/newsfirstlive-kannada/media/post_attachments/wp-content/uploads/2023/09/Bridge-1.jpg)
ಬಾಗಲಕೋಟೆ: 25 ವರ್ಷಗಳ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು ಹಾಗೂ ಸರ್ಕಾರ ನಡೆಗೆ ಬೇಸತ್ತು ರೈತರೇ ಸೇತುವೆ ನಿರ್ಮಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಂಕನವಾಡಿ ನಡುಗಡ್ಡೆ ಪ್ರದೇಶದಲ್ಲಿ ರೈತರು ದೇಣಿಗೆ ಮೂಲಕ ತೇಲುವ ಸೇತುವೆ ನಿರ್ಮಿಸ್ತಿದ್ದಾರೆ.
/newsfirstlive-kannada/media/post_attachments/wp-content/uploads/2023/09/Bridge-1-1.jpg)
ಕೃಷ್ಣಾ ನದಿ ನಡುಗಡ್ಡೆಯಲ್ಲಿರುವ ಕಂಕನವಾಡಿ ಗ್ರಾಮದಲ್ಲಿ 500-700 ಎಕರೆ ಜಮೀನು ಇದೆ. ಹೀಗಾಗಿ ಪ್ರತಿ ವರ್ಷ ನದಿ ತುಂಬಿದಾಗ ಇಲ್ಲಿನ ರೈತರು ಬೋಟ್ ಮೂಲಕ ನಿತ್ಯದ ಜೀವ ಸಾಗಿಸುವ ಅನಿವಾರ್ಯತೆ ಎದುರಾಗುತ್ತೆ. ಅಲ್ಲದೇ ಕಬ್ಬಿನ ಬೆಳೆಯನ್ನೂ ಸಹ ಬೋಟ್ ಮೂಲಕ ಸಾಗಿಸಲಾಗುತ್ತೆ. ಸರ್ಕಾರಕ್ಕೆ ಈ ಬಗ್ಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಇದ್ರಿಂದ ರೈತರೆಲ್ಲಾ ಕೂಡಿಕೊಂಡು ಅಂದಾಜು 25 ಲಕ್ಷ ವೆಚ್ಚದಲ್ಲಿ ಬ್ಯಾರೆಲ್ ಸೇತುವೆ ನಿರ್ಮಾಣ ಕಾರ್ಯ ನಡೆಸಿದ್ದಾರೆ.
ಇದನ್ನು ಓದಿ:ಪರೀಕ್ಷೆ ಬರೆಯುವ ಸಮಯದಲ್ಲಿ ಹೃದಯಾಘಾತ; 9ನೇ ತರಗತಿ ವಿದ್ಯಾರ್ಥಿ ಸಾವು
/newsfirstlive-kannada/media/post_attachments/wp-content/uploads/2023/09/Bridge-2.jpg)
ಈಗಾಗಲೆ ಸುಮಾರು 600 ಫೂಟ್ ಉದ್ದದ ಸೇತುವೆಯಲ್ಲಿ 500 ಫೂಟ್ ಕಂಪ್ಲೀಟ್ ಆಗಿದೆ. ಇನ್ನು ಸೇತುವೆಗೆ ಸುಮಾರು 15 ಟನ್ ಕಬ್ಬಿಣ, 300 ಬ್ಯಾರೆಲ್ ಬಳಕೆ ಮಾಡಿಕೊಳ್ಳಲಾಗಿದ್ದು, ನಡುಗಡ್ಡೆಯಲ್ಲಿರುವ 100ಕ್ಕೂ ಹೆಚ್ಚು ಕುಟುಂಬಗಳಿಗೆ, ಶಾಲಾ ಮಕ್ಕಳಿಗೆ ಅನುಕೂಲ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us