/newsfirstlive-kannada/media/post_attachments/wp-content/uploads/2025/07/FARMER-2.jpg)
ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ KIADB ಭೂಸ್ವಾಧೀನ ವಿರೋಧಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ಈ ಹೋರಾಟಕ್ಕೆ ಬರ್ತಿದ್ದ ಓರ್ವ ರೈತ ಮುಖಂಡ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುಂಡ್ಲುಪೇಟೆಯ ಕುರಿಹುಂಡಿ ಮೂಲದ ಈಶ್ವರಪ್ಪ ನಿಧನರಾಗಿದ್ದಾರೆ. ಈಶ್ವರಪ್ಪ ರೈಲಿನಲ್ಲಿ ಪ್ರಯಾಣ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಹೊರಗೆ ಬಂದಾಗ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಾಜ್ಯದ ಹಲವು ರೈತಪರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಜೂನ್ 27ರಿಂದಲೂ ಫ್ರೀಡಂ ಪಾರ್ಕ್​ನಲ್ಲಿ ಹೋರಾಟ ನಡೆಯುತ್ತಿದೆ. ಇಂದು ರಾಷ್ಟ್ರೀಯ ಮಟ್ಟದ ರೈತ ಮುಖಂಡರು ಭಾಗಿಯಾಗುತ್ತಿದ್ದಾರೆ. ರೈತರ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಕೂಡ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಒಳ್ಳೆಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ.. ಎಷ್ಟು ರೂಪಾಯಿ?
ಇತ್ತೀಚೆಗೆ ‘ದೇವನಹಳ್ಳಿ ಚಲೋ’ಗೆ ರೈತರು ಕರೆ ಕೊಟ್ಟಿದ್ದರು. ಆಗ ಕೆಲವು ರೈತ ಮುಖಂಡರನ್ನು ಬಂಧಿಸಲಾಗಿದೆ. ಅವರನ್ನು, ಬಿಡುಗಡೆ ಮಾಡಬೇಕು. ಕೆಐಎಡಿಬಿಯನ್ನ ರದ್ದುಗೊಳಿಸಬೇಕು. ರೈತರ ಬಂಧನಕ್ಕೆ ಕಾರಣವಾದ ಡಿಸಿಪಿ ಸಜಿತ್ ಅವರನ್ನ ಅಮಾನತುಗೊಳಿಸಲು ರೈತರು ಆಗ್ರಹಿಸುತ್ತಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ 1777 ಎಕರೆ ಸ್ವಾಧೀನಕ್ಕೆ ತಯಾರಿ ಕೆಐಎಡಿಬಿ ತಯಾರಿ ನಡೆಸ್ತಿದೆ. ಅದರ ವಿರುದ್ಧ ರೈತರು ಹೋರಾಟ ನಡೆಸ್ತಿದ್ದಾರೆ.
ಇದನ್ನೂ ಓದಿ: ನಡ್ಡಾ ಉತ್ತರಾಧಿಕಾರಿಗೆ ಮೂವರು ನಾಯಕಿಯರು ಫೈಟ್​.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಯಾರಿಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ