ಲಕ್ಕಿ ಕಾರ್​ಗೆ ನಿರ್ಮಾಣ ಆಯ್ತು ಸಮಾಧಿ .. 1500 ಜನರ ಸಮ್ಮುಖದಲ್ಲಿ ಮಣ್ಣು ಮಾಡುವ ಕಾರ್ಯ ! ವಿಚಿತ್ರ ಘಟನೆ ನಡೆದಿದ್ದು ಎಲ್ಲಿ?

author-image
Gopal Kulkarni
Updated On
ಲಕ್ಕಿ ಕಾರ್​ಗೆ ನಿರ್ಮಾಣ ಆಯ್ತು ಸಮಾಧಿ .. 1500 ಜನರ ಸಮ್ಮುಖದಲ್ಲಿ ಮಣ್ಣು ಮಾಡುವ ಕಾರ್ಯ ! ವಿಚಿತ್ರ ಘಟನೆ ನಡೆದಿದ್ದು ಎಲ್ಲಿ?
Advertisment
  • 15 ವರ್ಷದ ಕಾರ್​ಗಾಗಿ ಸಮಾಧಿಯನ್ನು ನಿರ್ಮಿಸಿದ ಮಾಲೀಕ
  • ಕಾರ್ ಮಾರುವ ಬದಲು ನಾನು ಸಮಾಧಿ ಮಾಡುತ್ತೇನೆ ಎಂದಿದ್ದೇಕೆ
  • ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಯ್ತು ಕಾರಿನ ಅಂತಿಮ ಕಾರ್ಯ

ನಮ್ಮ ಎಲ್ಲರ ಬದುಕಿನಲ್ಲಿಯೂ ಒಂದು ವಿಶೇಷವಾದದ್ದು ಏನೋ ಹಲವಾರು ವರ್ಷಗಳ ಕಾಲ ಉಳಿದುಕೊಂಡು ಬಂದು ಬಿಡುತ್ತೆ. ನಿರ್ಜೀವ ವಸ್ತುವಾದರೂ ಕೂಡ ಅದರ ಮೇಲೆ ಭಾವನಾತ್ಮಕ ನಂಟೊಂದು ಬೆಳೆದು ಬಿಡುತ್ತದೆ. ನಾವು ಮೊದಲು ಖರೀದಿಸಿ ಫೋನ್ ಇರಬಹುದು. ಬೈಕ್ ಇರಬಹುದು ಅಥವಾ ಕಾರ್ ಇರಬಹುದು. ಅವು ನಮ್ಮೊಂದಿಗೆ ಎಂದಿಗೂ ಬಿಡಿಸಲಾಗದ ನಂಟೊಂದನ್ನ ಬೆಸೆದುಕೊಂಡು ಬಿಟ್ಟಿರುತ್ತವೆ. ಹೀಗೆಯೇ 15ವರ್ಷದಿಂದ ತಮ್ಮೊಂದಿಗೆ ಇದ್ದ ಕಾರ್​ನ್ನು, ತಮ್ಮ ಇಡೀ ಕುಟುಂಬಕ್ಕೆ ಲಕ್ಕಿ ಎನಿಸಿದ್ದ ವಾಹನವನ್ನು ಮಣ್ಣು ಮಾಡುವ ಮೂಲಕ ಗುಜರಾತ್​ನ ಕುಟುಂಬವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯನ್ನುಂಟು ಮಾಡಿದೆ. ಅದರ ವಿಡಿಯೋಗಳು ಸಖತ್ ವೈರಲ್ ಆಗಿವೆ.


">November 8, 2024


ಸಂಜಯ್ ಪೊಲ್ರಾ ಎಂಬ ಉದ್ಯಮಿಯೊಬ್ಬರು ತಮ್ಮ 15 ವರ್ಷದ ಕಾರಿಗೆ ಮನುಷ್ಯರಿಗೆ ಮೃತಪಟ್ಟಾಗ ಸಲ್ಲಿಸುವ ಅಂತಿಮ ವಿಧಿ ವಿಧಾನಗಳು ಹೇಗಿರುತ್ತವೆಯೋ ಹಾಗೆಯೇ ಕಾರ್​ಗೂ ಕೂಡ ಸಲ್ಲಿಸಿ ಮಣ್ಣು ಮಾಡಿದ್ದಾರೆ.  ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 1500 ಜನರು ನೆರೆದಿದ್ದರು. ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ಕೊಡಲು ಅರ್ಚಕರು, ಪುರೋಹಿತರು ಸಹ ಅಲ್ಲಿಗೆ ಬಂದು ಮಂತ್ರಘೋಷಗಳೊಂದಿಗೆ 15 ವರ್ಷದ ವ್ಯಾಗನ್ ಆರ್ ಕಾರ್​ನ್ನು ಮಣ್ಣು ಮಾಡಲಾಯ್ತು.

ಇದನ್ನೂ ಓದಿ:ದೇವರಿಗಾಗಿ.. ಈ ಏರ್​ಪೋರ್ಟ್​ನಲ್ಲಿ ಇವತ್ತು ವಿಮಾನ ಹಾರಾಟವೇ ಬಂದ್!

ಈ ಒಂದು ಘಟನೆ ನಡೆದಿದ್ದು ಅಮ್ರೇಲಿ ಜಿಲ್ಲೆಯಲ್ಲಿ. ಸೂರತ್​ನಲ್ಲಿ ಬಿಲ್ಡಿಂಗ್ ಕನ್​ಸ್ಟ್ರಕ್ಷನ್ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಈ ಹಿಂದಿನಿಂದ ಕೃಷಿಯಲ್ಲಿ ತೊಡಗಿತ್ತು ಕಳೆದ ಹದಿನೈದು ವರ್ಷಗಳಿಂದ ಈ ಕಾರ್ ನಮ್ಮ ಜೊತೆಗೆ ಇದೆ. ನಮ್ಮ ಕುಟುಂಬಕ್ಕೆ ತುಂಬಾ ಲಕ್ಕಿಯಾದ ಕಾರ್ ಇದು. ಇದನ್ನು ಮಾರುವ ಬದಲು ನಾವು ಸಮಾಧಿ ಮಾಡಿದ್ದೇವೆ. ಇದು ಮುಂದಿನ ಜನಾಂಗಕ್ಕೆ ಗೊತ್ತಾಗಬೇಕು. ನಮ್ಮ ವಾಹನಗಳು ನಮಗೆ ಎಷ್ಟು ಲಕ್ಕಿ ಇರುತ್ತವೆ, ಎಷ್ಟು ನಮ್ಮೊಂದಿಗೆ ಭಾವನಾತ್ಮಕವಾಗಿ ನಂಟನ್ನು ಹೊಂದಿರುತ್ತವೆ ಎಂಬುದು ಅಂತ ಪೊಲ್ರಾ ಹೇಳಿದ್ದಾರೆ.
ಕಾರನ್ನು ಸಮಾಧಿ ಮಾಡುವ ಮೊದಲು ಅದನ್ನು ಹೂವಿನಿಂದ ಸಿಂಗರಿಸಲಾಗಿತ್ತು. ಅದಕ್ಕೆ ಪೂಜೆ ಸಲ್ಲಿಸಿ,ಅದನ್ನು ಸಮಾಧಿ ಮಾಡುವ ಜಾಗದಲ್ಲಿ ಅನೇಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು.

ಇದನ್ನೂ ಓದಿ:ಓಕೆ‘ ಎಂದ ಸ್ಟೇಷನ್ ಮಾಸ್ಟರ್​, ನಕ್ಸಲ್​ ಬಾಹುಳ್ಯ ಪ್ರದೇಶದಲ್ಲಿ ನಿಂತ ರೈಲು! ಇಲಾಖೆಗೆ 3 ಕೋಟಿ ರೂಪಾಯಿ ಲಾಸ್​! ಆಗಿದ್ದೇನು?

ಕಾರ್​ ಸಮಾಧಿಗಾಗಿಯೇ 15 ಅಡಿ ಆಳದ ಗುಂಡಿಯನ್ನೂ ಕೂಡ ತೋಡಲಾಗಿತ್ತು. ಎಲ್ಲ ವಿಧಿ ವಿಧಾನಗಳು ನಡೆದ ನಂತರ ಅದನ್ನು ಗುಂಡಿಯಲ್ಲಿ ಇಳಿಸಿ ಮಣ್ಣು ಮಾಡಲಾಯ್ತು. ಈ ಒಂದು ಅಂತಿಮ ಕಾರ್ಯ ನೆರವೇರಿಸಲು ಸಂಜಯ್ ಪೊಲ್ರಾ ಅವರು ಸುಮಾರು 4 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕಾರ್​ ಸಮಾಧಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ನೆಟ್ಟಿಗರು ಈ ರೀತಿಯೂ ಕೂಡ ಜನರು ಕಾರನ್ನು ಪ್ರೀತಿಸುತ್ತಾರಾ ಎಂದು ಹುಬ್ಬೇರಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment