newsfirstkannada.com

ಕೇಂದ್ರದ ಪ್ರಸ್ತಾಪಕ್ಕೆ ಸೊಪ್ಪು ಹಾಕದ ಅನ್ನದಾತರು; ಮತ್ತೆ ಮುರಿದು ಬಿದ್ದ ಮಾತುಕತೆ..!

Share :

Published February 20, 2024 at 7:52am

Update February 20, 2024 at 7:53am

  ಕೇಂದ್ರ-ರೈತರ ಮಾತುಕತೆ ವಿಫಲ, ಮುಂದುವರೆದ ಹೋರಾಟ

  ಕೇಂದ್ರ ಸರ್ಕಾರದ ಆಫರ್ ತಿರಸ್ಕರಿಸಿದ ಅನ್ನದಾತರು

  ನಾಳೆಯಿಂದ ‘ದೆಹಲಿ ಚಲೋ’ ಮುಂದುವರೆಸಲು ತೀರ್ಮಾನ

ಮಳೆ ಬಂದು ಮರೆಯಾಯ್ತು ಅನ್ನೋಹಾಗೆ ದೇಹಲಿಯ ಅನ್ನದಾತರ ಹೋರಾಟ ತಣ್ಣಗಾಯ್ತು ಅನ್ನೋ ಹೊತ್ತಲ್ಲೇ ಮತ್ತೆ ಹೋರಾಟದ ಕಿಚ್ಚು ಹೊತ್ತಿ ಉರಿಯುವ ಆತಂಕ ಮೂಡಿದೆ. 4ನೇ ಸುತ್ತಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಮತ್ತೆ ದೆಹಲಿಯಲ್ಲಿ ಹೋರಾಟದ ಕಿಚ್ಚು ಹೊತ್ತಿಸಲು ಅನ್ನದಾತರು ನಾಳೆ ಮಹೂರ್ತ ಫಿಕ್ಸ್​ ಮಾಡಿದ್ದಾರೆ.

ಮುರಿದು ಬಿದ್ದ ಮಾತುಕತೆ.. ಮುಂದುವರೆದ ಹೋರಾಟ
ಕನಿಷ್ಠ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ ಅಂಗಳದಲ್ಲಿ ಬೀಡು ಬಿಟ್ಟಿರೋ ಅನ್ನದಾತರ ಹೋರಾಟ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದೆ.. ಕಳೆದ ಭಾನುವಾರ ನಡೆದ ಮಾತುಕತೆ ವಿಫಲವಾದ ಬೆನ್ನಲ್ಲೇ ರಾಷ್ಟರಾಜಧಾನಿಯಲ್ಲಿ ರೈತರ ಪ್ರತಿಭಟನಾ ಕಹಳೆ ಮತ್ತೆ ಮೊಳಗತೊಡಗಿದೆ.. ಚಂಡೀಗಡದಲ್ಲಿ ಭಾನುವಾರ ತಡರಾತ್ರಿವರೆಗೂ ನಡೆದ 4ನೇ ಸುತ್ತಿನ ಸುದೀರ್ಘ ಮಾತುಕತೆಯಲ್ಲಿ ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಲ ಪ್ರಸ್ತಾಪಗಳನ್ನು ಮುಂದಿಟ್ಟಿತ್ತು. ಆದರೆ ಕೇಂದ್ರ ಸರ್ಕಾರದ ಅನ್ನದಾತರು ಮುಂದಿಟ್ಟ ಬೇಡಿಕೆಗಳಿಗೆ ಸೂಕ್ತ ಉತ್ತರ ಸಿಗದ ಕಾರಣ ಮತ್ತೆ ಹೋರಾಟ ಮುದುವರೆಸಲು ರೈತರು ಮುಂದಾಗಿದ್ದಾರೆ.

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಸಂಬಂಧಿತ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿರುವ ರೈತರು ನಾಳೆಯಿಂದ ದೆಹಲಿ ಚಲೋ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಪ್ರತಿಭಟನಾ ನಿರತ ರೈತರು ಸರ್ಕಾರದ ಪ್ರಸ್ತಾವನೆಗಳನ್ನು ತಿರಸ್ಕರಿಸಿರುವುದರಿಂದ ದೆಹಲಿಯ ಸುತ್ತಲಿನ ಗಡಿಗಳಲ್ಲಿ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯಿದೆ.

ಶಂಭು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ಈ ಪ್ರಸ್ತಾಪವು ನಮಗೆ ಸ್ವೀಕಾರಾರ್ಹವಲ್ಲ. ಪ್ರತಿಭಟನಾನಿರತ ರೈತರು ನಾಳೆಯಿಂದ ಶಾಂತಿಯುತ ರೀತಿಯಲ್ಲಿ ದೆಹಲಿ ಕಡೆಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

ಒಟ್ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರು ಹಚ್ಚಿದ ಪ್ರತಿಭಟನಾ ಕಿಚ್ಚು ತಣ್ಣಗಾಯ್ತು ಅನ್ನೋ ಹೊತ್ತಲ್ಲೇ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಕುರುಹು ನೀಡಿದೆ.. ರೈತರ ಬೇಡಿಕೆಗಳಿಗೆ ಸರ್ಕಾರ ಮಣಿಯದಿದ್ರೆ ಫೆಬ್ರವರಿ 21ರಿಂದ ಮತ್ತೆ ಆರಂಭವಾಗುವ ಹೋರಾಟ ಮತ್ತಿನ್ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋ ಆತಂಕವೂ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರದ ಪ್ರಸ್ತಾಪಕ್ಕೆ ಸೊಪ್ಪು ಹಾಕದ ಅನ್ನದಾತರು; ಮತ್ತೆ ಮುರಿದು ಬಿದ್ದ ಮಾತುಕತೆ..!

https://newsfirstlive.com/wp-content/uploads/2024/02/farmers-1.jpg

Load More