ನಾವಾ, ನೀವಾ ನೋಡೇ ಬಿಡೋಣ.. ತುಮಕೂರಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು, ಹೋರಾಟಗಾರರು

author-image
admin
Updated On
ನಾವಾ, ನೀವಾ ನೋಡೇ ಬಿಡೋಣ.. ತುಮಕೂರಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು, ಹೋರಾಟಗಾರರು
Advertisment
  • ಸಂಕಾಪುರದ ಕಾಮಗಾರಿ ಸ್ಥಳಕ್ಕೆ ಪ್ರತಿಭಟನಾಕಾರರ ದಂಡು
  • 144 ಸೆಕ್ಷನ್ ಜಾರಿ ಮಾಡಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್!
  • ಚಕ್ರದ ಗಾಳಿ ಬಿಟ್ಟ ರೈತರಿಂದ KSRTC ಬಸ್‌ ಉರುಳಿಸಲು ಪ್ರಯತ್ನ

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ತೀವ್ರಗೊಂಡಿದೆ. ಇಂದು ಗುಬ್ಬಿಯ ಸಂಕಾಪುರದ ಕಾಮಗಾರಿ ಸ್ಥಳಕ್ಕೆ ತೆರಳಲು ಪ್ರತಿಭಟನಾಕಾರರ ದಂಡು ರೆಡಿಯಾಗಿತ್ತು. ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದ್ದರಿಂದ ಕಾಮಗಾರಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಹೇಮಾವತಿ ನೀರನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗುವ ರಾಜ್ಯ ಸರ್ಕಾರದ ಯೋಜನೆಯನ್ನ ಹೋರಾಟಗಾರರು ವಿರೋಧಿಸಿದ್ದಾರೆ. ನಾವಾ ನೀವಾ ನೋಡಿಯೇ ಬಿಡೋಣ ಎಂದು ಸರ್ಕಾರಕ್ಕೆ ಸೆಡ್ಡು ಹೊಡೆದ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

publive-image

ಶತಗತಾಯ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುತ್ತೇವೆ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಕಾಮಗಾರಿ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಇಂದು ಹೋರಾಟ ನಿರತ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರ ಯತ್ನ ಮಾಡಿದರು. ಹೋರಾಟಗಾರರನ್ನ ಪೊಲೀಸರು ಬಂಧಿಸಿ KSRTC ಬಸ್‌ಗಳಿಗೆ ಹತ್ತಿಸಿಕೊಂಡು ಹೋಗಲು ಯತ್ನಿಸಿದರು. ಆಗ ಪೊಲೀಸರು ಹೋರಾಟ ನಿರತ ನಾಯಕರ ಮಧ್ಯೆ ನೂಕಾಟ, ತಳ್ಳಾಟ ನಡೆದಿದೆ.

publive-image

ಪೊಲೀಸರ ಮೇಲೆ ರೊಚ್ಚಿಗೆದ್ದ ರೈತರು, ಹೋರಾಟಗಾರರು, ಪ್ರತಿಭಟನಾ ನಿರತ ರೈತರನ್ನು ಬಂಧಿಸಿದ ಬಸ್‌ಗಳನ್ನು ತಡೆದು ಪ್ರತಿಭಟನೆ ಮಾಡಿದರು. ಬಸ್‌ ಚಕ್ರದ ಗಾಳಿ ಬಿಟ್ಟ ರೈತರು, KSRTC ಬಸ್‌ಗಳನ್ನು ಉರುಳಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: ತುಮಕೂರಲ್ಲಿ ರೈತರ ಕಿಚ್ಚು.. ಹೇಮಾವತಿ ನೀರಿಗಾಗಿ ಭುಗಿಲೆದ್ದ ಆಕ್ರೋಶ; 144 ಸೆಕ್ಷನ್ ಜಾರಿ! 

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟಕ್ಕೆ ಬೆಳ್ಳಾವಿ ಕಾರದೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ ಸ್ವಾಮೀಜಿಗಳು, ಬಂಧಿಸಿದ್ದ ಪ್ರತಿಭಟನಾಕಾರರನ್ನ ಬಸ್‌ನಿಂದ ಕೆಳಗಿಳಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ.

publive-image

ಇಂದು ಗುಬ್ಬಿಯ ಸಂಕಾಪುರದ ಕಾಮಗಾರಿ ಸ್ಥಳಕ್ಕೆ ಪ್ರತಿಭಟನಾಕಾರರ ದಂಡು ತೆರಳಲು ಸಜ್ಜಾಗಿದೆ.7 ಕಿಲೋ ಮೀಟರ್‌ವರೆಗೂ ಕಾಲ್ನಡಿಗೆ ಮುಖಾಂತರ ಹೋರಾಟಗಾರರು ತೆರಳುತ್ತಿದ್ದು, ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೇಮಾವತಿ ನೀರಾವರಿ ಪ್ರತಿಭಟನೆಗೆ ಬಿಜೆಪಿ ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ವಿವಿಧ ಮಠಧಿಪತಿಗಳು, ರೈತ ಮುಖಂಡರು ಸಾಥ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment