newsfirstkannada.com

‘ದೆಹಲಿ ಚಲೋ’ ಹಿಂಸಾಚಾರಕ್ಕೆ ತಿರುಗುವ ಭೀತಿ; ಇಂಟರ್​​ನೆಟ್​ ಸ್ಥಗಿತ, 15 ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ..!

Share :

Published February 24, 2024 at 7:17am

    ಇಂದಿನಿಂದ ಮತ್ತೆ ಅನ್ನದಾತರ ಪ್ರತಿಭಟನೆ ಕಹಳೆ

    ಹರಿಯಾಣದ ಹಿಸಾರ್‌ನ ಖೇಡಿ ಚ್ವಾಪಾಟಾದಲ್ಲಿ ಸಂಘರ್ಷ

    ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರ ಲಾಠಿಚಾರ್ಜ್​

ಎರಡು ದಿನಗಳಿಂದ ತಣ್ಣಗಾಗಿದ್ದ ದೆಹಲಿ ಚಲೋ ಇಂದಿನಿಂದ ಮತ್ತೆ ವೇಗ ಪಡೆದುಕೊಳ್ಳಲಿದೆ. ಅನ್ನದಾತರ ಆಕ್ರೋಶದ ಕಿಡಿ, ಜ್ವಾಲೆಯಾಗಿ ರಾಷ್ಟ್ರ ರಾಜಧಾನಿಗೆ ಸಂಕಷ್ಟ ಉಂಟುಮಾಡದಂತೆ ಪೊಲೀಸರು ಅಲರ್ಟ್​ ಆಗಿದ್ದಾರೆ.. ಈ ಮಧ್ಯೆ ಹರಿಯಾಣದಲ್ಲಿ ನಡೆದ ಸಂಘರ್ಷ ಪ್ರತಿಭಟನೆಯ ಸ್ವರೂಪವನ್ನೇ ಬದಲಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್ನದಾತರು ಹೊತ್ತಿಸಿದ್ದ ಪ್ರತಿಭಟನೆ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಕಳೆದ ಫೆಬ್ರವರಿ 21 ರಂದು ನಡೆದ ಸಂಘರ್ಷದಲ್ಲಿ ಯುವ ರೈತ ಸಾವನ್ನಪ್ಪಿದ ಘಟನೆಯೂ ನಡೆದು ಹೋಗಿತ್ತು. ಈ ಬೆನ್ನಲ್ಲೇ ಪ್ರತಿಭಟನೆಯ ಕಿಚ್ಚಿಗೆ ಶಾಂತಿಯ ನೀರೆರೆದಿದ್ದ ಅನ್ನದಾತರು, ಇಂದಿನಿಂದ ಮತ್ತೆ ಹೋರಾಟದ ಕಹಳೆ ಮೊಳಗಿಸಲಿದ್ದಾರೆ.

ಇಂದಿನಿಂದ ಮತ್ತೆ ಅನ್ನದಾತರ ಪ್ರತಿಭಟನಾ ಕಹಳೆ
ಅನ್ನದಾತರ ದೆಹಲಿ ಚಲೋ ಪ್ರತಿಭಟನೆ ಇಂದು ಮತ್ತಷ್ಟು ಕಾವು ಪಡೆಯೋ ಸಾಧ್ಯತೆ ಇದೆ. ಯುವ ರೈತನ ಸಾವಿನ ಬಳಿ ಕಳೆದ ಎರಡು ದಿನಗಳಿಂದ ತಣ್ಣಗಾಗಿದ್ದ ಪ್ರತಿಭಟನಾ ಕಹಳೆ ಮತ್ತೆ ಮೊಳಗಲು ಸಜ್ಜಾಗಿದೆ.. ಇಂದು ಮತ್ತೆ ದೆಹಲಿಯತ್ತ ಲಗ್ಗೆ ಇಡಲು ಅನ್ನದಾತರು ಅಣಿಯಾಗಿದ್ದಾರೆ. ಹರಿಯಾಣ ಮತ್ತು ಪಂಜಾಬ್ ಗಡಿ ಭಾಗದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಹರಿಯಾಣ ಸರ್ಕಾರ ಯಾವುದೇ ತಪ್ಪು ಸಂದೇಶ ರವಾನೆ ಆಗಬಾರದು ಎಂಬ ಹಿನ್ನಲೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್​ನೆಟ್​ ಸಂಪೂರ್ಣ ಸ್ಥಗಿತಗೊಳಿಸಿದೆ. ಜೊತೆಗೆ 15 ಜಿಲ್ಲೆಗಳಲ್ಲಿ 144 ಸೆಕ್ಷನ್ ಸಹ ವಿಧಿಸಲಾಗಿದೆ.

ಹರಿಯಾಣದ ಹಿಸಾರ್‌ನ ಖೇಡಿ ಚ್ವಾಪಾಟಾದಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯಲ್ಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನ ಸಿಡಿಸಿದ್ರು.. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಸಹ ನಡೆಸಿದ್ದು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.. ಮೆರವಣಿಗೆ ನಡೆಸುತ್ತಿದ್ದ ರೈತರನ್ನು ಪಂಜಾಬ್ ಗಡಿಯಲ್ಲಿರುವ ಖಾನೌಯಲ್ಲಿ ತಡೆಯೊಡ್ಡಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಒಟ್ನಲ್ಲಿ 2021ರಲ್ಲಿ ಸಂಘರ್ಷದ ಹಾದಿ ಹಿಡಿದಿದ್ದ ಅನ್ನದಾತರ ಹೋರಾಟ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.. ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಅನ್ನದಾತರ ದೆಹಲಿ ಚಲೋ ಹಿಂಸಾಚಾರಕ್ಕೆ ತಿರುಗದಂತೆ ನೋಡಿಕೊಳ್ಳಲು ಪೊಲೀಸರು ಹರಸಾಹಸ ಪಡುವಂತಾಗಿದೆ.. ತಾಳ್ಮೆಯಿಂದ ಪ್ರತಿಭಟನೆ ನಡೆಸಿ ರಾಜಧಾನಿ ಜನರ ಹಿತ ಕಾಯುವ ಜವಬ್ದಾರಿ ಅನ್ನದಾತರ ಮೇಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದೆಹಲಿ ಚಲೋ’ ಹಿಂಸಾಚಾರಕ್ಕೆ ತಿರುಗುವ ಭೀತಿ; ಇಂಟರ್​​ನೆಟ್​ ಸ್ಥಗಿತ, 15 ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ..!

https://newsfirstlive.com/wp-content/uploads/2024/02/Tear-Gas-Farmers.jpg

Load More