/newsfirstlive-kannada/media/post_attachments/wp-content/uploads/2024/12/Vilya-leaf.jpg)
ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ರೈತ ವೀರಪ್ಪ ತಲ್ಲೂರು ವಿಳ್ಯದೆಲೆ ಬೆಳೆದು ತಮ್ಮ ಬದುಕನ್ನು ಬದಲಾಯಿಸಿಕೊಂಡಿದ್ದಾರೆ.
ವೃದ್ಧ ರೈತ ತಮಗೆ ಇರುವ ಎರಡು ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ವಿಳ್ಯದೆಲೆ ಬೆಳೆದಿದ್ದಾರೆ. ನರೇಗಾ ಯೋಜನೆಯಡಿ ವೀಳ್ಯದೆಲೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢ ಆಗುವ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ. 1 ಎಕರೆಯಲ್ಲಿ ಸುಮಾರು 1100 ವೀಳ್ಯದೆಲೆ ಬಳ್ಳಿ ನೆಟ್ಟಿದ್ದಾರೆ. ನುಗ್ಗೆ, ಬೋರಲ, ಚೊಗಸಿ, ಗಿಡಗಳಿಗೆ ಬಳ್ಳಿ ಹಬ್ಬಿಸಿ ಸಮಗ್ರ ಕೃಷಿ ಮಾಡುವ ಮೂಲಕ ವರ್ಷಕ್ಕೆ ಅಂದಾಜು ಲಕ್ಷಾಂತರ ರೂಪಾಯಿ ಆದಾಯ ಗಳಿಸ್ತಿದ್ದಾರೆ.
ಸಾಮಾನ್ಯವಾಗಿ ವೀಳ್ಯದೆಲೆ ಬೆಳೆಯನ್ನ ಕೆಂಪು ಮಣ್ಣಿನಲ್ಲಿ ಬೆಳೆಯುತ್ತಾರೆ. ಅದರಲ್ಲೂ ರೋಣ ಭಾಗದಲ್ಲಿ ಈ ಬೆಳೆ ಕಾಣಸಿಗೋದಿಲ್ಲ. ಬಹುತೇಕ ಗದಗ ಜಿಲ್ಲೆಯಲ್ಲಿ ಒಣಬೇಸಾಯ ಪದ್ದತಿಯಲ್ಲಿ ಬೆಳೆ ಬಳೆಯಲಾಗುತ್ತೆ. ಈ ರೈತ ಬೋರ್ವೆಲ್ ಕೊರಸಿ ಕೇವಲ 2 ಇಂಚು ನೀರಿನಲ್ಲಿ ನೀರಾವರಿ ಮಾಡ್ತಿದ್ದಾರೆ. ಪವಾಡವೆಂಬಂತೆ ವೀಳ್ಯದೆಲೆ ಸಹ ಉತ್ತಮ ಇಳುವರಿ ಬಂದಿದ್ದು ತಿಂಗಳಿಗೆ 15 ರಿಂದ 20 ಸಾವಿರ ರೂ ಆದಾಯದ ನಿರೀಕ್ಷೆ ಮಾಡ್ತಿದ್ದಾರೆ.
ಇದನ್ನೂ ಓದಿ:Pushpa 2: The Rule: ಟಿಕೆಟ್ ಬುಕ್ಕಿಂಗ್ನಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗಿದೆ ಕ್ರೇಜ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ