newsfirstkannada.com

ಸಿಮೆಂಟ್ ಬ್ಲಾಕ್, ದೊಡ್ಡ ಬ್ಯಾರಿಕೇಡ್.. ದೆಹಲಿಗೆ ಬರ್ತಿರೋ ರೈತರನ್ನ ತಡೆಯಲು ಹರಸಾಹಸ; ಸರ್ಕಾರಕ್ಕೆ ಯಾಕೆ ಭಯ?

Share :

Published February 13, 2024 at 6:36am

    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

    ಸಿಮೆಂಟ್ ಬ್ಲಾಕ್, ಬ್ಯಾರಿಕೇಡ್ ಮೂಲಕ ರೋಡ್​ ಬಂದ್​​

    ಹೋರಾಟಕ್ಕೆ ತೆರಳಿದ ರೈತ ಸಂಘಟನೆಗೆ ದಾರಿಯಲ್ಲೇ ತಡೆ

ಕನಿಷ್ಠ ಬೆಂಬಲ ಬೆಲೆ ಕಾನೂನು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘಟನೆಗಳು ದಿಲ್ಲಿ ಚಲೋ ಹಮ್ಮಿಕೊಂಡಿವೆ. ಈ ಹಿನ್ನೆಲೆ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ ಗಡಿಯಲ್ಲಿ ಬಿಗಿ ಪೊಲೀಸ್‌ ಭದ್ರತೆ ವ್ಯವಸ್ಥೆ ರೂಪಿಸಲಾಗಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಹಸಿರು ಸೇನೆಯ ಮುತ್ತಿಗೆ ಬೀಳಲಿದೆ. ಈ ರೈತ ಹೋರಾಟ ವರ್ಷದ ಬಳಿಕ ಮೋದಿ ಸರ್ಕಾರದ ಹರುಷವನ್ನೇ ಕಿತ್ತುಕೊಳ್ಳುವ ಆತಂಕ ಕಾಡ್ತಿದೆ.

ಡೆಲ್ಲಿಯ ದಿಕ್ಕು ದಿಕ್ಕಿನಿಂದಲೂ ರೈತರ ಪ್ರವಾಹವೇ ನುಗ್ಗಲಿದ್ದು, ರಾಜಧಾನಿಯ ಗಡಿ ಭಾಗದಲ್ಲಿ ಪೊಲೀಸ್​​ ಕೋಟೆಯೇ ನಿರ್ಮಾಣವಾಗಿದೆ. ಹರಿಯಾಣ, ಪಂಜಾಬ್​ನ ರೈತರು, ಸಿಂಘು ಗಡಿಯತ್ತ ಆಗಮಿಸಲಿದ್ದು, ಮತ್ತೊಮ್ಮೆ ರಾಷ್ಟ್ರದ ಕಣ್ಣು ಈ ಹೋರಾಟದತ್ತ ನೆಟ್ಟಿದೆ.

ಭೋಪಾಲ್​​ನಲ್ಲಿ ರೈತರನ್ನು ಬಂಧಿಸಿದ ಸರ್ಕಾರ!

ರಾಷ್ಟ್ರ ರಾಜಧಾನಿಯಾಗಿ ಪೊಲೀಸ್​​ ಸರ್ಪಗಾವಲಿನಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಚಲೋ ಘೋಷಣೆ ಮೊಳಗಿಸಿರುವ ರೈತರು, ಭಾರೀ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹೀಗಾಗಿ ದೆಹಲಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳು ಬಂದ್ ಆಗಿವೆ. ದೆಹಲಿಗೆ ರೈತರು ಹೆದ್ದಾರಿಗಳಲ್ಲಿ ತಡೆಗೋಡೆ ನಿರ್ಮಾಣ ಆಗಿವೆ. ದೆಹಲಿಗೆ ಸಂಪರ್ಕಿಸೊ ಮುಖ್ಯರಸ್ತೆಯಲ್ಲಿ ಸಿಮೆಂಟ್ ಬ್ಲಾಕ್, ಬ್ಯಾರಿಕೇಡ್ ಮತ್ತು ತಂತಿ ಬೇಲಿ ಹಾಕಲಾಗಿದೆ. ಸಿಂಘು, ಘಾಜಿಯಾಬಾದ್, ಸಿಕ್ರಿ ಬಾರ್ಡರ್​ ಸೀಲ್​​ ಆಗಿದೆ.

ದೆಹಲಿ ಚಲೋಗೆ ಕರೆ ಕೊಟ್ಟಿದ್ದರಿಂದ ಕರ್ನಾಟಕದಿಂದಲೂ ರೈತರ ಯಾತ್ರೆ ಹೋಗಿದ್ದಾರೆ. ಹೋರಾಟಕ್ಕೆ ತೆರಳಿದ ರೈತ ಸಂಘಟನೆ ನಾಯಕರು ಮತ್ತು ಪ್ರತಿನಿಧಿಗಳಿಗೆ ಅರ್ಧ ದಾರಿಯಲ್ಲೇ ತಡೆ ಬಿದ್ದಿದೆ. ಹುಬ್ಬಳ್ಳಿಯ ರೈತರನ್ನು ಭೋಪಾಲ್​ನಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಮಾತ್ನಾಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್‌, ಪ್ರತಿಭಟನೆ ಹತ್ತಿಕ್ಕಲು ಕೇಂದ್ರದಿಂದ ರೈತರ ಬಂಧನ ಆಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ರೈತರ ಬಂಧನವನ್ನ ಖಂಡಿಸಿರುವ ಸಿಎಂ ಸಿದ್ದರಾಮಯ್ಯ, ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಅಂತ ಟ್ವೀಟ್​​ ಮಾಡಿ ಕಿಡಿಕಾರಿದ್ದಾರೆ. ರಾಜ್ಯದಿಂದ ದೆಹಲಿಗೆ ತೆರಳ್ತಿದ್ದ ರೈತರನ್ನ ಭೋಪಾಲ್​​ನಲ್ಲಿ ಬಂಧಿಸಲಾಗಿರುವುದನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

‘ರೈತರ ಬಂಧನದ ಹಿಂದೆ ಕ್ರಿಮಿನಲ್​​ ಮೆದುಳು’!

ದೆಹಲಿಯಲ್ಲಿ ಇಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್​ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ಇಂದು ದೆಹಲಿಯ ಜಂತರ್ ಮಂತರ್​ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಕಳಿಸಿಕೊಡಬೇಕು ಎಂದು‌ ಒತ್ತಾಯಿಸುತ್ತಿದ್ದೇನೆ. ಬಂಧಿಸಿರುವುದು ಮಧ್ಯಪ್ರದೇಶದ ಸರ್ಕಾರವಾದರೂ ಈ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಅನ್ನೋದು ಸ್ಪಷ್ಟ.

– ಸಿದ್ದರಾಮಯ್ಯ, ಮುಖ್ಯಮಂತ್ರಿ

ಲೋಕಸಭಾ ಎಲೆಕ್ಷನ್​​​ ಹೊತ್ತಲ್ಲೇ ರೈತ ಹೋರಾಟ ಭುಗಿಲೆದ್ದಿದ್ದು, ಕೇಂದ್ರ ಸರ್ಕಾರಕ್ಕೆ ಹೊಸ ಆತಂಕ ಸೃಷ್ಟಿಸಿದೆ. ಅಷ್ಟಕ್ಕೂ ಇಂದು 200ಕ್ಕೂ ಅಧಿಕ ರೈತ ಸಂಘಟನೆಗಳು ಹೋರಾಟಕ್ಕೆ ಧುಮುಕ್ತಿವೆ. ಅಷ್ಟಕ್ಕೂ ಕಳೆದ ಬಾರಿಯಂತೆ ಕೆಂಪುಕೋಟೆಯಲ್ಲಿ ಮತ್ತೆ ರೈತರ ಘರ್ಜನೆ ಕೇಳಿಸುತ್ತಾ ಅನ್ನೋದು ಕಾದು ನೋಡಬೇಕು.

ದೆಹಲಿ ಚಲೋ ಯಾಕೆ?

ಇಡೀ ದೇಶದಲ್ಲಿ ಎಂ.ಎಸ್​​​​.ಸ್ವಾಮಿನಾಥನ್ ವರದಿ ಜಾರಿಯಾಗಬೇಕು
ದೇಶದಲ್ಲಿ ರೈತರು ಬೆಳೆದಿರುವ ಬೆಳೆಗೆ ಎಂಎಸ್​ಪಿ ನಿಗದಿಯಾಗಬೇಕು
60 ವರ್ಷ ತುಂಬಿದ ಎಲ್ಲ ರೈತರಿಗೂ ಪಿಂಚಣಿಯನ್ನ ನೀಡಬೇಕು
ರಾಷ್ಟ್ರೀಕೃತ ಬ್ಯಾಂಕ್​​ಗಳಲ್ಲಿನ ರೈತರ ಸಾಲಮನ್ನಾ ಮಾಡಬೇಕು
ಅಭಿವೃದ್ಧಿ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ
ಅಭಿವೃದ್ಧಿ ಭೂಮಿಯ ವಸತಿ ನಿವೇಶನಗಳಲ್ಲಿ ಶೇ.10ರಷ್ಟು ಮೀಸಲಿಡಿ
ಪರಿಹಾರವಾಗಿ ಪಡೆಯುವ ಪ್ರಸ್ತುತ ದರವು ಸಹ ಅಸಮರ್ಪಕವಾಗಿದೆ
ಹಿಂದೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಹೆಚ್ಚುವರಿ ಪರಿಹಾರ ಕೊಡಿ
ರೈತರ ಕುಟುಂಬಗಳಿಗೆ ಉದ್ಯೋಗ ಮತ್ತು ವೈದ್ಯಕೀಯ ಸೌಲಭ್ಯ ನೀಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಮೆಂಟ್ ಬ್ಲಾಕ್, ದೊಡ್ಡ ಬ್ಯಾರಿಕೇಡ್.. ದೆಹಲಿಗೆ ಬರ್ತಿರೋ ರೈತರನ್ನ ತಡೆಯಲು ಹರಸಾಹಸ; ಸರ್ಕಾರಕ್ಕೆ ಯಾಕೆ ಭಯ?

https://newsfirstlive.com/wp-content/uploads/2024/02/protest-10.jpg

Load More