/newsfirstlive-kannada/media/post_attachments/wp-content/uploads/2024/12/BRAZIL-FARMER.jpg)
ಬದುಕಲ್ಲಿ ಲಕ್ ಅನ್ನೊದು ಹೊಡದ್ರೆ ಭಿಕ್ಷಕನು ಕೂಡ ಅರಸನಾಗಿ ಮೆರೆದುಬಿಡುತ್ತಾನೆ. ಆ ರೀತಿ ಲಕ್ ಹೊಡೆಯುವುದು ಹೆಚ್ಚು ಕಡಿಮೆ ಲಾಟರಿ ಟಿಕೆಟ್ಗಳಲ್ಲಿಯೇ. ಲಾಟರಿ ಕೊಂಡ ಗತಿಯಿಲ್ಲದವರೂ ಕೋಟ್ಯಾಧಿಪತಿಗಳಾದ ಉದಾಹರಣೆಗಳು ನಮ್ಮ ಮುಂದೆ ಬೇಕಾದಷ್ಟಿವೆ. ಅಂತವರ ಸಾಲಿಗೆ ಸೇರುತ್ತಾರೆ. ಬ್ರೆಜಿಲ್ನ ಆ್ಯಂಟೋನಿಯೊ ಲೋಪ್ಸ್ ಸಿಕ್ವೈರಾ ಎಂಬ ರೈತ. ಬ್ರೆಜಿಲ್ನ ಈ ರೈತ ಅಲ್ಲಿನ 83 ಸೆಂಟ್ಗಳನ್ನ ನೀಡಿ ಒಂದು ಲಾಟರಿ ಟಿಕೆಟ್ ಖರೀದಿಸಿದ್ದ. ಅದು ಅವನಿಗೆ 287 ಕೋಟಿ ರೂಪಾಯಿ ಗೆದ್ದು ತಂದುಕೊಟ್ಟಿತ್ತು. ಆದ್ರೆ ವಿಧಿಯಾಟವೇ ಬೇರೆ ಇತ್ತು. ಲಾಟರಿ ಗೆದ್ದ ಈ ರೈತ ತನ್ನ ಹಲ್ಲುಗಳ ಚಿಕಿತ್ಸೆಗೆಂದು ಡೆಂಟಲ್ ವೈದ್ಯರ ಬಳಿ ಹೋಗಿದ್ದ. ಚಿಕಿತ್ಸೆ ನೀಡುತ್ತಿದ್ದ ವೇಳೆ ಹೃದಾಯಾಘತವಾಗಿದೆ ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಸಿಕ್ವೈರಾ ಅಸುನೀಗಿದ್ದಾನೆ ಎಂದು ವೈದ್ಯರು ಹೇಳುತ್ತಾರೆ.
ಸ್ಥಳೀಯ ಕಾನೂನು ನಿರ್ದೇಶನಾಲಯದ ಮುಖ್ಯಸ್ಥ ಎಡಿಸನ್ ಪಿಕ್ ಈ ಒಂದು ಸಾವಿನ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ಸಿಕ್ಕಿಲ್ಲ. ಇದು ಸಹಜ ಸಾವೋ ಅಥವಾ ಬೇರೆ ಏನಾದರೂ ಇದರ ಹಿಂದಿದೆಯೋ ಎಂಬುದು ತನಿಖೆಯ ನಂತರ ತಿಳಿಯಬೇಕಿದೆ ಎಂದು ಹೇಳಿದ್ದಾರೆ.ಒಂದು ವೇಳೆ ಇದು ಸಹಜ ಸಾವಲ್ಲದೇ ಏಕಾಏಕಿ ಆರೋಗ್ಯ ಸಮಸ್ಯೆಯಿಂದ ಆಗಿದ್ದೇ ಆದರೆ ಡೆಂಟಲ್ ಕ್ಲಿನಿಕ್ ಸಾವಿನ ಹೊಣೆಯನ್ನು ಹೊರಬೇಕಾಗುತ್ತೆ. ಇದಕ್ಕಾಗಿಯೇ ನಾವು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದೇವೆ. ಅದು ಬಂದ ಮೇಲೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚಳಿ ತಾಳಲಾರದೇ ಕಂತೆ ಕಂತೆ ನೋಟುಗಳನ್ನು ಬೆಂಕಿಗೆ ಎಸೆದ ಜನಪ್ರಿಯ ಸ್ಟಾರ್..! Video
ಸಿಕ್ವೈರಾ ಅವರ ಮೃತ್ಯು ಲಾಟರಿ ಟಿಕೆಟ್ ಗೆದ್ದ ಕೇವಲ ಒಂದು ವಾರದ ಅಂತರದಲ್ಲಿ ಆಗಿದೆ. ಹೀಗಾಗಿ ಸ್ಥಳೀಯರು ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರೊಬ್ಬರು ಹೇಳುವ ಪ್ರಕಾರ ಆತ ಒಬ್ಬ ತುಂಬಾ ಸರಳ ವ್ಯಕ್ತಿ. ಅವರ ಬದುಕಲ್ಲಿ ಇಂತಹದೊಂದು ಸಮಸ್ಯೆ ಆಗುತ್ತೆ ಅಂತ ಯಾರೂ ಕೂಡ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಸ್ಥಳೀಯ ಈ ಬಗ್ಗೆ ಮಾತನಾಡಿದ್ದು. ಲಾಟರಿ ಗೆಲ್ಲುವುದು ಎಲ್ಲರ ಕನಸು ಆಗಿರುತ್ತದೆ ಆದ್ರೆ ಈ ವ್ಯಕ್ತಿ ಗೆದ್ದ ಮೇಲೂ ಅದನ್ನು ಅನುಭವಿಸಲು ಆಗದೇ ನಡು ದಾರಿಯಲ್ಲಿ ತೀರಿಹೋಗಿಬಿಟ್ಟಿದ್ದು ನಿಜಕ್ಕೂ ಬೇಸರವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:18 ಸಾವಿರ ಭಾರತೀಯರಿಗೆ ಕಾದಿದೆ ಕಂಟಕ! ಅಧ್ಯಕ್ಷರಾದ ದಿನವೇ ಟ್ರಂಪ್ ಮಾಡುವ ಆ ಕೆಲಸ ಯಾವುದು?
ಆ್ಯಂಟೊನಿಯೋ ಗೆದ್ದಿದ್ದು ಸಾಮಾನ್ಯ ಲಾಟರಿಯಲ್ಲ. ಬ್ರಜಿಲ್ನಲ್ಲಿಯೇ ಅತ್ಯಂತ ದೊಡ್ಡ ಲಾಟರಿ ಗೇಮ್ ಎಂದು ಖ್ಯಾತಿ ಗಳಿಸಿದ ಮೆಗಾ ಸೇನಾ ಲಾಟರಿ ಸ್ಪರ್ಧೆಯಲ್ಲಿ ಸುಮಾರು 287 ಕೋಟಿ ರೂಪಾಯಿ ಗೆದ್ದಿದ್ದರು. ಇದು ಆ ಲಾಟರಿಯ 10ನೇ ಅತಿ ದೊಡ್ಡ ಪ್ರೈಸ್ ಎಂದು ಕೂಡ ತಿಳಿದು ಬಂದಿದೆ. ಇಷ್ಟೊಂದು ಹಣ ಗೆದ್ದ ಮೇಲೆಯೂ ಆ್ಯಂಟೊನಿಯೋ ಮಾತ್ರ ಅದನ್ನು ಅನುಭವಿಸಲು ಒಂದು ವಾರಕ್ಕಿಂತಲೂ ಹೆಚ್ಚು ಸಮಯ ಹೊಂದಿರಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ