Advertisment

ಪಂಚೆ ಧರಿಸಿ ಬಂದ ರೈತನಿಗೆ GT ಮಾಲ್​ ಅಪಮಾನ! ಧೋತಿ ಧರಿಸಿದ್ದಕ್ಕೆ ಮಾಲ್​ ಪ್ರವೇಶ ನಿರ್ಬಂಧ!

author-image
AS Harshith
Updated On
ರೈತನಿಗೆ ಅವಮಾನ ಮಾಡಿದ್ದಕ್ಕೆ ಆಕ್ರೋಶ; ಮಾಲ್​ಗೆ ನುಗ್ಗಿ ಕುರ್ಚಿ, ಟೇಬಲ್​​ ಎಲ್ಲಾ ಪುಡಿಪುಡಿ
Advertisment
  • ಪಂಚೆ ತೊಟ್ಟಿದ್ದಕ್ಕೆ ಮಾಲ್​​ ಒಳಗೆ ನೋ ಎಂಟ್ರಿ!
  • ಅನ್ನ ನೀಡೋ ರೈತನನ್ನೇ ಒಳಗೆ ಬಿಡದ ಮಾಲ್​ ಸಿಬ್ಬಂದಿ
  • ಸುಸಂಸ್ಕೃತ ಉಡುಗೆ ತೊಟ್ಟು ಬಂದ ರೈತನಿಗೆ GT ಮಾಲ್​ ಅವಮಾನ

ಪಂಚೆ ಅಂದ್ರೆ ಭಾರತದ ಸಂಸ್ಕೃತಿ. ಪಂಚೆ ಅಂದ್ರೆ ಭಾರತೀಯರ ಜೀವನ ಶೈಲಿ. ಪಂಚೆ ಅಂದ್ರೆ ಅದೊಂದು ಸುಸಂಸ್ಕೃತ ಉಡುಗೆ. ಆದ್ರೆ, ಆಧುನಿಕತೆಯ ಹಣೆಪಟ್ಟಿಯಲ್ಲಿ ತಲೆ ಎತ್ತಿರೋ ಮಾಲ್‌ಗಳು ಕಿತ್ತೊಗಿರೋ ಜೀನ್ಸ್‌, ಚಡ್ಡಿ-ಮಿಡ್ಡಿ ಹಾಕಿದ್ರೆ ಒಳಬಿಡ್ತಾರಂತೆ. ಅದೇ ಹಳ್ಳಿಯ ರೈತ ಪಂಚೆ ತೊಟ್ಟು ಬಂದ್ರೆ ನಾಟ್‌ ಅಲೌಡ್‌. ಇದೀಗ ಬೆಂಗಳೂರಿನ ಮಾಲ್‌ನಲ್ಲಿ ಹಳ್ಳಿಯ ವೃದ್ಧನಿಗೆ ಪಂಚೆ ತೊಟ್ಟ ವಿಚಾರಕ್ಕೆ ಅವಮಾನವಾಗಿದೆ. ಮಾಲ್‌ನ ಒಳಗೆ ಬಿಡದೇ ಸಿಬ್ಬಂದಿ ದರ್ಪ ತೋರಿದ್ದಾರೆ.

Advertisment

ಇದು ಬೆಂಗಳೂರಿನ ಘಟನೆ

ಈ ಜಿ.ಟಿ ಮಾಲ್‌ ಭಾರತದಲ್ಲಿದ್ಯಾ? ಅಥವಾ ಫಾರಿನ್‌ ಕಂಟ್ರಿಯಲ್ಲಿದ್ಯಾ?. ಇರೋದು ಬೆಂಗಳೂರಿನಲ್ಲೇ. ಅದರ ಒಳಗೆ ತಿನ್ನೋದು ಮಾರೋದು ರೈತ ಬೆಳೆದಿದ್ದನ್ನೇ. ಆದ್ರೆ, ಇದ್ಯಾವ್ದು ರೀ ಸೀಮೆಗಿಲ್ಲದ ರೂಲ್ಸ್. ನೋಡ್ರಿ ಈ ವೃದ್ಧ ಪಂಚೆ ತೊಟ್ಟು ಬಂದಿದ್ರು ಅಂತ ಒಳಗೆ ಬಿಡದೇ ಸತಾಯಿಸಿದ್ದಾರೆ ಈ ಮಾಲ್ ಸಿಬ್ಬಂದಿ.

ಪಂಚೆ ತೊಟ್ಟವರಿಗೆ ಪ್ರವೇಶವಿಲ್ಲ!

ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ನಾಗರಾಜ್​ ತಮ್ಮ ತಂದೆ ತಾಯಿ ಜೊತೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಜಿ.ಟಿ. ಮಾಲ್‌ಗೆ ಸಿನಿಮಾ ನೋಡೋಕೆ ಬಂದಿದ್ರು. ಹೀಗೆ ಮಾಲ್‌ ಒಳಗೆ ಎಂಟ್ರಿ ಕೊಡ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ನಾಗರಾಜ್ ತಂದೆ ಪಂಚೆ ತೊಟ್ಟಿದ್ದಾರೆ. ಮಾಲ್‌ನ ಒಳಗೆ ಪಂಚೆ ತೊಟ್ಟವರಿಗೆ ಪ್ರವೇಶವಿಲ್ಲ ಅಂತ ಅಲ್ಲೇ ತಡೆದಿದ್ದಾರೆ. ಇದನ್ನ ಪ್ರಶ್ನಿಸಿದ ಬಳಿಕ ಎಂಟ್ರಿ ಕೊಟ್ಟ ಮಾಲ್ ಮ್ಯಾನೇಜರ್‌ ಕೂಡಾ ಅದೇ ರಾಗಾ ತೆಗೆದಿದ್ದಾನೆ.

ಅಷ್ಟೇ ಅಲ್ಲ. ಸುಮಾರು ಅರ್ಧ ಗಂಟೆಗಳ ಕಾಲ ಮಾಲ್ ಒಳಗೆ ಬಿಡದೇ ಸಿಬ್ಬಂದಿ ಸತಾಯಿಸಿದ್ದಾರೆ. ಸಿನಿಮಾ ವೀಕ್ಷಣೆಗೆ ಹೋಗಲೂ ಬಿಡದೇ ಗೇಟ್ ಬಳಿಯೇ ಕೂರಿಸಿ ಅವಮಾನ ಮಾಡಿದ್ದಾರೆ. ಇದನ್ನೆಲ್ಲಾ ಕಂಡು ವೃದ್ಧನ ಪುತ್ರ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಲ್‌ ಸಿಬ್ಬಂದಿ ತೋರಿದ ದರ್ಪವನ್ನೆಲ್ಲಾ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ.

Advertisment

ಇಷ್ಟೆಲ್ಲಾ ಆದ್ಮೇಲೆ ಕಾಯಿಸಿ ಸತಾಯಿಸಿ ಒಳಬಿಟ್ಟಿದ್ದಾರೆ. ಬಳಿಕ ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ ತಂದೆ-ಮಗ ತಮಗಾದ ಅಪಮಾನವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇತ್ತೀಚಿಗಷ್ಟೇ ಪಂಚೆ ಹಾಕಿದ್ರು ಅನ್ನೋ ಕಾರಣಕ್ಕೆ ಅನ್ನದಾತನನ್ನ ಮೆಟ್ರೋ ಸಿಬ್ಬಂದಿ ತಡೆದು ಅಪಮಾನ ಮಾಡಿದ್ರು. ಇದೀಗ ಮಾಲ್​ನಲ್ಲಿ ಪಂಚೆಯನ್ನ ತೊಟ್ಟು ರೈತನಿಗೆ ಅವಮಾನ ಮಾಡಿದ್ದಾರೆ. ಈ ವಿಚಾರಕ್ಕೆ GT ಮಾಲ್​ ಈ ಬಗ್ಗೆ ಬೇಷರತ್ತಾಗಿ ಕ್ಷಮೆ ಕೇಳ್ಬೇಕು. ಶ್ರೀಮಂತರಿಗೆ ಮಾತ್ರ ಇಂತಹ ಮಾಲ್​ನಲ್ಲಿ ಪ್ರವೇಶನಾ? ಖಂಡಿತಾ ಇದಕ್ಕೆ ಉತ್ತರ ಬೇಕೇ ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment