೀಟರ್ ದೂರ 72 ಬಾರಿ ಹಾರಾಟ ನಡೆಸಿದೆ. ಈ ಹೆಲಿಕಾಪ್ಟರ್ ಮಂಗಳ ಗ್ರಹದ ಅಸಾಧಾರಣ ವಾತಾವರಣದಲ್ಲಿ ನಿರೀಕ್ಷಿಸಿದಕ್ಕಿಂತಲೂ ಎತ್ತರದಲ್ಲಿ ಹಾರಾಟ ನಡೆಸಿತ್ತು.

ಇಂಜೆನ್ಯುಯಿಟಿ ರೊಬೊಟಿಕ್ ಹೆಲಿಕಾಪ್ಟರ್‌ ತನ್ನ ಹಾರಾಟವನ್ನು ನಿಲ್ಲಿಸಿರೋದು ನಾಸಾ ವಿಜ್ಞಾನಿಗಳಿಗೆ ಬಹಳಷ್ಟು ನೋವಿನ ವಿಚಾರವಾಗಿದೆ. ಇಷ್ಟು ದಿನ ಇದರ ಜೊತೆ ಕೆಲಸ ಮಾಡಿದ ನಾಸಾ ತಂಡ ಭಾವುಕವಾಗಿ ಇದಕ್ಕೆ ವಿದಾಯ ಹೇಳಿದೆ. ಇಂಜೆನ್ಯುಯಿಟಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ವರ್ಷ 72 ಬಾರಿ ಹಾರಾಟ.. ಮಂಗಳ ಗ್ರಹದಲ್ಲಿ ‘ನಾಸಾ’ ಹೆಲಿಕಾಪ್ಟರ್‌ಗೆ ಕೊನೆಗೂ ವಿದಾಯ; ಸಾಧನೆ ಏನು?

https://newsfirstlive.com/wp-content/uploads/2024/01/NAsa-3.jpg

Load More