/newsfirstlive-kannada/media/post_attachments/wp-content/uploads/2024/08/RCB_MAXWELL.jpg)
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿದ ನಂತರ ಈ ಯುವ ಬ್ಯಾಟರ್​ ಹೀರೋ ಆಗಿದ್ದಾರೆ. ಇನ್ನೇನು ಐಪಿಎಲ್ 2025ರ ಮೆಗಾ ಹರಾಜು ಸಮೀಪಿಸುತ್ತಿದ್ದು, ಈ ಯುವ ಬ್ಯಾಟರ್​ ​ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಯುವ ಬ್ಯಾಟರ್​ ಮತ್ಯಾರು ಅಲ್ಲ, ದೆಹಲಿ ಮೂಲದ ಅನೂಜ್​ ರಾವತ್​​.
ಶತಕ ಸಿಡಿಸಿ ಆರ್​​ಸಿಬಿ ಗಮನ ಸೆಳೆದ ಅನೂಜ್​​!
ಇತ್ತೀಚೆಗೆ ಪುರಾಣಿ ಡೆಲ್ಲಿ, ಈಸ್ಟ್ ಡೆಲ್ಲಿ ರೈಡರ್ಸ್ ಮಧ್ಯೆ ಡಿಪಿಎಲ್​ನ 26ನೇ ಪಂದ್ಯ ನಡೆಯಿತು. ಈಸ್ಟ್ ಡೆಲ್ಲಿ ರೈಡರ್ಸ್ ಪರ ಓಪನರ್​ ಆಗಿ ಬಂದಿದ್ದ ಅನೂಜ್​ ರಾವತ್​​ ಸುಜಲ್​ ಸಿಂಗ್​ಗೆ ಸಾಥ್​ ನೀಡಿದ್ರು. ಮೊದಲ ಓವರ್​ನಿಂದಲೂ ಬ್ಯಾಟ್​ ಬೀಸಿದ ಇವರು​​​ 20ನೇ ಓವರ್​ಗೂ ಕ್ರೀಸ್​​ನಲ್ಲೇ ನಿಂತು ಅಜೇಯರಾಗಿ ಉಳಿದರು. ಇನ್ನಿಂಗ್ಸ್​ ಉದ್ಧಕ್ಕೂ ಎದುರಾಳಿ ಬೌಲರ್​​​ಗಳ ಬೆಂಡೆತ್ತಿದ ಅನೂಜ್​ ರಾವತ್​​ ಅವರು ಕೇವಲ 66 ಬಾಲ್​​ನಲ್ಲಿ 121 ರನ್​​ ಚಚ್ಚಿದ್ರು. ಬರೋಬ್ಬರಿ 11 ಭರ್ಜರಿ ಸಿಕ್ಸರ್​​ ಮತ್ತು ಬ್ಯಾಕ್​ ಟು ಬ್ಯಾಕ್​​ 6 ಫೋರ್​ ಬಾರಿಸಿದ್ರು. ಈಸ್ಟ್ ಡೆಲ್ಲಿ ರೈಡರ್ಸ್ ತಂಡ 20 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 241 ರನ್ ಕಲೆ ಹಾಕಲು ಸಹಾಯ ಮಾಡಿದ್ರು.
/newsfirstlive-kannada/media/post_attachments/wp-content/uploads/2024/09/Anuj-Rawat-2.jpg)
ಅನೂಜ್​ ರಾವತ್​ ಯಾರು?
ಉತ್ತರಾಖಂಡದ ರೈತ ಕುಟುಂಬದಲ್ಲಿ ಅನುಜ್ ರಾವತ್ 1999 ಅಕ್ಟೋಬರ್ 17ನೇ ತಾರೀಕಿನಂದು ಜನಿಸಿದ್ರು. ತಮ್ಮ 10ನೇ ವಯಸ್ಸಿನಲ್ಲಿ ಅನೂಜ್​ ರಾವತ್​ ಕ್ರಿಕೆಟ್ ಆಡಲು ಪ್ರಾರಂಭಿಸಿದ್ರು. ಇವರ ಕ್ರಿಕೆಟ್​​ ಜರ್ನಿಯಲ್ಲಿ ಬಾಲ್ಯದ ಸ್ನೇಹಿತರು ಮತ್ತು ಕುಟುಂಬಸ್ಥರು ಬೆಂಬಲ ನೀಡಿದ್ರು.
ಆರ್​​ಸಿಬಿಗೆ ಬಂದಿದ್ದೇ ಬದಲಾಯ್ತು ಲಕ್​​!
ಅನೂಜ್​ ರಾವತ್ ಕ್ರಿಕೆಟ್​ ಕರಿಯರ್​ಗೆ ಟ್ವಿಸ್ಟ್​ ಕೊಟ್ಟಿದ್ದೇ ಆರ್​​ಸಿಬಿ. ಈ ಬಗ್ಗೆ ಖುದ್ದು ಮಾತಾನಾಡಿರೋ ಅನೂಜ್​ ರಾವತ್​​, ಮೊದಲು ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಟ್ರಯಲ್ಸ್ ಕೊಡುತ್ತಿದ್ದೆ. ನಂತರ ನನ್ನನ್ನು ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿತು. ಇದು ನನ್ನ ವೃತ್ತಿಜೀವನಕ್ಕೆ ಅತ್ಯಂತ ದೊಡ್ಡ ತಿರುವು ಎಂದಿದ್ದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us