newsfirstkannada.com

ಚುನಾವಣೆ ಹೊತ್ತಲ್ಲಿ ಪೇಚಿಗೆ ಸಿಲುಕಿದ ಮೋದಿ ಸರ್ಕಾರ.. ತೀವ್ರಗೊಂಡ ರೈತರ ಹೋರಾಟ, ದೆಹಲಿಯಲ್ಲಿ ಏನಾಗುತ್ತೆ?

Share :

Published February 21, 2024 at 7:22am

  ಕೇಂದ್ರ ಸರ್ಕಾರ ನೀಡಿದ್ದ 3 ಬೆಳೆಗಳಿಗೆ 5 ವರ್ಷಗಳ ಎಂಎಸ್​ಪಿ ತಿರಸ್ಕಾರ

  ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್​ನ ರಾಹುಲ್ ಗಾಂಧಿ, ಖರ್ಗೆ ವಾಗ್ದಾಳಿ

  ಸಾಲಮನ್ನಾ ಸೇರಿ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸಬೇಕು

ರೈತರು ಕೈಗೊಂಡಿರೋ ದಿಲ್ಲಿ ಚಲೋ ಮತ್ತಷ್ಟು ತೀವ್ರವಾಗೋ ಲಕ್ಷಣಗಳು ಕಾಣ್ತಿವೆ. ಇಂದಿನಿಂದ ಹೋರಾಟ ತೀವ್ರಗೊಳಿಸಲು ಮುಂದಾಗಿವೆ. ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್​​ನೆಟ್​​​ ಸ್ಥಗಿತಗೊಂಡಿದೆ. ಇತ್ತ ರೈತರ ವಿಚಾರದಲ್ಲಿ ಕಾಂಗ್ರೆಸ್​​ನಲ್ಲೇ ದ್ವಂದ್ವ ನಿಲುವು ವ್ಯಕ್ತವಾಗಿದೆ.

ಫೆಬ್ರವರಿ 13ರಿಂದ ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ರಣಕಹಳೆ ಜೋರಾಗ್ತಿದೆ. ಸುಮಾರು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಿದ್ದಾವೆ.

ಕೇಂದ್ರದ ‘ಎಂಎಸ್​ಪಿ’ ಪ್ರಸ್ತಾಪ ತಿರಸ್ಕಾರ.. ಮಾತುಕತೆ ವಿಫಲ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತ ನಾಯಕರ ಮನವೊಲಿಸಲು ಕೇಂದ್ರ ಸರ್ಕಾರ ಕಸರತ್ತು ನಡೆಸ್ತಿದ್ದು 4 ಸುತ್ತಿನ ಮಾತುಕತೆ ವಿಫಲ ಆಗಿದೆ. ಕೇಂದ್ರ ಸರ್ಕಾರ ನೀಡಿದ್ದ 3 ಬೆಳೆಗಳಿಗೆ 5 ವರ್ಷಗಳ ಎಂಎಸ್​ಪಿ ಪ್ರಸ್ತಾಪವನ್ನು ರೈತ ನಾಯಕರು ತಿರಸ್ಕರಿಸಿದ್ದಾರೆ. ಈ ಸಂಬಂಧ ಸುಗ್ರೀವಾಜ್ಞೆಗೆ ಪಟ್ಟು ಹಿಡಿದಿವೆ ರೈತ ನಾಯಕರು ನಾಳೆಯಿಂದ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.

ರೈತರಿಗೆ ಎಂಎಸ್​ಪಿ ನೀಡದೇ ಭಾರತರತ್ನ ಎಂ.ಎಸ್​.ಸ್ವಾಮಿನಾಥನ್​​ರನ್ನ ಮೋದಿ ಸರ್ಕಾರ ಅವಮಾನಿಸುತ್ತಿದೆ ಅಂತ ಟ್ವೀಟ್​ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.. ಮತ್ತೊಂದೆಡೆ ಪ್ರಧಾನಿ ಮೋದಿ ಗ್ಯಾರಂಟಿ ರೈತರಿಗಲ್ಲ, ಶ್ರೀಮಂತ ಸ್ನೇಹಿತರಿಗೆ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ಇದೇ ಎಂಎಸ್​ಪಿ ಖಾತರಿಪರಿಸುವ ಕಾನೂನನ್ನು ಜಾರಿಗೆ ತರುವುದಾಗಿ ದೇಶದ ರೈತರಿಗೆ ಭರವಸೆ ನೀಡಿದ್ದಾರೆ.

ಎಂಎಸ್​ಪಿ ದೇಶದ ಆರ್ಥಿಕತೆಗೆ ಪೆಟ್ಟು ಎಂದ ಪಿತ್ರೋಡಾ!

ಒಂದ್ಕಡೆ ಕಾಂಗ್ರೆಸ್ ಹೈಕಮಾಂಡ್ ಎಂಎಸ್​​ಪಿ ಕಾನೂನು ಗ್ಯಾರಂಟಿ ಕೊಡುವ ಭರವಸೆ ನೀಡ್ತಿದ್ರೆ ಮತ್ತೊಂದೆಡೆ ಕಾಂಗ್ರೆಸ್​ ವಕ್ತಾರ ಸ್ಯಾಮ್ ಪಿತ್ರೋಡಾ ಕನಿಷ್ಠ ಬೆಂಬಲ ಬೆಲೆ ಆರ್ಥಿಕತೆ ಕೆಟ್ಟದ್ದು ಅಂತ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಎಂಎಸ್​ಪಿಗೆ ಕಾನೂನು ಗ್ಯಾರಂಟಿ ನೀಡುವಲ್ಲಿ ಕಾಂಗ್ರೆಸ್ಸಿಗರಲ್ಲೇ ಗೊಂದಲ ಮೂಡಿಸುವಂತಿದೆ.

‘ಮಾತುಕತೆ ವಿಫಲ ಆಗಲು ಪಂಜಾಬ್ ಸಿಎಂ ಕಾರಣ’

ರೈತರು ಹಾಗೂ ಕೇಂದ್ರದ ಮಧ್ಯೆ ಮಾತುಕತೆ ವಿಫಲವಾಗಲು ಪಂಜಾಬ್ ಸಿಎಂ ಭಗವಂತ್ ಮಾನ್ ಕಾರಣ ಅಂತ ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖರ್ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಜಾಖರ್, ಸಿಎಂ ಭಗವಂತ್ ಮಾನ್ ರೈತರ ದಾರಿ ತಪ್ಪಿಸ್ತಿದ್ದಾರೆ, ರೈತರ ಪರ ವಕೀಲರಂತೆ ಕಾರ್ಯನಿರ್ವಹಿಸ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೊಟ್ಟ ಭರವಸೆಯಂತೆ ಸಾಲಮನ್ನಾ ಸೇರಿ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸಬೇಕು ಅನ್ನೋದು ರೈತ ಮುಖಂಡರ ವಾದ ಆಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಮೋದಿ ಸರ್ಕಾರಕ್ಕೆ ಪೇಚಿಗೆ ಸಿಲುಕಿಸಿದ್ದು ರೈತರ ಬೇಡಿಕೆಗಳಿಗೆ ಮಣಿಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣೆ ಹೊತ್ತಲ್ಲಿ ಪೇಚಿಗೆ ಸಿಲುಕಿದ ಮೋದಿ ಸರ್ಕಾರ.. ತೀವ್ರಗೊಂಡ ರೈತರ ಹೋರಾಟ, ದೆಹಲಿಯಲ್ಲಿ ಏನಾಗುತ್ತೆ?

https://newsfirstlive.com/wp-content/uploads/2024/02/FARMERS_PROTEST_1-1.jpg

Load More