newsfirstkannada.com

ಕಾವೇರಿ ಹೋರಾಟಕ್ಕೆ ರೈತ ಸಂಘ ಬೆಂಬಲ; ಇಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್‌ಗೆ ಕರೆ

Share :

Published August 22, 2023 at 7:13am

    ಇಂದು ಮತ್ತಷ್ಟು ಕಾವೇರಲಿದೆ ಕಾವೇರಿ ಕದನ

    ಮಂಡ್ಯದ ಇಂಡುವಾಳು ಬಳಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ

    ನೀರಾವರಿ ಸಮಸ್ಯೆ ನಿವಾರಣೆಗೆ ಸರ್ವಪಕ್ಷಗಳ ಸಭೆ

ರಾಜ್ಯದಲ್ಲಿ ಕಾವೇರಿ ಕದನ ದಿನ ದಿನಕ್ಕೂ ಕಾವೇರುತ್ತಿದೆ. ತಮಿಳುನಾಡಿಗೆ ನೀರು ಹರಿಸುತ್ತಿರೋದಕ್ಕೆ ಭಾರೀ ಆಕ್ರೋಶ ಭುಗಿಲೆದ್ದಿದೆ. ನಿನ್ನೆ ಮಂಡ್ಯದಲ್ಲಿ ಹೋರಾಟದ ರಣ ಕಹಳೆ ಮೊಳಗಿತ್ತು. ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದ್ವು. ಈ ಮಧ್ಯೆ ಇವತ್ತು ರೈತ ಸಂಘ ಕೂಡ ಪ್ರತಿಭಟನೆಗೆ ಧುಮುಕಲಿದೆ.

ಅನ್ನದಾತರ ಕಾವೇರಿಯ ಕಿಚ್ಚು ಧಗಧಗಿಸ್ತಿದೆ. ನಿನ್ನೆ ಮಂಡ್ಯದಲ್ಲಿ ಬೀದಿಗಿಳಿದ ರೈತರು ಪ್ರತಿಭಟನೆಯ ಕಹಳೆ ಮೊಳಗಿಸಿದ್ದಾರೆ. ಧಿಕ್ಕಾರ ಧಿಕ್ಕಾರ ರೈತರ ಕಿವಿಗೆ ಹೂವಿಟ್ಟ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಅಂತಾ ಘೋಷಣೆಗಳನ್ನ ಮೊಳಗಿಸಿದ್ದಾರೆ. ಅನ್ಯಾಯ ಅನ್ಯಾಯ ಅಂತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಒಂದು ಕಡೆ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಅನ್ನದಾತರು ಮುಗಿಬಿದ್ದಿದ್ರೆ. ಕಮಲ ನಾಯಕರು ಕೂಡ ರೈತರಿಗೆ ಸಾಥ್​​ ಕೊಟ್ಟಿದ್ದಾರೆ. ಮೈಸೂರು ಬೆಂಗಳೂರು ಹಳೆ ಹೆದ್ದಾರಿಗೆ ನುಗ್ಗಿ ಆಕ್ರೋಶ ಹೊರಹಾಕಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ನೇತೃತ್ವದಲ್ಲಿ ಪ್ರತಿಭಟಿಸಿದ ಕೇಸರಿ ಪಡೆ ಕಾವೇರಿ ನಮ್ಮದು ಅಂತ ಬಾಯಿ ಬಾಯಿ ಬಡ್ಕೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಕಾವೇರಿ ಹೋರಾಟಕ್ಕೆ ಇಂದು ರೈತ ಸಂಘ ಎಂಟ್ರಿ

ನಿನ್ನೆ ಸಂಸದೆ ಸುಮಲತಾ ನೇತೃತ್ವದಲ್ಲಿ ನಡೆದ ಕಾವೇರಿ ಹೋರಾಟಕ್ಕೆ ರೈತ ಸಂಘ ಬೆಂಬಲ ಸೂಚಿಸಿರಲಿಲ್ಲ. ಆದರೆ ಇವತ್ತು ರೈತ ಸಂಘ ಕಾವೇರಿ ಹೋರಾಟಕ್ಕೆ ಧುಮುಕಲಿದೆ. ಬೀದಿಗಳಿದು ಪ್ರತಿಭಟನೆ ಕಹಳೆ ಮೊಳಗಿಸಲು ಸಜ್ಜಾಗಿದೆ.

ಇಂದು ರೈತಸಂಘ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್‌ಗೆ ಕರೆ ಕೊಟ್ಟಿದೆ. ಎಕ್ಸ್​ಪ್ರೆಸ್​​ ವೇನಲ್ಲೂ ವಾಹನ ಸಂಚಾರ ತಡೆದು ಪ್ರತಿಭಟಿಸಲು ಪ್ಲಾನ್​​ ಮಾಡಿಕೊಂಡಿದೆ. ಮಂಡ್ಯದ ಇಂಡುವಾಳು ಬಳಿ ಬೆಳಗ್ಗೆ 11 ಗಂಟೆಗೆ ರೈತ ಸಂಘ ಪ್ರತಿಭಟನೆ ನಡೆಸಲಿದೆ. ಟ್ರ್ಯಾಕ್ಟರ್, ಎತ್ತಿನಗಾಡಿ ಹಾಗೂ ಜಾನುವಾರುಗಳ ಜೊತೆ ಹೆದ್ದಾರಿಗೆ ರೈತರು ಹೆದ್ದಾರಿಗೆ ಇಳಿಯಲಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಬೃಹತ್ ಪ್ರತಿಭಟನೆಗೆ ಪ್ಲಾನ್​​ ಮಾಡಿದೆ. ರೈತರ ಹಿತ ಕಾಪಾಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆಂದು ಆಕ್ರೋಶ ಹೊರಹಾಕಲಿದ್ದಾರೆ. ಕೂಡಲೇ ತಮಿಳುನಾಡಿಗೆ ನೀರು ಹರಿಸೋದನ್ನ ನಿಲ್ಲಿಸುವಂತೆ ಆಗ್ರಹಿಸಲಿದೆ.

ಕಾವೇರಿ ಸಮಸ್ಯೆ ಬಗೆಹರಿಸಲು ನಾಳೆ ಸರ್ವಪಕ್ಷಗಳ ಸಭೆ

ಸದ್ಯ ರಾಜ್ಯದಲ್ಲಿ ಹೊತ್ತಿಕೊಂಡಿರೋ ಕಾವೇರಿ ಕದನದಿಂದ ಸರ್ಕಾರಕ್ಕೆ ರೈತರ ಹೋರಾಟದ ಬಿಸಿ ತಟ್ಟಿದೆ. ಕೊನೆಗೂ ಎಚ್ಚೆತ್ತಿರೋ ಸರ್ಕಾರ ನೀರಾವರಿ ಸಮಸ್ಯೆ ನಿವಾರಣೆಗೆ ಸರ್ವಪಕ್ಷಗಳ ಸಭೆ ಕರೆದಿದೆ. ಕಾವೇರಿ, ಮಹದಾಯಿ ವಿಚಾರವಾಗಿ ಚರ್ಚಿಸಲು ನಾಳೆ ಸರ್ವಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರಿಂದ ಸರ್ಕಾರ ನೀರಿನ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಪಡೆಯಲಿದೆ.

ಒಟ್ಟಾರೆ ದಿನ ಕಳೆದಂತೆಲ್ಲಾ ರಾಜ್ಯದಲ್ಲಿ ಕಾವೇರಿಯ ಕಿಚ್ಚು ಧಗಧಗಿಸುತ್ತಿದೆ. ಸರ್ಕಾರಕ್ಕೆ ರೈತರ ಹೋರಾಟದ ಬಿಸಿ ತಟ್ಟುತ್ತಿದೆ. ಈ ಮಧ್ಯೆ ನಾಳೆ ವಿಪಕ್ಷಗಳ ಸಭೆ ನಡೆಯಲಿದೆ. ಸರ್ಕಾರ ಕಾವೇರಿ ಕದನಕ್ಕೆ ಹೇಗೆ ಮುಕ್ತಿ ನೀಡುತ್ತೆ ಅನ್ನೋದೆ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ಹೋರಾಟಕ್ಕೆ ರೈತ ಸಂಘ ಬೆಂಬಲ; ಇಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್‌ಗೆ ಕರೆ

https://newsfirstlive.com/wp-content/uploads/2023/08/Kaveri-1.jpg

Load More