newsfirstkannada.com

Farmers protest: ಮೋದಿ ಸರ್ಕಾರದ ವಿರುದ್ಧ ಅನ್ನದಾತರ ಕಹಳೆ; ಕುರುಬೂರು ಶಾಂತಕುಮಾರ್ ಹೇಳಿದ್ದೇನು..?

Share :

Published February 13, 2024 at 7:08am

Update February 13, 2024 at 7:09am

    ನವದೆಹಲಿಯ ಸುತ್ತ ಪೊಲೀಸ್​ ಚಕ್ರವ್ಯೂಹ ರಚನೆ

    ಬವಾನಾ ಸ್ಟೇಡಿಯಂ ತಾತ್ಕಾಲಿಕ ಜೈಲಾಗಿ ಪರಿವರ್ತನೆ

    ಮಧ್ಯಪ್ರದೇಶದಲ್ಲಿ ರಾಜ್ಯದ 100ಕ್ಕೂ ಹೆಚ್ಚು ರೈತರ ಬಂಧನ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನ್ನದಾತರು ದೆಹಲಿ ಚಲೋ ನಡೆಸ್ತಿದ್ದಾರೆ. ಇವತ್ತು ರಾಷ್ಟ್ರ ರಾಜಧಾನಿಯಲ್ಲಿ ಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ರೈತರ ಹೋರಾಟ ಭೇದಿಸಲು ಪೊಲೀಸರು ದೊಡ್ಡ ಚಕ್ರವ್ಯೂಹ ರಚಿಸಿದ್ದಾರೆ. ಇಡೀ ದೇಶದ ಗಮನ ಸೆಳೆಯುವ ಘಟನೆಗಳಿಗೆ ಇಂದು ದೆಹಲಿ ಸಾಕ್ಷಿಯಾಗುವ ಸಾಧ್ಯತೆ ಇದೆ.

ಇವತ್ತು ರಾಷ್ಟ್ರರಾಜಧಾನಿಯಲ್ಲಿ ಅನ್ನದಾತರ ಕಹಳೆ

ಕನಿಷ್ಠ ಬೆಂಬಲ ಬೆಲೆ, ರೈತರಿಗೆ ಪಿಂಚಣಿ ಯೋಜನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ರಾಜ್ಯಗಳ ರೈತರು ದೆಹಲಿ ಚಲೋ ನಡೆಸ್ತಿದ್ದಾರೆ. ಇವತ್ತು ರಾಷ್ಟ್ರರಾಜಧಾನಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಪಂಜಾಬ್ ಹಾಗೂ ಹರಿಯಾಣದ ರೈತರು ಈಗಾಗಲೇ ಟ್ರ್ಯಾಕ್ಟರ್​​ಗಳಲ್ಲಿ ಆಗಮಿಸಿದ್ದಾರೆ. ಬಿಯಾಸ್ ನದಿ ತೀರದಿಂದ ಆರಂಭಗೊಂಡಿರುವ ಱಲಿ ಇಂದು ಬೆಳಗ್ಗೆ ದೆಹಲಿ ತಲುಪಲಿದೆ. ಉಳಿದಂತೆ ರಾಜಸ್ಥಾನ, ಉತ್ತರ ಪ್ರದೇಶ, ಕೇರಳ, ಕರ್ನಾಟಕ ಸೇರಿ ಹಲವು ರಾಜ್ಯಗಳ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ನವದೆಹಲಿಯ ಸುತ್ತ ಪೊಲೀಸ್​ ಚಕ್ರವ್ಯೂಹ!

ದೆಹಲಿ ಚಲೋ ಬರಲಿರುವ ರೈತರನ್ನು ದೆಹಲಿ ಗಡಿಯಲ್ಲೇ ತಡೆಯಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಹರಿಯಾಣದ ಸಿಂಘು, ಘಾಜಿಪುರ, ಟಿಕ್ರಿ ಗಡಿಗಳಲ್ಲಿ ಹೆದ್ದಾರಿಗೆ ಅಡ್ಡಲಾಗಿ ತಾತ್ಕಾಲಿಕ ಸಿಮೆಂಟ್ ಗೋಡೆ, ಹಾಗೂ ಬ್ಯಾರಿಕೇಡ್ ಹಾಕಿ ತಡೆ ಹಾಕಿದ್ದಾರೆ. ಪ್ರತಿಭಟನೆ ನೆಪದಲ್ಲಿ ಸಮಾಜ ವಿರೋಧಿ ಶಕ್ತಿಗಳು ನುಸುಳಿ ಕಾನೂನು ಸುವ್ಯವಸ್ಥೆ ಭಂಗ ಉಂಟುಮಾಡಬಹುದು ಅಂತ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ. ಕೆಲ ಗಡಿಗಳಲ್ಲಿ ರೈತರ ಟ್ರ್ಯಾಕ್ಟರ್​​ಗಳನ್ನು ನಿಲ್ಲಿಸಲು ರಸ್ತೆ ಮೇಲೆ ದೊಡ್ಡ ಮೊಳೆಗಳನ್ನು ಹಾಕಿದ್ದಾರೆ. ಗಡಿಭಾಗದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದ್ರೆ ದೆಹಲಿ ಗಡಿಯಲ್ಲಿರುವ ಬವಾನಾ ಸ್ಟೇಡಿಯಂ ಅನ್ನೇ ತಾತ್ಕಾಲಿಕ ಜೈಲಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದೆ. ಮತ್ತೊಂದೆಡೆ ಹರಿಯಾಣದ ಚೌಧರಿ ದಲ್ಬೀರ್ ಒಳಾಂಗಣ ಕ್ರೀಡಾಂಗಣ, ಹಾಗೂ ಸಿರ್ಸಾದ ಗುರು ಗೋವಿಂದ್ ಸಿಂಗ್ ಸ್ಟೇಡಿಯಂ ಅನ್ನು ಕೂಡ ತಾತ್ಕಾಲಿಕ ಜೈಲಾಗಿ ಪರಿವರ್ತಿಸಿದ್ದಾರೆ. ಕರ್ನಾಟಕದಿಂದಲೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ದೆಹಲಿಯಲ್ಲಿ ಹೋರಾಟಕ್ಕಿಳಿದಿದ್ದಾರೆ.

ರೈತರು ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ರೈತರ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ದೇಶದ ರೈತರು ಉಳಿಯಬೇಕಾಗಿದೆ. ಹೀಗಾಗಿ ಅನ್ನದಾತರು ಇವತ್ತಿನ ಪ್ರತಿಭಟನೆಗೆ ನಮ್ಮ ಜೊತೆ ನಿಲ್ಲುತ್ತಾರೆ ಎಂದು ಬಯಸುತ್ತೇನೆ. ಬೆಳಗಾವಿ, ಹುಬ್ಬಳ್ಳಿ ಸೇರಿ ಉತ್ತರ ಕರ್ನಾಟಕದಿಂದ ಬರುತ್ತಿದ್ದ ರೈತರನ್ನು ಭೋಪಾಲ್​ನಲ್ಲಿ ಬಂಧನ ಮಾಡಿದ್ದಾರೆ. ಅವರನ್ನು ರಿಲೀಸ್ ಮಾಡಬೇಕು-ಕುರುಬೂರು ಶಾಂತಕುಮಾರ್, ರೈತ ಮುಖಂಡ

ಒಟ್ಟಾರೆ ರೈತರು ದೆಹಲಿಯಲ್ಲಿ ಉಗ್ರ ಪ್ರತಿಭಟನೆ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಸಜ್ಜಾಗಿದ್ದಾರೆ.. 2021ರಲ್ಲಿ ನಡೆದಿದ್ದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ಅಹಿತಕರ ಘಟನೆ ನಡೆಯಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Farmers protest: ಮೋದಿ ಸರ್ಕಾರದ ವಿರುದ್ಧ ಅನ್ನದಾತರ ಕಹಳೆ; ಕುರುಬೂರು ಶಾಂತಕುಮಾರ್ ಹೇಳಿದ್ದೇನು..?

https://newsfirstlive.com/wp-content/uploads/2024/02/FARMER.jpg

Load More