newsfirstkannada.com

ಹಿಂಸಾಚಾರಕ್ಕೆ ತಿರುಗಿದ ರೈತರ ಹೋರಾಟ.. ಹಿಂದೇಟು ಹಾಕೋ ಮಾತೇ ಇಲ್ಲ ಎಂದ ಅನ್ನದಾತರು!

Share :

Published February 23, 2024 at 6:23am

    ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ ಸಿಎಂ ಆಕ್ರೋಶ

    ಎರಡು ದಿನ ಪ್ರತಿಭಟನೆ ಸ್ಥಗಿತಗೊಳಿಸಿದ ಅನ್ನದಾತರು

    ರೈತನ ಸಾವಿಗೆ ಪೊಲೀಸರೇ ಕಾರಣ ಎಂದ ಎಎಪಿ!

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ನಿನ್ನೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವ ರೈತ ಸಾವನ್ನಪ್ಪಿದ್ದು ಪೊಲೀಸರ ದಾಳಿಯಿಂದ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಯುವ ರೈತನ ಸಾವಿನ ಬೆನ್ನಲ್ಲೇ ರೈತ ಮುಖಂಡರು 2 ದಿನ ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಚಲೋ ನಡೆಸ್ತಿರುವ ರೈತರು ಹಾಗೂ ಕೇಂದ್ರದ ನಡುವೆ ಹಗ್ಗ-ಜಗ್ಗಾಟ ಮುಂದುವರಿದಿದೆ.

ಹರಿಯಾಣದ ಖಾನೌರಿ ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವ ರೈತ 23 ವರ್ಷದ ಶುಭಕರನ್ ಸಿಂಗ್​​​ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ. ಮೃತ ಯುವಕನ ತಲೆಗೆ ಬುಲೆಟ್ ತಗುಲಿದೆ ಅಂತ ಪ್ರಾಥಮಿಕ ವರದಿಗಳು ಹೇಳಿದ್ದು ಪೊಲೀಸರ ದಾಳಿಯಿಂದಲೇ ಆತ ಮೃತಪಟ್ಟಿದ್ದಾನೆ ಅಂತ ರೈತ ಮುಖಂಡರು ಆರೋಪಿಸಿದ್ದಾರೆ. ರೈತನ ಸಾವಿನ ಬೆನ್ನಲ್ಲೇ ಎರಡು ದಿನಗಳ ಕಾಲ ದೆಹಲಿ ಚಲೋವನ್ನು ಸ್ಥಗಿತಗೊಳಿಸಿದ್ದಾರೆ. ರೈತರು ಹಾಗೂ ಪೊಲೀಸರ ನಡುವೆ ತೀವ್ರ ಮುಖಾಮುಖಿ ನಡೆದಿತ್ತು.

ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವ ರೈತ ಶುಭಕರನ್ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಮೃತ ಶುಭಕರನ್ ಹರಿಯಾಣದ ಬಟಿಂಡಾದ ಬಲೋಹ್ ಗ್ರಾಮದ ನಿವಾಸಿ ಎನ್ನಲಾಗಿದೆ. ಯುವ ರೈತನ ಸಾವಿಗೆ ಅಖಿಲ ಭಾರತ ಕಿಸಾನ್ ಮಜ್ದೂರ್ ಸಭಾ ಖಂಡಿಸಿದೆ. ಪ್ರತಿಭಟನೆ ನಡೆಯುವಾಗ ಪೊಲೀಸರು ರಬ್ಬರ್ ಗುಂಡು ಹಾರಿಸಿದ್ರು, ಇದರಿಂದ ಹಲವರು ಗಾಯಗೊಂಡು, ಇನ್ನೂ 6 ಮಂದಿ ಸ್ಥಿತಿ ಗಂಭೀರವಾಗಿದೆ. ಗುಂಡು ಹಾರಿಸಲು ಆದೇಶಿಸಿದ ಪೊಲೀಸರ ಅಧಿಕಾರಿ ಬಂಧನ ಆಗಬೇಕು ಅಂತ ರೈತರು ಆಗ್ರಹಿಸಿದ್ದಾರೆ. ಇತ್ತ ರೈತ ಮುಖಂಡರ ಆರೋಪಗಳನ್ನು ಹರಿಯಾಣ ಪೊಲೀಸರು ತಳ್ಳಿಹಾಕಿದ್ದಾರೆ. ಪ್ರತಿಭಟನೆಯಲ್ಲಿ ಯಾವುದೇ ರೈತ ಸಾವನ್ನಪ್ಪಿಲ್ಲ. ಇದು ಕೇವಲ ವದಂತಿಯಾಗಿದೆ. ಖಾನೌರಿ ಗಡಿಯಲ್ಲಿ ಇಬ್ಬರು ಪೊಲೀಸರು ಹಾಗೂ ಓರ್ವ ಪ್ರತಿಭಟನಾಕಾರ ಗಾಯಗೊಂಡಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಹೇಳಿದ್ದಾರೆ.

ಇನ್ನು ಯುವ ರೈತನ ಸಾವಿಗೆ ಕಾರಣರಾದ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿ ಕ್ರಮ ಕೈಗೊಳ್ಳಲಾಗುವುದು ಅಂತ ಪಂಜಾಬ್ ಸಿಎಂ ಭಗವಂತ್ ಮನ್ ತಿಳಿಸಿದ್ದಾರೆ. ಇದೇ ಕೇಂದ್ರದ ವಿರುದ್ಧ ಕಿಡಿಕಾರಿದ ಮನ್ ಮೃತ ಶುಭಕರನ್ ಪ್ರಚಾರಕ್ಕಾಗಿ ಆತ ಬಂದಿರಲಿಲ್ಲ. ತಮ್ಮ ಕೃಷಿಗೆ ಸೂಕ್ತ ಬೆಲೆ ಕೇಳಲು ಬಂದಿದ್ದ. ಪಂಜಾಬ್ ಸರ್ಕಾರ ಸದಾ ರೈತರೊಂದಿಗೆ ನಿಂತಿದೆ. ಅಹಂಕಾರ ಬದಿಗಿಟ್ಟು ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನ ಕೇಳಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ಫೆಬ್ರವರಿ 16ರಂದು ಶಂಭು ಗಡಿಯಲ್ಲಿ 79 ವರ್ಷದ ರೈತ ಹೃದಯಾಘಾತದಿಂದ ಮೃತಪಟ್ಟಿದ್ದರು. ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದರು. ಇದೀಗ ಯುವ ರೈತ ಸಾವನ್ನಪ್ಪಿದ್ದು ಮತ್ತಷ್ಟು ಸಾವು-ನೋವು ಸಂಭವಿಸುವ ಮುನ್ನ ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂಸಾಚಾರಕ್ಕೆ ತಿರುಗಿದ ರೈತರ ಹೋರಾಟ.. ಹಿಂದೇಟು ಹಾಕೋ ಮಾತೇ ಇಲ್ಲ ಎಂದ ಅನ್ನದಾತರು!

https://newsfirstlive.com/wp-content/uploads/2024/02/protiest.jpg

Load More